ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಂಗು ಪಡೆದ ಲೋಕಸಭಾ ಚುನಾವಣೆ; ಬಿಜೆಪಿ ವಿರುದ್ಧ ತೊಡೆ ತಟ್ಟಿದ ಇತರ ಪಕ್ಷಗಳು

ಪುತ್ತೂರಿನಲ್ಲಿ ಲೋಕಸಭಾ ಚುನಾವಣೆ ರಂಗೇರುತ್ತಿದೆ. ಕೇಸರಿ ಪಡೆ ವಿರುದ್ಧ ಪಕ್ಷಗಳು ಒಟ್ಟಾಗುತ್ತಿವೆ. ಹಿಂದುತ್ವ ಪ್ರತಿಪಾದಕ ಪಕ್ಷ ಬಿಜೆಪಿ ವಿರುದ್ಧ ಇತರ ಪಕ್ಷಗಳು ತೊಡೆ ತಟ್ಟಿವೆ.
12:08 PM Apr 09, 2024 IST | Ashitha S

ಪುತ್ತೂರು: ಪುತ್ತೂರಿನಲ್ಲಿ ಲೋಕಸಭಾ ಚುನಾವಣೆ ರಂಗೇರುತ್ತಿದೆ. ಕೇಸರಿ ಪಡೆ ವಿರುದ್ಧ ಪಕ್ಷಗಳು ಒಟ್ಟಾಗುತ್ತಿವೆ. ಹಿಂದುತ್ವ ಪ್ರತಿಪಾದಕ ಪಕ್ಷ ಬಿಜೆಪಿ ವಿರುದ್ಧ ಇತರ ಪಕ್ಷಗಳು ತೊಡೆ ತಟ್ಟಿವೆ.

Advertisement

ಕಾಂಗ್ರೇಸ್ ನ ವಿರೋಧಿ ಪಕ್ಷ ಎಸ್‌ಡಿಪಿಐ ನಿಂದಲೂ ಅಭ್ಯರ್ಥಿ ಕಣಕ್ಕಿಳಿಸದಿರಲು ನಿರ್ಧಾರ ಮಾಡಿದ್ದಾರೆ. ಈ ಮೂಲಕ ಮುಸ್ಲಿಂ ಮತಗಳ ಕೇಂದ್ರೀಕರಣಕ್ಕೆ ಪ್ಲಾನ್ ಮಾಡಿದ್ದಾರೆ.

2014 ಮತ್ತು 2019 ರ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಎಸ್.ಡಿ.ಪಿ.ಐ. 2014 ರಲ್ಲಿ ಹನೀಫ್ ಖಾನ್ ಸ್ಪರ್ಧಿಸಿ 27254 ಮತ ಪಡೆದಿದ್ದರು. 2019 ರಲ್ಲಿ ಮಹಮ್ಮದ್ ಇಲ್ಯಾಸ್ ಸ್ಪರ್ಧಿಸಿ 46839 ಮತ ಪಡೆದಿದ್ದರು. ಈ ಮೂಲಕ ಮುಸ್ಲಿಂ ಮತಗಳ ಕೇಂದ್ರೀಕರಿಸಲು ನಿರ್ಧಾರಿಸಲಾಗಿದೆ. ಇನ್ನು ಎಸ್.ಡಿ.ಪಿ.ಐ ನಡೆಗೆ ಬಿಜೆಪಿ ಆಕ್ರೋಶ ಹೊರ ಹಾಕಿದೆ. ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ಒಳ ಒಪ್ಪಂದ ಮಾಡಿಕೊಂಡಿರುವುದಾಗಿ ಆರೋಪಿಸಿದ್ದಾರೆ.

Advertisement

ಈ ಹಿಂದೆ ಕಾಂಗ್ರೇಸ್ ಎಸ್.ಡಿ.ಪಿ.ಐ ಯನ್ನು ಬಿಜೆಪಿಯ ಬಿ ಟೀಮ್ ಎನ್ನುತ್ತಿತ್ತು. ಆದರೆ ಈ ಬಾರಿ ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿದೆ. ದೇಶದ್ರೋಹ ಮತ್ತು ಸಮಾಜದಲ್ಲಿ ಭಯ ಉತ್ಪಾದನೆ ಮಾಡಿದ ಸಂಘಟನೆ. ಪ್ರವೀಣ್ ನೆಟ್ಟಾರು, ಶರತ್ ಮಡಿವಾಳ್, ದೀಪಕ್ ರಾವ್, ರುದ್ರೇಶ್, ಕುಟ್ಟಪ್ಪ ಹತ್ಯೆಯ ಹಿಂದೆ ಇದೇ ಸಂಘಟನೆಯ ಕೈವಾಡವಿತ್ತು. ಹಿಂದೂ ವಿರೋಧಿ ನಿಲುವು ಹೊಂದಿರುವ ಸಂಘಟನೆ ಇದು. ಪ್ರೀತಿ-ವಿಶ್ವಾಸದ ವಾತಾವರಣ ಜಿಲ್ಲೆಯಲ್ಲಿ ಬೇಕಾಗಿದೆ ಎಂದು ಎಸ್.ಡಿ.ಪಿ.ಐ ಮತ್ತು ಕಾಂಗ್ರೇಸ್ ನಡೆಗೆ ಅರುಣ್‌ ಕುಮಾರ್‌ ಪುತ್ತಿಲ ಕಿಡಿಕಾರಿದ್ದಾರೆ.

Advertisement
Tags :
ArunkumarBJPCongressGOVERNMENTindiaKARNATAKASDPI
Advertisement
Next Article