ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ವಿರುದ್ಧ ಬಿಲ್ಲವ ಸಂಘಟನೆಗಳಿಂದ ಆಕ್ರೋಶ

ಚುನಾವಣೆಗೆ ಕೆಲವೇ ಗಂಟೆಗಳ ಮುನ್ನ ಬಿಜೆಪಿ ಅಭ್ಯರ್ಥಿ ವಿರುದ್ಧ ಬಿಲ್ಲವ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ. ಬ್ರಿಜೇಶ್ ಚೌಟ ಹಿಂದುಳಿದ ಸಮಾಜದವರನ್ನ ಸೈಡ್ ಲೈನ್ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಧ ಮಂಗಳೂರಿನಲ್ಲಿ ಬಿಲ್ಲವ ಸಂಘಟನೆಗಳಿಂದ ತುರ್ತು ಸಭೆ ಕರೆಯಲಾಗಿದೆ.
06:39 PM Apr 25, 2024 IST | Nisarga K
ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ವಿರುದ್ಧ ಬಿಲ್ಲವ ಸಂಘಟನೆಗಳಿಂದ ಆಕ್ರೋಶ

ಮಂಗಳೂರು : ಚುನಾವಣೆಗೆ ಕೆಲವೇ ಗಂಟೆಗಳ ಮುನ್ನ ಬಿಜೆಪಿ ಅಭ್ಯರ್ಥಿ ವಿರುದ್ಧ ಬಿಲ್ಲವ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ. ಬ್ರಿಜೇಶ್ ಚೌಟ ಹಿಂದುಳಿದ ಸಮಾಜದವರನ್ನ ಸೈಡ್ ಲೈನ್ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಧ ಮಂಗಳೂರಿನಲ್ಲಿ ಬಿಲ್ಲವ ಸಂಘಟನೆಗಳಿಂದ ತುರ್ತು ಸಭೆ ಕರೆಯಲಾಗಿದೆ.

Advertisement

ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ವಿರುದ್ಧ ಅಸಮಾಧಾನ ತೋರಿದ್ದು, ಈ ಸಭೆಯಲ್ಲಿ ಬಿರುವೆರ್ ಕುಡ್ಲ ,ಯುವವಾಹಿನಿ ,ಗೆಜ್ಜೆಗಿರಿ ಸಂಘಟನೆಯ ಬಿಲ್ಲವ ಮುಖಂಡರು ಭಾಗಿಯಾಗಿದ್ದಾರೆ. ಇದೀಗ ನಳಿನ್ ಕುಮಾರ್ ಕಟೀಲ್ V/S ಬ್ರಿಜೇಶ್ ಚೌಟ ಬಣ ರಾಜಕೀಯದ ಮತ್ತೆ ಸದ್ದು ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿರುವೆರ್ ಕುಡ್ಲ ವಿರುದ್ಧ ಅವಹೇಳನಕಾರಿ ಬರಹ ಕುರಿತು ಆರೋಪಿಸಲಾಗಿದೆ.

Advertisement

ಬಿರುವೆರ್ ಕುಡ್ಲ ಸಂಘಟನೆ ಸಂಸ್ಥಾಪಕ ಉದಯ ಪೂಜಾರಿ ಬಲ್ಲಾಳ್ ಭಾಗ್ ಮಾತನಾಡಿ,
ಇಲ್ಲಿ ಬಿಲ್ಲವ ಸಮುದಾಯದವರು ಸೇರಿದ್ದೇವೆ ,ನಮ್ಮನ್ನ ಯಾಕೆ ಸೆಡ್ ಲೈನ್ ಮಾಡುತ್ತಿದ್ದಾರೆ ಗೊತ್ತಿಲ್ಲ.ನಳಿನ್ ಕುಮಾರ್ ಕಟೀಲ್ ಜೊತೆಗಿದ್ದವರನ್ನು ದೂರವಿಟ್ಟಿದ್ದಾರೆ ಬಿರುವೆರ್ ಕುಡ್ಲ ಸಂಘಟನೆಯಿಂದ ಎಷ್ಟು ವೋಟ್ ಇದೆ ಎಂದು ಕೇಳುತ್ತಿದ್ದರೆ ಬ್ರಿಜೇಶ್ ಚೌಟ ಅವರೇ ಇದೆ ಮಾತನ್ನ ನೀವು ಎಲೆಕ್ಷನ್ ಮುಂಚೆ ಹೇಳಬೇಕಿತ್ತು ಆಗನಾವೇನು ನಮ್ಮ ಸಮುದಾಯದ ಶಕ್ತಿ ಏನು ಅನ್ನೋದನ್ನ ತೋರಿಸುತ್ತಿದ್ದೆವು ಎಂದು ಗುಡುಗಿದ್ದಾರೆ.

ಬ್ರಿಜೇಶ್ ಚೌಟಾಗಿಂತ ನಳಿನ್ ಕುಮಾರ್ ಕಟೀಲ್ ನಮಗೆ ಆಗಬಹುದಿತ್ತು ಅಂತ ಜನ ಹೇಳ್ತಾಯಿದ್ದಾರೆ. ಮೋದಿಗೋಸ್ಕರ ನಮ್ಮ ಕಾರ್ಯಕರ್ತರು ದುಡಿತಾ ಇದ್ದಾರೆ ಇದೀಗ ಇದು ಒಬ್ಬನದ್ದೇ ಪಕ್ಷದ ರೀತಿ ಆಗಿದೆ.ಮುಂದೆ ಎರಡು ಎಂಎಲ್ಎ ಗಳನ್ನ ಬದ್ಲಾಯಿಸ್ತಾರೆ.ವೇದವ್ಯಾಸ್ ಕಾಮತ್ ಹಾಗು ಭರತ್ ಶೆಟ್ಟಿಯವರನ್ನ ಬದಲಾಯಿಸುತ್ತಾರೆ ಎಂದು ಟೀಕಿಸಿದ್ದಾರೆ.

Advertisement
Tags :
BillavasBJPBrijesh ChowtaCongressELECTIONLatestNewsmangaluruNewsKarnatakaorganizationoutrage
Advertisement
Next Article