For the best experience, open
https://m.newskannada.com
on your mobile browser.
Advertisement

ಪಟಾಕಿ ಅಂಗಡಿ ಮೇಲೆ ಅಧಿಕಾರಿಗಳು ದಾಳಿ; ಮೂರು ಗೋಡೌನ್‌ ಸೀಝ್

ವೇಣೂರು ಪಟಾಕಿ ತಯಾರಿಕೆ ಸ್ಫೋಟಗೊಂಡ ಪ್ರಕರಣ ಸಂಬಂಧಿಸಿ ಬೆಳ್ತಂಗಡಿಯಲ್ಲಿ  ಪಟಾಕಿ ಮಾರಾಟ ಮತ್ತು ದಾಸ್ತಾನು ಗೋಡೌನ್ ಮೇಲೆ ಅಧಿಕಾರಿಗಳು ಜ.30 ರಂದು ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.
09:29 PM Jan 30, 2024 IST | Ramya Bolantoor
ಪಟಾಕಿ ಅಂಗಡಿ ಮೇಲೆ ಅಧಿಕಾರಿಗಳು  ದಾಳಿ   ಮೂರು ಗೋಡೌನ್‌ ಸೀಝ್

ಬೆಳ್ತಂಗಡಿ : ವೇಣೂರು ಪಟಾಕಿ ತಯಾರಿಕೆ ಸ್ಫೋಟಗೊಂಡ ಪ್ರಕರಣ ಸಂಬಂಧಿಸಿ ಬೆಳ್ತಂಗಡಿಯಲ್ಲಿ  ಪಟಾಕಿ ಮಾರಾಟ ಮತ್ತು ದಾಸ್ತಾನು ಗೋಡೌನ್ ಮೇಲೆ ಅಧಿಕಾರಿಗಳು ಜ.30 ರಂದು ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.

Advertisement

ಪಟಾಕಿ ಮಾರಾಟ ಮತ್ತು ಗೋಡೌನ್ ಮಳಿಗೆಗಳಿಗೆ ತಾತ್ಕಾಲಿಕ ಪರವಾನಿಗೆ ಜ.29 ರಂದು ಜಿಲ್ಲಾಧಿಕಾರಿ ರದ್ದು ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ತಹಶೀಲ್ದಾರ್ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಜ.30 ರಂದು ಏಕಕಾಲದಲ್ಲಿ 7 ಸ್ಥಳಗಳಿಗೆ ದಾಳಿ ಮಾಡಿ ಪರಿಶೀಲನೆ ನಡೆಸಿ ಪಟಾಕಿ ಮಾರಾಟ ಮತ್ತು ದಾಸ್ತಾನು ಮಾಡದಂತೆ ಅಂಗಡಿಗೆ ನೋಟಿಸ್ ಅಂಟಿಸಿದ್ದಾರೆ.

ಉಜಿರೆ ಪ್ರಭಾತ್ ಸ್ಟೋರ್ ,ಬೆಳ್ತಂಗಡಿ ಮುಖ್ಯರಸ್ತೆ ಬೆಳ್ತಂಗಡಿ ಜನರಲ್ ಮರ್ಚೆಂಟ್ , ಚಾಮುಂಡೇಶ್ವರಿ ಎಂಟರ್ ಪ್ರೈಸಸ್ ಬೆಳ್ತಂಗಡಿ ಇದರ ಮೂರು ಗೋಡೌನ್ ಸೀಝ್‌ ಮಾಡಲಾಗಿದೆ. ಬೆಳ್ತಂಗಡಿಯ ಎಸ್.ಪುಂಡಲೀಕ ಭಟ್ ಮಾಲೀಕತ್ವದ ಪ್ರಭಾತ್ ಸ್ಟೋರ್, ಬೆಳ್ತಂಗಡಿ ಮುಖ್ಯ ರಸ್ತೆಯಲ್ಲಿರುವ ಕೆ.ಮಂಜುನಾಥ್ ಕಾಮತ್ ಮಾಲೀಕತ್ವದ ಜನರಲ್ ಮರ್ಚೆಂಟ್, ಬೆಳ್ತಂಗಡಿಯ ಸುಧೀರ್ ಹೊಳ್ಳ ಮಾಲೀಕತ್ವದ ಚಾಮುಂಡೇಶ್ವರಿ ಎಂಟರ್ ಪ್ರೈಸಸ್ , ಉಜಿರೆಯ ಬಿ.ರಾಜರಾಮ್ ಭಟ್ ಮಾಲೀಕತ್ವದ ಮಂಜು ಶ್ರೀ ಸ್ಟೋರ್ , ಉಜಿರೆಯ ಪ್ರಭಾತ್ ಸ್ಟೋರ್,ಪುಂಜಾಲಕಟ್ಟೆಯ ಬಿ.ವಸಂತ ಬಾಳಿಗ ಮಾಲೀಕತ್ವದ ವಸಂತ್ ಸ್ಟೋರ್ , ವೇಣೂರಿನ ಬಿ.ಮೋಹನ್ ದಾಸ್ ನಾಯಕ್ ಸೇರಿದಂತೆ ಏಳು ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ.

Advertisement

ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಸಿಬ್ಬಂದಿ ಹಾಗೂ ಅಗ್ನಿಶಾಮಕ ರಿಜಿನಲ್ ಫೈರ್ ಅಫೀಸರ್ ರಂಗನಾಥ್ ಮತ್ತು ಸಿಬ್ಬಂದಿ ಮತ್ತು ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆಯಲ್ಲಿ  ಇದ್ದರು.

Advertisement
Tags :
Advertisement