ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬರೋಬ್ಬರಿ 2 ಟ್ರಕ್‌ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಿದ ಅಧಿಕಾರಿಯ ವಿಡಿಯೊ ವೈರಲ್‌

ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ತಂಡದ ಜತೆಗೆ ಕಾಡಿನ ರಸ್ತೆಯ ಮೂಲಕ ಸ್ವಚ್ಛತಾ ಅಭಿಯಾನ ನಡೆಸಿದ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಹಂಚಿಕೊಂಡಿದ್ದಾರೆ. ಈ ತಂಡ ಸುಮಾರು 7 ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸಿ ಬರೋಬ್ಬರಿ ಎರಡು ಟ್ರಕ್ ಲೋಡ್ ಪ್ಲಾಸ್ಟಿಕ್ ಸಂಗ್ರಹಿಸಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.
12:22 PM Feb 15, 2024 IST | Ashitha S

ಬೆಂಗಳೂರು: ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ತಂಡದ ಜತೆಗೆ ಕಾಡಿನ ರಸ್ತೆಯ ಮೂಲಕ ಸ್ವಚ್ಛತಾ ಅಭಿಯಾನ ನಡೆಸಿದ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಹಂಚಿಕೊಂಡಿದ್ದಾರೆ. ಈ ತಂಡ ಸುಮಾರು 7 ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸಿ ಬರೋಬ್ಬರಿ ಎರಡು ಟ್ರಕ್ ಲೋಡ್ ಪ್ಲಾಸ್ಟಿಕ್ ಸಂಗ್ರಹಿಸಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

Advertisement

"ಸಾವಯವ ವಸ್ತುಗಳಿಂದ ಆವೃತವಾಗಬೇಕಾದ ಅರಣ್ಯ ಪ್ರದೇಶವು ಪ್ಲಾಸ್ಟಿಕ್‌ ತ್ಯಾಜ್ಯಗಳಿಂದ ತುಂಬಿಕೊಂಡಿದೆ. ವನ್ಯ ಜೀವಿಗಳು ಮತ್ತು ಸಾಕು ಪ್ರಾಣಿಗಳು ಆಹಾರವೆಂದು ಭಾವಿಸಿ ಈ ಪ್ಲಾಸ್ಟಿಕ್ ತುಂಡುಗಳನ್ನು ಸೇವಿಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಇದು ಅವುಗಳ ಪ್ರಾಣಕ್ಕೂ ಸಂಚಾಕಾರ ತರುತ್ತವೆ" ಎಂದು ಪರ್ವೀನ್ ಕಸ್ವಾನ್ ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನು ಕಾಡಂಚಿನ ರಸ್ತೆಯಲ್ಲಿ ಹಲವು ಜನರನ್ನೊಳಗೊಂಡ ಗುಂಪು ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಹೆಕ್ಕಿ ಟ್ರಕ್‌ಗೆ ತುಂಬಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ʼʼವಾಕಿಂಗ್‌ / ಜಾಗಿಂಗ್‌ ಮಾಡುತ್ತ ತ್ಯಾಜ್ಯ ಸಂಗ್ರಹಿಸುವ ಪ್ಲಾಗಿಂಗ್ ಇದು. ಕಾಡಂಚಿನ ರಸ್ತೆಯಿಂದ ಇಂದಿನ 7 ಕಿ.ಮೀ. ವಾಕಿಂಗ್‌/ ಜಾಗಿಂಗ್ ಮೂಲಕ ಎರಡು ಟ್ರಕ್ ಪ್ಲಾಸ್ಟಿಕ್ ಸಂಗ್ರಹಿಸಲಾಗಿದೆ. ಮಾನವ ಎಂದಿಗೂ ಬುದ್ಧಿ ಕಲಿಯುವುದೇ ಇಲ್ಲ. ಎಲ್ಲೆಂದರಲ್ಲಿ ಕಸ ಎಸೆದು ಅನಾಗರಿಕರಂತೆ ವರ್ತಿಸುವುದನ್ನು ನಿಲ್ಲಿಸುವುದೇ ಇಲ್ಲ. ನೀವು ಯಾವಾಗ ಪ್ಲಾಗಿಂಗ್‌ ಕೈಗೊಳ್ಳುತ್ತೀರಿ?ʼʼ ಎಂದು ಕ್ಯಾಪ್ಶನ್‌ನಲ್ಲಿ ಬರೆಯಲಾಗಿದೆ.

Advertisement

 

Advertisement
Tags :
IFS OfficerindiaLatestNewsNewsKannadaparveen kaswanನವದೆಹಲಿಪ್ಲಾಸ್ಟಿಕ್‌ ತ್ಯಾಜ್ಯಬೆಂಗಳೂರು
Advertisement
Next Article