ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಾಯ್‌ಫ್ರೆಂಡ್‌ ಮೊಬೈಲ್‌ನಲ್ಲಿ 13 ಸಾವಿರ ಯುವತಿಯರ ನಗ್ನ ಫೋಟೋ ಪತ್ತೆ

ಬೆಳ್ಳಂದೂರಲ್ಲಿರುವ ಬಿಪಿಒ ಕಂಪನಿಯೊಂದರ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವ 22 ಪ್ರಾಯದ ಯುವತಿ ತಾವು ಸಂಬಂಧ ಹೊಂದಿದ್ದ ಸಹೋದ್ಯೋಗಿಯ ಫೋನ್ ಗ್ಯಾಲರಿಯಲ್ಲಿ ತನ್ನದೂ ಸೇರಿದಂತೆ ತನ್ನದೇ ಕಂಪನಿಯ ಮಹಿಳಾ ಸಹೋದ್ಯೋಗಿಗಳು ಹಾಗೂ ಇತರೆ ಮಹಿಳೆಯರದ್ದೂ ಸೇರಿದಂತೆ 13,000 ನಗ್ನ ಫೋಟೋಗಳನ್ನು ನೋಡಿ ಶಾಕ್‌ಗೆ ಒಳಗಾಗಿದ್ದಾಳೆ.
09:00 PM Nov 29, 2023 IST | Ashika S

ಬೆಂಗಳೂರು: ಬೆಳ್ಳಂದೂರಲ್ಲಿರುವ ಬಿಪಿಒ ಕಂಪನಿಯೊಂದರ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವ 22 ಪ್ರಾಯದ ಯುವತಿ ತಾವು ಸಂಬಂಧ ಹೊಂದಿದ್ದ ಸಹೋದ್ಯೋಗಿಯ ಫೋನ್ ಗ್ಯಾಲರಿಯಲ್ಲಿ ತನ್ನದೂ ಸೇರಿದಂತೆ ತನ್ನದೇ ಕಂಪನಿಯ ಮಹಿಳಾ ಸಹೋದ್ಯೋಗಿಗಳು ಹಾಗೂ ಇತರೆ ಮಹಿಳೆಯರದ್ದೂ ಸೇರಿದಂತೆ 13,000 ನಗ್ನ ಫೋಟೋಗಳನ್ನು ನೋಡಿ ಶಾಕ್‌ಗೆ ಒಳಗಾಗಿದ್ದಾಳೆ.

Advertisement

ಬೆಳ್ಳಂದೂರಿನಲ್ಲಿರುವ ಬಿಪಿಒದ ಕಾನೂನು ಮುಖ್ಯಸ್ಥೆ ಅರ್ಚನಾ (ಹೆಸರು ಬದಲಾಯಿಸಲಾಗಿದೆ) ಅವರು ಆದಿತ್ಯ ಸಂತೋಷ್ (25) ವಿರುದ್ಧ ನವೆಂಬರ್ 23 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತೋಷ್ ಮತ್ತುಅರ್ಚನಾ ನಾಲ್ಕು ತಿಂಗಳಿನಿಂದ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ.

ಇವರು ತಮ್ಮ ಆತ್ಮೀಯ ಕ್ಷಣಗಳನ್ನು ಫೋಟೋ ಹಾಗೂ ವಿಡಿಯೋ ತೆಗೆದುಕೊಂಡು ಇಟ್ಟುಕೊಂಡಿದ್ದರು. ಆದರೆ, ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಮಾಡಿದ ತನ್ವಿ ತಮ್ಮ ಖಾಸಗಿ ಕ್ಷಣಗಳ ಫೋಟೋ, ವಿಡಿಯೋವನ್ನು ಡಿಲೀಟ್ ಮಾಡಬೇಕೆಂದು ತನ್ನ ಬಾಯ್‌ಫ್ರೆಂಡ್‌ ಸಂತೋಷ್ ಗೆ ತಿಳಿಯದಂತೆ ಅವನ ಫೋನ್ ತೆಗೆದುಕೊಂಡು ಗ್ಯಾಲರಿ ತೆಗೆದು ನೋಡಿದ್ದಾಳೆ. ಕೆಲವು ಫೋಟೋಗಳನ್ನು ತಿರುಚಿದ ಬಗ್ಗೆ ತನ್ವಿಗೆ ಕಂಡು ಬಂದಿದೆ.

Advertisement

ನಂತರ ತನ್ನದೂ ಸೇರಿದಂತೆ ಇತರೆ ಮಹಿಳಾ ಸಹೋದ್ಯೋಗಿಗಳು ಹಾಗೂ ಬೇರೆ ಬೇರೆ ಯುವತಿಯರ ನಗ್ನ ಫೋಟೋಗಳನ್ನು ನೋಡಿ ಬೆರಗಾಗಿದ್ದಾರೆ.

ಇನ್ನು ಕಂಪನಿಯಲ್ಲಿ ಕೆಲಸ ಮಾಡುವ ಇತರ ಮಹಿಳೆಯರ ಸುರಕ್ಷತೆಯನ್ನು ಪರಿಗಣಿಸಿ, ಇಂಡಿಯಾ ರೀಜನ್ ಮುಖ್ಯಸ್ಥರು ಅರ್ಚನಾ ಅವರಿಗೆ ತಕ್ಷಣ ಪೊಲೀಸರಿಗೆ ದೂರು ನೀಡುವಂತೆ ಮನವಿ ಮಾಡಿದರು. ನಂತರ ಈ ಕುರಿತು ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement
Tags :
LatetsNewsNewsKannadaಉದ್ಯೋಗಿಕಂಪನಿಫೋನ್ ಗ್ಯಾಲರಿಬಿಪಿಒಸಹೋದ್ಯೋಗಿ
Advertisement
Next Article