ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಗಿಫ್ಟ್ ಆಸೆಗೆ ಕೈಲಿದ್ದ ಹಣ ಕಳೆದುಕೊಂಡ ನರ್ಸ್; ಫೇಸ್ ಬುಕ್ ಗೆಳೆಯನಿಂದ ಕಸ್ಟಂ ಹೆಸರಿನಲ್ಲಿ ಪಂಗನಾಮ

ಫೇಸ್‌ ಬುಕ್‌ ಮೂಲಕ ಪರಿಚಯವಾದ ವಿದೇಶಿ ವ್ಯಕ್ತಿಯಿಂದ ನರ್ಸ್ ಒಬ್ಬರಿಗೆ ಸುಮಾರು ೧೯ಲಕ್ಷ ರೂ ಮೋಸವಾಗಿರುವ ಘಟನೆ ಚಿಂತಾಮಣಿ ತಾಲ್ಲೂಕಿನಲ್ಲಿ ನಡೆದಿದೆ.
08:24 PM Jan 26, 2024 IST | Maithri S

ಚಿಕ್ಕಬಳ್ಳಾಪುರ: ಫೇಸ್‌ ಬುಕ್‌ ಮೂಲಕ ಪರಿಚಯವಾದ ವಿದೇಶಿ ವ್ಯಕ್ತಿಯಿಂದ ನರ್ಸ್ ಒಬ್ಬರಿಗೆ ಸುಮಾರು ೧೯ಲಕ್ಷ ರೂ ಮೋಸವಾಗಿರುವ ಘಟನೆ ಚಿಂತಾಮಣಿ ತಾಲ್ಲೂಕಿನಲ್ಲಿ ನಡೆದಿದೆ.

Advertisement

ಡಾ. ಮೈಕ್ ರೊನಾಲ್ಡ್ ಎಂಬುವವ ತಮ್ಮ ಮಗಳ ಹುಟ್ಟುಹಬ್ಬದ ಪ್ರಯುಕ್ತ ಉಡುಗೊರೆ ಕೊಡುವುದಾಗಿ ಹೇಳಿ ನರ್ಸ್ ಮಮತಾ ರೆಡ್ಡಿಯ ಅಂಚೆ ವಿಳಾಸ ಪಡೆದಿದ್ದಾನೆ. ದೆಹಲಿಯ ಏರ್​ಪೋ್ರ್ಟ್​ನ ಕಸ್ಟಮ್ಸ್ ಕಛೇರಿಗೆ ಬಂದಿರುವ ಗಿಫ್ಟ್ ಪಡೆಯಲು 45 ಸಾವಿರ ರೂಪಾಯಿ ಕಸ್ಟಮ್ಸ್ ಫೀ ಕಟ್ಟಬೇಕೆಂದು ತಿಳಿಸಿ ಮಮತಾರಿಂದ ಹಣ ಕಟ್ಟಿಸಿದ್ದಾನೆ. ನಂತರ ಒಂದೊಂದೇ ನೆಪ ಹೇಳಿ ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಇನ್ನಷ್ಟು ಹಣ ಪಡೆದಿದ್ದಾನೆ.

ಕೊನೆಗೆ ಅನುಮಾನಗೊಂಡ ನರ್ಸ್ ಚಿಕ್ಕಬಳ್ಳಾಪುರ ಸಿಇಎನ್ (ಸೈಬರ್ ಕ್ರೈಂ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

Advertisement

 

Advertisement
Tags :
FACEBOOKLatestNewsNewsKannadaOnline fraudಕರ್ನಾಟಕ
Advertisement
Next Article