For the best experience, open
https://m.newskannada.com
on your mobile browser.
Advertisement

ಮಿಲಾಗ್ರಿಸ್ ಕಾಲೇಜು ಮಂಗಳೂರಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

ಮಿಲಾಗ್ರಿಸ್ ಕಾಲೇಜು ಮಂಗಳೂರಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ಇನ್ಫೆಂಟ್ ಜೀಸಸ್ ಅ.ಹಿ.ಪ್ರಾ ಶಾಲೆ, ಮೊಡಂಕಾಪುವಿನಲ್ಲಿ ಫೆಬ್ರವರಿ 6, 2024 ರಂದು ನೆರವೇರಿತು.
03:44 PM Feb 07, 2024 IST | Gayathri SG
ಮಿಲಾಗ್ರಿಸ್ ಕಾಲೇಜು ಮಂಗಳೂರಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

ಮಂಗಳೂರು: ಮಿಲಾಗ್ರಿಸ್ ಕಾಲೇಜು ಮಂಗಳೂರಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ಇನ್ಫೆಂಟ್ ಜೀಸಸ್ ಅ.ಹಿ.ಪ್ರಾ ಶಾಲೆ, ಮೊಡಂಕಾಪುವಿನಲ್ಲಿ ಫೆಬ್ರವರಿ 6, 2024 ರಂದು ನೆರವೇರಿತು.

Advertisement

ಇನ್ಫೆಂಟ್ ಜೀಸಸ್ ದೇವಾಲಯದ ಧರ್ಮಗುರುಗಳಾದ ವಂ. ಗು. ವಲೇರಿಯನ್ ಎಸ್ ಡಿಸೋಜ ಕಾರ್ಯಕ್ರಮವನ್ನು ಉದ್ಘಾಟಿಸಿ "ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವ ಜನತೆ" ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ದತೆ ಹಾಗೂ ಪರಿಪೂರ್ಣ ವ್ಯಕ್ತಿತ್ವ ವಿಕಸನದ ಕುರಿತು ಅರಿವು ಮೂಡಿಸಿದರು.

ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ವಂ ಗು ಮೈಕಲ್ ಸಂತುಮಾಯರ್ ಅವರು ಮಾತನಾಡಿ  ಸೇವೆಯ ಕಡೆಗೆ ವಿದ್ಯಾರ್ಥಿಗಳ ಮನಸ್ಸನ್ನು ಒಲಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವಾಗಿದೆ. ಶಿಕ್ಷಣದ ಉದ್ದೇಶವೂ ಇದೇ ಆಗಬೇಕು. ಸೇವೆ ಎನ್ನುವುದು ಜೀವನದ ಪ್ರಮುಖ ಉದ್ದೇಶವಾಗಬೇಕು. ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ನಂತರವೂ ಸೇವೆ, ಅನುಕಂಪನದ ಸಾರ್ಥಕ ಜೀವಿಯಾಗಬೇಕು ಎಂದು ತಿಳಿ ಹೇಳಿದರು. ಪುತ್ತೂರಿನ ದಂತ ವೈದ್ಯರಾದ ಜೋಶುವಾ ಮಸ್ಕಿರೆನ್ಹಸ್ ಶೀಬಿರಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.

Advertisement

ಇನ್ಫೆಂಟ್ ಜೀಸಸ್ ದೇವಾಲಯದ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಸುನಿಲ್ ವೇಗಸ್, ಬಂಟ್ವಾಳ,ಕೈಕಂಬ, ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರತಿನಿಧಿಗಳಾದ ಕು ಸೌಮ್ಯ ಮತ್ತು ರಾಕೇಶ್  ಉಪಸ್ಥಿತರಿದ್ದರು. ರಾ. ಸೇ.ಯೋಜನೆಯ ಯೋಜನಾಧಕಾರಿ ಕು ಶ್ರಾವ್ಯ ಏನ್ ಸ್ವಾಗತಿಸಿದರು. ಶಿಬಿರದ ನಾಯಕಿ ಸುಶ್ಮಿತಾ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಉಪನಾಯಕ ಜೈಸನ್ ಡಿಸೋಜ ನಿರೂಪಿಸಿದರು. ಈ ವಾರ್ಷಿಕ ಶಿಬಿರದಲ್ಲಿ 55 ವಿದ್ಯಾರ್ಥಿಗಳು ಭಾಗವಾವಹಿಸಿದ್ದಾರೆ.

Advertisement
Tags :
Advertisement