ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಿಗೂಢವಾಗಿ ಸಾವನ್ನಪ್ಪಿದ ಆಸ್ಕರ್‌ ಪ್ರಶಸ್ತಿ ವಿಜೇತ ನಟ

ದಕ್ಷಿಣ ಕೊರಿಯಾದ ಸೂಪರ್ ಹಿಟ್ 'ಪ್ಯಾರಾಸೈಟ್' ಸಿನಿಮಾ ನಟ ಲೀ ಸನ್ ಕ್ಯೂನ್ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿ ಸೌತ್ ಕೊರಿಯನ್ ನಟನ ಮೃತದೇಹ ಪತ್ತೆಯಾಗಿದ್ದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಲೀ ನಟನೆಯ ಸೌತ್ ಕೊರಿಯನ್ ಚಿತ್ರ 'ಪ್ಯಾರಾಸೈಟ್' ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿತ್ತು.
03:53 PM Dec 27, 2023 IST | Gayathri SG

ದಕ್ಷಿಣ ಕೊರಿಯಾದ ಸೂಪರ್ ಹಿಟ್ 'ಪ್ಯಾರಾಸೈಟ್' ಸಿನಿಮಾ ನಟ ಲೀ ಸನ್ ಕ್ಯೂನ್ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿ ಸೌತ್ ಕೊರಿಯನ್ ನಟನ ಮೃತದೇಹ ಪತ್ತೆಯಾಗಿದ್ದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಲೀ ನಟನೆಯ ಸೌತ್ ಕೊರಿಯನ್ ಚಿತ್ರ 'ಪ್ಯಾರಾಸೈಟ್' ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿತ್ತು.

Advertisement

48 ವರ್ಷದ ಲೀ ಸೌತ್ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಲೀ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಗಾಂಜಾ ಸೇರಿದಂತೆ ಸೈಕೋಆಕ್ಟಿವ್ ಡ್ರಗ್ಸ್ ಸೇವಿಸಿದ್ದ ಆರೋಪ ಹೊತ್ತಿದ್ದ ಲೀ ವಿಚಾರಣೆಯ ಮರುದಿನವೇ ಶವವಾಗಿ ಪತ್ತೆಯಾಗಿರುವುದು ಗಮನಾರ್ಹ. ಲೀ ಮರಣದ ಕಾರಣ ತಿಳಿಯಬೇಕಿದೆ.

ಸೆಂಟ್ರಲ್ ಸಿಯೋಲ್‌ನ ಪಾರ್ಕ್‌ ಬಳಿ ನಿಂತಿದ್ದ ಕಾರಿನಲ್ಲಿ ಲೀ ಸನ್ ಕ್ಯೂನ್ ಮೃತದೇಹವನ್ನು ಪೊಲೀಸರು ಪತ್ತೆ ಮಾಡಿದ್ದರು. ಬಾರ್ ನೌಕರನೊಂದಿಗೆ ಡ್ರಗ್ಸ್ ಸೇವಿಸಿದ ಆರೋಪ ಲೀ ಮೇಲಿತ್ತು. ಇದಲ್ಲದೇ, ತನ್ನ ಮನೆಯ ಬಳಿ ಲೀ ಹಲವು ಬಾರಿ ಡ್ರಗ್ಸ್ ಸೇವಿಸಿದ್ದಾಗಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ಟೋಬರ್‌ನಿಂದ ಡ್ರಗ್ಸ್ ಪ್ರಕರಣದ ತನಿಖೆ ನಡೆಯುತ್ತಿದೆ.

Advertisement

Advertisement
Tags :
'ಪ್ಯಾರಾಸೈಟ್' ಸಿನಿಮಾLatestNewsNewsKannadaದಕ್ಷಿಣ ಕೊರಿಯಾನಟಲೀ ಸನ್ ಕ್ಯೂನ್
Advertisement
Next Article