For the best experience, open
https://m.newskannada.com
on your mobile browser.
Advertisement

ಒಲಂಪಿಕ್ಸ್‌ ಸಿದ್ಧತೆ : ಸರ್ಕಾರಿ ಕಟ್ಟಡದಿಂದ ವಲಸಿಗರ ತೆರವು

ಪ್ಯಾರೀಸ್‌ ಒಲಂಪಿಕ್ಸ್‌ ಕ್ರೀಡಾಕೂಟಕ್ಕೆ ಇನ್ನೇನು ಕೇವಲ 3 ಬಾಕಿ ಇದ್ದು ಈಗಾಗಲೇ ಸಿದ್ದತೆ ನಡೆಯುತ್ತಿದೆ ಈ ಹಿನ್ನಲೆ ಫ್ರೆಂಚ್‌ ಅಧಿಕಾರಿಗಳು ಪ್ಯಾರಿಸ್‌ನ ದಕ್ಷಿಣ ಹೊರವಲಯದ ಸರ್ಕಾರಿ ಕಟ್ಟಡವೊಂದರಲ್ಲಿ ಆಶ್ರಯ ಪಡೆದಿದ್ದ ನೂರಾರು ವಲಸಿಗರನ್ನು ತೆರವುಗೊಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
05:34 PM Apr 18, 2024 IST | Nisarga K
ಒಲಂಪಿಕ್ಸ್‌ ಸಿದ್ಧತೆ   ಸರ್ಕಾರಿ ಕಟ್ಟಡದಿಂದ ವಲಸಿಗರ ತೆರವು
ಒಲಂಪಿಕ್ಸ್‌ ಸಿದ್ಧತೆ : ಸರ್ಕಾರಿ ಕಟ್ಟಡದಿಂದ ವಲಸಿಗರ ತೆರವು

ಗ್ರೀಸ್‌ : ಪ್ಯಾರೀಸ್‌ ಒಲಂಪಿಕ್ಸ್‌ ಕ್ರೀಡಾಕೂಟಕ್ಕೆ ಇನ್ನೇನು ಕೇವಲ 3 ಬಾಕಿ ಇದ್ದು ಈಗಾಗಲೇ ಸಿದ್ದತೆ ನಡೆಯುತ್ತಿದೆ ಈ ಹಿನ್ನಲೆ ಫ್ರೆಂಚ್‌ ಅಧಿಕಾರಿಗಳು ಪ್ಯಾರಿಸ್‌ನ ದಕ್ಷಿಣ ಹೊರವಲಯದ ಸರ್ಕಾರಿ ಕಟ್ಟಡವೊಂದರಲ್ಲಿ ಆಶ್ರಯ ಪಡೆದಿದ್ದ ನೂರಾರು ವಲಸಿಗರನ್ನು ತೆರವುಗೊಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Advertisement

ಒಲಿಂಪಿಕ್ಸ್​ ಜುಲೈ 26 ರಿಂದ ಆಗಸ್ಟ್‌ 11ರವರೆಗೆ ನಡೆಯಲಿದ್ದು ಈ ವೇಳೆಗೆ ಅಧಿಕಾರಿಗಳು ಕಟ್ಟಡದಿಂದ ನಿರಾಶ್ರಿತರನ್ನು ಹೊರ ದಬ್ಬುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಉದ್ಘಾಟನಾ ಸಮಾರಂಭ ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮದೊಂದಿಗೆ ನೆರವೇರಲಿದೆ.ನದಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ.

Advertisement

ಒಲಿಂಪಿಕ್ಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ

Advertisement
Tags :
Advertisement