For the best experience, open
https://m.newskannada.com
on your mobile browser.
Advertisement

ಹೆಸರಾಂತ ಯುವ ಸಂಗೀತ ಸಂಯೋಜಕ ಮನೋಜ್ ವಸಿಷ್ಠ ನಿಧನ

ಸುಗಮ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಯುವ ಗಾಯಕ, ಸಂಗೀತ ಸಂಯೋಜಕ ಮನೋಜ್ ವಸಿಷ್ಠ ಅನಾರೋಗ್ಯದ ಕಾರಣದಿಂದಾಗಿ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಹಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗಿ ಇಂದು ಇಹಲೋಕ ತ್ಯಜಿಸಿದ್ದಾರೆ.
06:53 PM Nov 01, 2023 IST | Gayathri SG
ಹೆಸರಾಂತ ಯುವ ಸಂಗೀತ ಸಂಯೋಜಕ ಮನೋಜ್ ವಸಿಷ್ಠ ನಿಧನ

ಬೆಂಗಳೂರು: ಸುಗಮ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಯುವ ಗಾಯಕ, ಸಂಗೀತ ಸಂಯೋಜಕ ಮನೋಜ್ ವಸಿಷ್ಠ ಅನಾರೋಗ್ಯದ ಕಾರಣದಿಂದಾಗಿ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಹಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗಿ ಇಂದು ಇಹಲೋಕ ತ್ಯಜಿಸಿದ್ದಾರೆ.

Advertisement

ಕನ್ನಡ ಕಿರುತೆರೆಯ ಬಹುತೇಕ ರಿಯಾಲಿಟಿ ಶೋಗಳಲ್ಲಿ ಮನೋಜ್ ಮೆಂಟರ್ ಆಗಿ ಕೆಲಸ ಮಾಡಿದ್ದಾರೆ. ಅದರಲ್ಲೂ ಪ್ರವೀಣ್ ಡಿ ರಾವ್ ಅವರ ಅನೇಕ ಧಾರಾವಾಹಿ ಶೀರ್ಷಿಕೆಗಳಿಗೆ ಮನೋಜ್ ವಸಿಷ್ಠ ಕೆಲಸ ಮಾಡಿದ್ದಾರೆ. ಪತ್ನಿ ಅರುಂಧತಿ ಕೂಡ ಗಾಯಕಿ. ಕನ್ನಡ ಕೋಗಿಲೆ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಅರುಂಧತಿ ಮತ್ತು ಮನೋಜ್ ಒಟ್ಟಿಗೆ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದಾರೆ.

ಅಗಲಿದ ಮನೋಜ್ ಅವರಿಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಶೃದ್ಧಾಂಜಲಿ ಸಲ್ಲಿಸಿದ್ದಾರೆ.

Advertisement

Advertisement
Tags :
Advertisement