For the best experience, open
https://m.newskannada.com
on your mobile browser.
Advertisement

ಸಿಎಎ ಅನುಷ್ಠಾನದಿಂದ ಯಾರೂ ಪೌರತ್ವ ಕಳೆದುಕೊಳ್ಳುದಿಲ್ಲ: ರಾಜನಾಥ ಸಿಂಗ್

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಅನುಷ್ಠಾನದಿಂದ ಯಾವೊಬ್ಬ ಭಾರತೀಯನು ಪೌರತ್ವ ಕಳೆದುಕೊಳ್ಳುವುದಿಲ್ಲ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ಗೊಂದಲ ಮೂಡಿಸುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು.
04:19 PM Apr 08, 2024 IST | Ashitha S
ಸಿಎಎ ಅನುಷ್ಠಾನದಿಂದ ಯಾರೂ ಪೌರತ್ವ ಕಳೆದುಕೊಳ್ಳುದಿಲ್ಲ  ರಾಜನಾಥ ಸಿಂಗ್

ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಅನುಷ್ಠಾನದಿಂದ ಯಾವೊಬ್ಬ ಭಾರತೀಯನು ಪೌರತ್ವ ಕಳೆದುಕೊಳ್ಳುವುದಿಲ್ಲ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ಗೊಂದಲ ಮೂಡಿಸುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು.

Advertisement

ಪಕ್ಷದ ಅಭ್ಯರ್ಥಿ ಪರ ತಮಿಳುನಾಡಿನ ನಾಮಕ್ಕಲ್ ಲೋಕಸಭಾಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ ಅವರು, ರಾಮಮಂದಿರ ಸೇರಿದಂತೆ ಕಳೆದ ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಬಿಜೆಪಿ ಜಾರಿಗೆ ತಂದಿದೆ ಎಂದರು.

'ಸಿಎಎ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದೆವು. ಇದೀಗ ಜಾರಿ ಮಾಡಿದ್ದೇವೆ. ಯಾವುದೇ ಧರ್ಮದ ಹೆಣ್ಣು ಮಗಳು ನಮ್ಮ ಮನೆಯ ಹೆಣ್ಣು ಮಗಳಿದ್ದಂತೆ. ಅವಳಿಗಾಗುವ ನೋವು ನಮಗೂ ನೋವುಂಟು ಮಾಡುತ್ತದೆ. ಅದಕ್ಕಾಗಿಯೇ ತ್ರಿವಳಿ ತಲಾಖ್‌ ಅನ್ನು ರದ್ದುಗೊಳಿಸಿದೆವು. ಪೌರತ್ವ ಕಾಯ್ದೆ ಕುರಿತಂತೆ ಕಾಂಗ್ರೆಸ್‌-ಡಿಎಂಕೆ ಗೊಂದಲ ಸೃಷ್ಟಿಸುತ್ತಿವೆ. ಸಿಎಎಯಿಂದ ದೇಶದ ಪ್ರಜೆಯೊಬ್ಬ ಆತ ಹಿಂದು, ಮುಸ್ಲಿಂ, ಕ್ರೈಸ್ತ, ಜೈನ ಯಾವುದೇ ಆಗಿರಲಿ, ಪೌರತ್ವ ಕಳೆದುಕೊಳ್ಳುವುದಿಲ್ಲ. ಆದರೆ ಡಿಎಂಕೆ ಮತ್ತು ಕಾಂಗ್ರೆಸ್ ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿದೆ ಅಷ್ಟೆ.

Advertisement

'ಭಾರತವು ಇನ್ನು ಮುಂದೆ ದುರ್ಬಲ ರಾಷ್ಟ್ರವಲ್ಲ. ದೇಶದ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮೇಲೆ ನಮಗೆ ಬಲವಾದ ವಿಶ್ವಾಸವಿದೆ. ಯಾರಾದರೂ ಕಣ್ಣು ರೆಪ್ಪೆ ಅಲ್ಲಾಡಿಸಿದರೆ, ನಮ್ಮ ಸೇನೆಯು ಅವರಿಗೆ ತಕ್ಕ ಉತ್ತರವನ್ನು ನೀಡಲು ಸಿದ್ಧವಾಗಿದೆ' ಎಂದು ಹೇಳಿದರು.

https://twitter.com/i/broadcasts/1yoKMwMNaXwJQ

Advertisement
Tags :
Advertisement