For the best experience, open
https://m.newskannada.com
on your mobile browser.
Advertisement

ಅಂಬೇಡ್ಕರ್ ಜಯಂತಿಯ ಮೆರವಣಿಗೆ ವೇಳೆ ಯುವಕ ಕೊಲೆ

ನಗರದ ರಾಷ್ಟ್ರಪತಿ ಚೌಕ್ ಬಳಿ ಡಾ.ಬಿ. ಆರ್. ಅಂಬೇಡ್ಕರ್ ಜಯಂತಿಯ ಮೆರವಣಿಗೆ  ವೇಳೆ ಮಾರಕಾಸ್ತ್ರಗಳಿಂದ ಯುವಕನನ್ನು ಕೊಲೆ ಮಾಡಿದ ಘಟನೆ  ನಡೆದಿದೆ.
08:39 AM Apr 15, 2024 IST | Ashika S
ಅಂಬೇಡ್ಕರ್ ಜಯಂತಿಯ ಮೆರವಣಿಗೆ ವೇಳೆ ಯುವಕ ಕೊಲೆ

ಕಲಬುರಗಿ: ನಗರದ ರಾಷ್ಟ್ರಪತಿ ಚೌಕ್ ಬಳಿ ಡಾ.ಬಿ. ಆರ್. ಅಂಬೇಡ್ಕರ್ ಜಯಂತಿಯ ಮೆರವಣಿಗೆ  ವೇಳೆ ಮಾರಕಾಸ್ತ್ರಗಳಿಂದ ಯುವಕನನ್ನು ಕೊಲೆ ಮಾಡಿದ ಘಟನೆ  ನಡೆದಿದೆ.

Advertisement

ಕಲಬುರಗಿಯ ಅಶೋಕ್ ನಗರ ಬಡಾವಣೆ ನಿವಾಸಿ 21 ವರ್ಷದ ಆಕಾಶ್ ಕೊಲೆಯಾದ ದುರ್ದೈವಿ.

ಮತ್ತೋರ್ವ ಯುವಕನು ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Advertisement

ಕೊಲೆಗೆ ನಿಖರ ಕಾರಣ ಏನೆಂದು ಇನ್ನು ತಿಳಿದು ಬಂದಿಲ್ಲ. ಕೊಲೆ ಮಾಡಿ ಎಸ್ಕೇಪ್ ಆಗಿರುವ ದುಷ್ಕರ್ಮಿಗಳು ಯಾರೆಂದು ಪತ್ತೆ ಹಚ್ಚಬೇಕಾಗಿದೆ.

ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Advertisement
Tags :
Advertisement