ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಂಚಾರಕ್ಕೆ ಅಡಚಣೆ; ಕಾಂಕ್ರೀಟ್ ಮಿಶ್ರಣ ಸಾಗಾಟದ ಟ್ಯಾಂಕರ್ ಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಮಣಿಪಾಲ- ಅಲೆವೂರು ರಸ್ತೆಯು ಕಾಂಕ್ರೀಟ್ ಧೂಳಿನಿಂದ ಮುಳುಗಿಹೋಗಿದ್ದು, ಜನರು ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣ ಆಗಿದೆ.
12:39 PM May 01, 2024 IST | Chaitra Kulal

ಉಡುಪಿ: ಮಣಿಪಾಲ- ಅಲೆವೂರು ರಸ್ತೆಯು ಕಾಂಕ್ರೀಟ್ ಧೂಳಿನಿಂದ ಮುಳುಗಿಹೋಗಿದ್ದು, ಜನರು ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣ ಆಗಿದೆ.

Advertisement

ಮಣಿಪಾಲ ಇಂಡಸ್ಟ್ರೀಯಲ್ ಏರಿಯಾದಲ್ಲಿ ಕಾಂಕ್ರೀಟ್ ಮಿಶ್ರಣ ತಯಾರಾಗುತ್ತಿದ್ದು, ಇದನ್ನು ಸಾಗಾಟ ಮಾಡುವ ಟ್ಯಾಂಕರ್ ಗಳು ರಸ್ತೆಯುದ್ಧಕ್ಕೂ ಕಾಂಕ್ರೀಟ್ ಮಿಶ್ರಣವನ್ನು ಸುರಿಸಿಕೊಂಡು ಹೋಗುತ್ತಿವೆ. ರಸ್ತೆಗೆ ಬಿದ್ದ ಕಾಂಕ್ರೀಟ್ ಮಿಶ್ರಣ ಒಣಗಿದ ಬಳಿಕ ಇತರ ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಧೂಳು ಏಳುತ್ತಿವೆ. ಇದರಿಂದ ದ್ವಿಚಕ್ರ ಸವಾರರು, ಪಾದಾಚಾರಿಗಳು ಹಾಗೂ ರಸ್ತೆ ಬದಿಯ ಅಂಗಡಿ, ಗೂಡಾಂಗಡಿಯವರು ಸಂಕಷ್ಟ ಎದುರಿಸುವಂತಾಗಿದೆ.

ಕಾಂಕ್ರೀಟ್ ಮಿಶ್ರಣ ರಸ್ತೆಯುದ್ದಕ್ಕೂ ಹರಡುವ ಪರಿಣಾಮ ಹೊಸ ರಸ್ತೆಗಳು ಹಾಳಾಗುತ್ತಿವೆ. ರಸ್ತೆಗಳ ಅಂದವು ಕೇಡುತ್ತಿವೆ. ಅಲ್ಲದೆ, ಕೆಲವು ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದಾರೆ. ಹೀಗಾಗಿ ಜಿಲ್ಲಾಡಳಿತವು ಕಾಂಕ್ರೀಟ್ ಸಾಗಾಟದ ವಾಹನಗಳಿಂದಾಗುವ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಆಗ್ರಹಪಡಿಸಿದ್ದಾರೆ.

Advertisement

Advertisement
Tags :
ACTIONConcrete dustLatestNewsNewsKarnatakaUDUPI
Advertisement
Next Article