For the best experience, open
https://m.newskannada.com
on your mobile browser.
Advertisement

ನ್ಯೂಸ್ ಕರ್ನಾಟಕ ವರದಿಯ ಇಂಪ್ಯಾಕ್ಟ್: ವೃದ್ದ ಕುಟುಂಬದ 35 ವರ್ಷಗಳ ಜೋಪಡಿ ವಾಸ ಅಂತ್ಯ

ಕಳೆದ 35 ವರ್ಷಗಳಿಂದ ಜೋಪಡಿಯಲ್ಲೇ ವಾಸವಿರುವ ವೃದ್ಧ ದಂಪತಿಯ ಸಮಸ್ಯೆಗೆ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಸ್ಪಂದಿಸಿ, ವೃದ್ದ ದಂಪತಿಗೆ ಸ್ವಂತ ಸೂರು ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ. ಇದು ನ್ಯೂಸ್ ಕರ್ನಾಟಕ ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ.
06:28 PM Mar 12, 2024 IST | Maithri S
ನ್ಯೂಸ್ ಕರ್ನಾಟಕ ವರದಿಯ ಇಂಪ್ಯಾಕ್ಟ್  ವೃದ್ದ ಕುಟುಂಬದ  35 ವರ್ಷಗಳ ಜೋಪಡಿ ವಾಸ  ಅಂತ್ಯ

ನಂಜನಗೂಡು : ಕಳೆದ 35 ವರ್ಷಗಳಿಂದ ಜೋಪಡಿಯಲ್ಲೇ ವಾಸವಿರುವ ವೃದ್ಧ ದಂಪತಿಯ ಸಮಸ್ಯೆಗೆ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಸ್ಪಂದಿಸಿ, ವೃದ್ದ ದಂಪತಿಗೆ ಸ್ವಂತ ಸೂರು ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ. ಇದು ನ್ಯೂಸ್ ಕರ್ನಾಟಕ ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ.

Advertisement

ಸ್ವಂತ ಸೂರಿಲ್ಲದೆ ಕಳೆದ 35 ವರ್ಷಗಳಿಂದ ರಸ್ತೆ ಬದಿಯ ಜೋಪಡಿಯಲ್ಲಿ ವಾಸವಿರು ವೃದ್ಧ ದಂಪತಿಗಳ ಕುರಿತಂತೆ ನ್ಯೂಸ್ ಕರ್ನಾಟಕದಲ್ಲಿ ಭಾನುವಾರ ಸುದ್ದಿ ಪ್ರಸಾರ ಮಾಡಲಾಗಿತ್ತು. ವರದಿಗೆ ಸ್ಪಂದಿಸಿದ ನಂಜನಗೂಡು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಇಂದು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ.

ನಂಜನಗೂಡು ತಾಲ್ಲೂಕಿನ ಮೊಬ್ಬಳ್ಳಿ ಗ್ರಾಮದ ಗೇಟ್ ಬಳಿ ರಾಜಣ್ಣ ಎಂಬ ವೃದ್ಧ ದಂಪತಿಯ ಕುಟುಂಬ ಜೋಪಡಿಯಲ್ಲಿ ಆಶ್ರಯ ಪಡೆದಿದೆ. ಗುರುತಿನ ಚೀಟಿ ಇದೆ,ಆಧಾರ್ ಕಾರ್ಡ್ ಇದೆ ಆದರೂ ಸ್ವಂತ ಸೂರಿಲ್ಲದೆ ಪರಿತಪಿಸುತ್ತಿದೆ. ಗುಡಿಸಲು ಮುಕ್ತ ರಾಜ್ಯವಾಗಿಸಲು ಸರ್ಕಾರ ಕೋಟ್ಯಾಂತರ ಹಣ ವೆಚ್ಚ ಮಾಡುತ್ತಿದೆ. ಹೀಗಿದ್ದರೂ ಈ ವೃದ್ದ ದಂಪತಿಗೆ ಸ್ವಂತ ಸೂರಿರಲಿಲ್ಲ. ಇವರ ಸಮಸ್ಯೆಯನ್ನು ಪಬ್ಲಿಕ್ ನೆಕ್ಸ್ಟ್ ವಾಹಿನಿಯು ವರದಿ ಮಾಡಿ ತಾಲ್ಲೂಕು ಆಡಳಿತವನ್ನು ಎಚ್ಚರಿಸಿದೆ.

Advertisement

ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹಾಗೂ ಕಂದಾಯ ನಿರೀಕ್ಷಕ ಹರೀಶ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತಹಶೀಲ್ದಾರ್ ಕಾಲು ಮುಗಿದು ಮನೆಗಾಗಿ ಪರಿಪರಿಯಾಗಿ ಮನವಿ ಮಾಡಿದ್ದಾರೆ. ಸಧ್ಯ ತಹಶೀಲ್ದಾರ್ ಯಾವುದಾದರೂ ಯೋಜನೆ ಅನ್ವಯ ಸೂರು ಕಲ್ಪಿಸುವ ಭರವಸೆ ನೀಡಿದ್ದಾರೆ. ನಿವಾಸಿಗಳಿಗೆ ಕುಡಿಯುವ ನೀರು ಮತ್ತು ಬೀದಿ ದೀಪವನ್ನು ಕಲ್ಪಿಸದ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ. ಇದು ನ್ಯೂಸ್ ಕರ್ನಾಟಕ ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ.

Advertisement
Tags :
Advertisement