ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಗೌತಮ್ ಗಂಭೀರ್ ವಿರುದ್ಧ ಆರೋಪ: ಶ್ರೀಶಾಂತ್‍ಗೆ ನೋಟಿಸ್‍ ಜಾರಿ

ಮಾಜಿ ಆಟಗಾರ ಗೌತಮ್ ಗಂಭೀರ್  ಹಾಗೂ ವೇಗದ ಬೌಲರ್ ಶ್ರೀಶಾಂತ್ ನಡುವಿನ ಗಲಾಟೆ ವಿಚಾರವಾಗಿ ಶ್ರೀಶಾಂತ್‍ಗೆ ನೋಟಿಸ್‍ನ ಬಿಸಿ ತಟ್ಟಿದೆ.
06:59 AM Dec 09, 2023 IST | Ashika S

ಸೂರತ್:  ಮಾಜಿ ಆಟಗಾರ ಗೌತಮ್ ಗಂಭೀರ್  ಹಾಗೂ ವೇಗದ ಬೌಲರ್ ಶ್ರೀಶಾಂತ್ ನಡುವಿನ ಗಲಾಟೆ ವಿಚಾರವಾಗಿ ಶ್ರೀಶಾಂತ್‍ಗೆ ನೋಟಿಸ್‍ನ ಬಿಸಿ ತಟ್ಟಿದೆ.

Advertisement

ಇಂಡಿಯಾ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ನಡುವಿನ ಎಲಿಮಿನೇಟರ್ ಪಂದ್ಯದ ವೇಳೆ ಗೌತಮ್ ಗಂಭೀರ್ ಫಿಕ್ಸರ್ ಎಂದು ಕರೆದಿದ್ದಾರೆ ಎಂದು ಶ್ರೀಶಾಂತ್ ಆರೋಪಿಸಿದ್ದರು.

ಈಗ ಶ್ರೀಶಾಂತ್ ಅವರಿಗೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಕಮಿಷನರ್ ಲೀಗಲ್ ನೋಟಿಸ್ ನೀಡಿದ್ದಾರೆ. ಟಿ20 ಟೂರ್ನಿಯಲ್ಲಿ ಆಡುವ ವೇಳೆ ಒಪ್ಪಂದ ಉಲ್ಲಂಘಿಸಿದ್ದಕ್ಕಾಗಿ ಶ್ರೀಶಾಂತ್ ತಪ್ಪಿತಸ್ಥರು ಎಂದು ನೋಟಿಸ್‍ನಲ್ಲಿ ಹೇಳಲಾಗಿದೆ.

Advertisement

ಇಬ್ಬರ ಗಲಾಟೆ ವಿಚಾರವಾಗಿ ಅಂಪೈರ್‌ಗಳು ತಮ್ಮ ವರದಿಯನ್ನು ಕಳಿಸಿದ್ದು, ಶ್ರೀಶಾಂತ್ ಅವರನ್ನು ಫಿಕ್ಸರ್ ಎಂದು ಕರೆದ ಬಗ್ಗೆ ಅದರಲ್ಲಿ ಮಾಹಿತಿ ಇಲ್ಲ ಎಂದು ತಿಳಿದು ಬಂದಿದೆ.

ಶ್ರೀಶಾಂತ್ ಅವರು ಒಂದೆರಡು ವೀಡಿಯೋಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಗಂಭೀರ್ ಅವರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ.

Advertisement
Tags :
LaetstnewsNewsKannadaಗಲಾಟೆಗೌತಮ್ ಗಂಭೀರ್ನೋಟಿಸ್ಬೌಲರ್ಶ್ರೀಶಾಂತ್
Advertisement
Next Article