ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇಸ್ರೇಲ್‌ ದಾಳಿಯಿಂದ ಗಾಜಾದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ಮಗು ಸಾವು

ಇಸ್ರೇಲ್‌ನ ಆಕ್ರಮಣದಿಂದ ಗಾಜಾದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ಮಗು ಸಾವನ್ನಪ್ಪುತ್ತದೆ, ಇಬ್ಬರು ಮಕ್ಕಳು ಗಾಯಗೊಳ್ಳುತ್ತಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಗಾಜಾ ಆರೋಗ್ಯ ಸಚಿವಾಲಯ ಆರೋಪಿಸಿದೆ.
04:14 PM Nov 05, 2023 IST | Ashika S

ಟೆಲ್ ಅವಿವ್: ಇಸ್ರೇಲ್‌ನ ಆಕ್ರಮಣದಿಂದ ಗಾಜಾದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ಮಗು ಸಾವನ್ನಪ್ಪುತ್ತದೆ, ಇಬ್ಬರು ಮಕ್ಕಳು ಗಾಯಗೊಳ್ಳುತ್ತಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಗಾಜಾ ಆರೋಗ್ಯ ಸಚಿವಾಲಯ ಆರೋಪಿಸಿದೆ.

Advertisement

ಇಸ್ರೇಲ್ ಗಾಜಾ ಮೇಲೆ ದಾಳಿ ಆರಂಭಿಸಿದಾಗಿನಿಂದ 3,900 ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು 8,067 ಮಕ್ಕಳು ಗಾಯಗೊಂಡಿದ್ದಾರೆ ಎಂದು ಆರೋಗ್ಯ ತುರ್ತು ಕೇಂದ್ರದ ನಿರ್ದೇಶಕ ಮೊಟಾಸೆಮ್ ಸಲಾ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ 1,250 ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ವಿವರಿಸಿದ್ದಾರೆ.

ಇಸ್ರೇಲಿ ಆಕ್ರಮಣದಲ್ಲಿ ಸಾವನ್ನಪ್ಪಿದವರಲ್ಲಿ 70 ಪ್ರತಿಶತದಷ್ಟು ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಎಂದು ವರದಿಯಾಗಿದೆ. ಹಮಾಸ್ ಭಯೋತ್ಪಾದಕರು ಅಕ್ಟೋಬರ್ 7 ರಂದು ಇಸ್ರೇಲ್ ನಗರಗಳಿಗೆ ನುಗ್ಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 1400 ಜನರನ್ನು ಕೊಂದು ಹಾಕಿದ ಬಳಿಕ ನಿರಂತರವಾಗಿ ಸಂಘರ್ಷ ನಡೆಯುತ್ತಿದೆ.

Advertisement

Advertisement
Tags :
LatestNewsNewsKannadaಇಸ್ರೇಲ್‌ಗಾಂಜಾಗಾಜಾ ಆರೋಗ್ಯ ಸಚಿವಾಲಯಮಕ್ಕಳುಹಮಾಸ್
Advertisement
Next Article