For the best experience, open
https://m.newskannada.com
on your mobile browser.
Advertisement

ದುಬೈನಲ್ಲೂ ಯುಪಿಐ ರುಪೇ ಕಾರ್ಡ್​ ಸೇವೆ: ಮೋದಿ ಜತೆ ಐತಿಹಾಸಿಕ ಒಪ್ಪಂದ

ಯುನೈಟೆಡ್‌ ಅರಬ್ ಎಮಿರೇಟ್ಸ್ ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಇನ್ಮುಂದೆ ಅರಬ್ ರಾಷ್ಟ್ರದಲ್ಲೂ ಭಾರತದ ಡಿಜಿಟಲ್ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಹಣಕಾಸಿನ ವಹಿವಾಟು ಮಾಡಬಹುದು. ಅಬುಧಾಬಿ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಈ ಒಪ್ಪಂದಕ್ಕೆ ಸಾಕ್ಷಿಯಾಗಿದ್ದಾರೆ.
10:07 PM Feb 13, 2024 IST | Ashitha S
ದುಬೈನಲ್ಲೂ ಯುಪಿಐ ರುಪೇ ಕಾರ್ಡ್​ ಸೇವೆ  ಮೋದಿ ಜತೆ ಐತಿಹಾಸಿಕ ಒಪ್ಪಂದ

ಅಬುಧಾಬಿ: ಯುನೈಟೆಡ್‌ ಅರಬ್ ಎಮಿರೇಟ್ಸ್ ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಇನ್ಮುಂದೆ ಅರಬ್ ರಾಷ್ಟ್ರದಲ್ಲೂ ಭಾರತದ ಡಿಜಿಟಲ್ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಹಣಕಾಸಿನ ವಹಿವಾಟು ಮಾಡಬಹುದು. ಅಬುಧಾಬಿ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಈ ಒಪ್ಪಂದಕ್ಕೆ ಸಾಕ್ಷಿಯಾಗಿದ್ದಾರೆ.

Advertisement

ಅಬುಧಾಬಿಗೆ ಆಗಮಿಸಿದ ಪ್ರಧಾನಿ ಮೋದಿ ಅವರ ಜೊತೆ UAE ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಇದೇ ವೇಳೆ ಇನ್‌ಸ್ಟಂಟ್ ಪೇಮೆಂಟ್ ಪ್ಲಾಟ್‌ಫಾರ್ಮ್‌ಗಳ ಇಂಟರ್‌ಲಿಂಕ್ ಮಾಡುವ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇನ್ಮುಂದೆ ಭಾರತದ UPI ಮತ್ತು ಯುಎಇಯ IINI ನಡುವೆ ಸುಲಭವಾದ ವಹಿವಾಟು ನಡೆಸಬಹುದು.

ದ್ವಿಪಕ್ಷೀಯ ಮಾತುಕತೆಯ ಬಳಿಕ ಪ್ರಧಾನಿ ಮೋದಿ ಹಾಗೂ UAE ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಅವರು ಡಿಜಿಟಲ್ ರುಪೇ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಸ್ಟಾಕ್ ಆಧರಿಸಿದ ಜಯವಾನ್ ಕಾರ್ಡ್‌ಗೆ ಚಾಲನೆ ನೀಡಿದರು. ಈ UPI ರುಪೇ ಸೇವೆ ಆರಂಭಿಸಿದ್ದಕ್ಕೆ ಮೋದಿ ಅವರು ಯುಎಇ ಅಧ್ಯಕ್ಷರಿಗೆ ಧನ್ಯವಾದ ತಿಳಿಸಿದ್ದಾರೆ.

Advertisement

Advertisement
Tags :
Advertisement