ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಏರಿದ ಬಿಸಿಲಿನ ತಾಪ : ಇಂದಿನಿಂದ 5 ದಿನ ರಾಜ್ಯದಲ್ಲಿ ಆರೆಂಜ್ ಅಲರ್ಟ್

ಇನ್ನೇನು ಬಿಸಿಲಿನಿಂದ ಮುಕ್ತಿ ಸಿಕ್ಕಿತು ಎನ್ನುವಷ್ಟರಲ್ಲಿ ಮತ್ತೆ ತನ್ನ ರೌದ್ರ ಅವತಾರದಿಂದ ಉಷ್ಣದ ಅಲೆ ಎಬ್ಬಿಸಿದ್ದಾನೆ. ಇನ್ನು ವರುಣನ ಆರ್ಭಟ ಮಾತ್ರ ಎಂದುಕೊಂಡಿದ್ದ ನಮಗೆ ಬಿಸಿಲು ಮತ್ತೆ ಶಾಕ್‌ ನೀಡಿದೆ.
02:36 PM Apr 25, 2024 IST | Nisarga K
ಏರಿದ ಬಿಸಿಲಿನ ತಾಪ : ಇಂದಿನಿಂದ 5 ದಿನ ರಾಜ್ಯದಲ್ಲಿ ಆರೆಂಜ್ ಅಲರ್ಟ್

ಬೆಂಗಳೂರು : ಇನ್ನೇನು ಬಿಸಿಲಿನಿಂದ ಮುಕ್ತಿ ಸಿಕ್ಕಿತು ಎನ್ನುವಷ್ಟರಲ್ಲಿ ಮತ್ತೆ ತನ್ನ ರೌದ್ರ ಅವತಾರದಿಂದ ಉಷ್ಣದ ಅಲೆ ಎಬ್ಬಿಸಿದ್ದಾನೆ. ಇನ್ನು ವರುಣನ ಆರ್ಭಟ ಮಾತ್ರ ಎಂದುಕೊಂಡಿದ್ದ ನಮಗೆ ಬಿಸಿಲು ಮತ್ತೆ ಶಾಕ್‌ ನೀಡಿದೆ.

Advertisement

ಇಂದಿನಿಂದ ಅಂದ್ರೆ ಏಪ್ರಿಲ್ 25ರಿಂದ ಮುಂದಿನ 5 ದಿನಗಳವರೆಗೆ ಬಿಸಿಗಾಳಿ ಮತ್ತು ತಾಪಮಾನ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಾಳೆ ದೇಶದ 13 ರಾಜ್ಯಗಳ 89 ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. ನಾಳೆ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಬಿಸಿಗಾಳಿಯ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಪಶ್ಚಿಮ ಬಂಗಾಳ ರಾಜ್ಯಕ್ಕೆ ರೆಡ್‌ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕ ರಾಜ್ಯಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ.

Advertisement

ನಾಳೆ ಕೇರಳ, ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಹೆಚ್ಚಿನ ಉಷ್ಣಾಂಶ ಇರುವ ಮುನ್ಸೂಚನೆ ನೀಡಲಾಗಿದೆಚುನಾವಣಾ ಆಯೋಗವು ಬಿಸಿ ಗಾಳಿ ಸಮಸ್ಯೆ ಎದುರಿಸಲು ಟಾಸ್ಕ್ ಪೋರ್ಸ್ ರಚಿಸಿದೆ. ಪೋಲಿಂಗ್ ಬೂತ್‌ಗಳಲ್ಲಿ ಕುಡಿಯುವ ನೀರು, ಫ್ಯಾನ್‌ಗಳ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡಿದೆ.

Advertisement
Tags :
ELECTIONKARNATAKALatestNewsMeteorological DepartmentNewsKarnatakaORANGE ALERTtemperature
Advertisement
Next Article