ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಚಿರಂಜೀವಿಗೆ ಪದ್ಮವಿಭೂಷಣ ಗರಿ: ಇಲ್ಲಿದೆ ಪ್ರಶಸ್ತಿ ವಿಜೇತ ಎಲ್ಲಾ ಗಣ್ಯರ ಪಟ್ಟಿ

ಈ ವರ್ಷದ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಎಂದಿನಂತೆ ಗಣರಾಜ್ಯೋತ್ಸವದ ಮುಂಚಿನ ದಿನ ಕೇಂದ್ರ ಸರ್ಕಾರ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ.
07:54 AM Jan 26, 2024 IST | Ashitha S

ನವದೆಹಲಿ: ಈ ವರ್ಷದ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಎಂದಿನಂತೆ ಗಣರಾಜ್ಯೋತ್ಸವದ ಮುಂಚಿನ ದಿನ ಕೇಂದ್ರ ಸರ್ಕಾರ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ.

Advertisement

ಇನ್ನು ಈ ಬಾರಿ ಕರ್ನಾಟಕದ ಏಳು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿದ್ದು, 25 ಸಾವಿರ ಜನರಿಗೆ ಉಚಿತ ಪ್ಲಾಸ್ಟಿಕ್ ಸರ್ಜರಿ ಮಾಡಿರುವ ಪ್ರೇಮಾ ಧನರಾಜ್, ಮೈಸೂರಿನ ಜೇನುಕುರುಬ ಹಾಡಿಯ ಸೋಮಣ್ಣ, ಕಾಸರಗೋಡಿನ ಭತ್ತದ ರೈತ ಸತ್ಯನಾರಾಯಣ ಬೇಲೇರಿ ಹಾಗೂ ರೋಹನ್ ಬೋಪಣ್ಣ ಸೇರಿದಂತೆ ಏಳು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ನಟ ಚಿರಂಜೀವಿ ಅವರಿಗೆ ಪದ್ಮ ವಿಭೂಷಣ ಗೌರವ ಲಭಿಸಿದೆ.

2024ರಲ್ಲಿ 132 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲು ಅನುಮೋದನೆ ನೀಡಲಾಗಿದ್ದು, ಈ ಪಟ್ಟಿಯಲ್ಲಿ 5 ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 110 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ. ಪ್ರಶಸ್ತಿ ಪುರಸ್ಕೃತರಲ್ಲಿ, 30 ಮಹಿಳೆಯರು ಮತ್ತು ಪಟ್ಟಿಯಲ್ಲಿ ವಿದೇಶಿ/NRI/PIO/OCI ವರ್ಗದಿಂದ 8 ವ್ಯಕ್ತಿಗಳು ಮತ್ತು 9 ಮರಣೋತ್ತರ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ.

Advertisement

ಪದ್ಮವಿಭೂಷಣ 2024 ವಿಜೇತರ ಪಟ್ಟಿ:

ಮೆಗಾಸ್ಟಾರ್ ಚಿರಂಜೀವಿ(ಚಿತ್ರರಂಗ)

ವೈಜಯಂತಿಮಾಲಾ ಬಾಲಿ (ಕಲೆ) - ತಮಿಳುನಾಡು

ಕೊನಿಡೆಲಾ ಚಿರಂಜೀವಿ (ಕಲೆ) - ಆಂಧ್ರ ಪ್ರದೇಶ

ಎಂ ವೆಂಕಯ್ಯ ನಾಯ್ಡು (ಸಾರ್ವಜನಿಕ ವ್ಯವಹಾರಗಳು) - ಆಂಧ್ರ ಪ್ರದೇಶ

ಬಿಂದೇಶ್ವರ ಪಾಠಕ್ (ಸಮಾಜ ಕೆಲಸ) - ಬಿಹಾರ

ಪದ್ಮಾ ಸುಬ್ರಮಣ್ಯಂ (ಕಲೆ) - ತಮಿಳುನಾಡು

ಪದ್ಮಭೂಷಣ 2024 ವಿಜೇತರು:

ಎಂ ಫಾತಿಮಾ ಬೀವಿ (ಸಾರ್ವಜನಿಕ ವ್ಯವಹಾರಗಳು) - ಕೇರಳ

ಮಿಥುನ್ ಚಕ್ರವರ್ತಿ (ಕಲೆ) - ಪಶ್ಚಿಮ ಬಂಗಾಳ

ಸೀತಾರಾಮ್ ಜಿಂದಾಲ್ (ವ್ಯಾಪಾರ ಮತ್ತು ಕೈಗಾರಿಕೆ) - ಕರ್ನಾಟಕ

ಯುವ ಲಿಯು (ವ್ಯಾಪಾರ ಮತ್ತು ಕೈಗಾರಿಕೆ) - ತೈವಾನ್

ಅಶ್ವಿನ್ ಬಾಲ್ಚಂದ್ ಮೆಹ್ತಾ (ಔಷಧ) - ಮಹಾರಾಷ್ಟ್ರ

ಸತ್ಯಬ್ರತ ಮುಖರ್ಜಿ (ಸಾರ್ವಜನಿಕ ವ್ಯವಹಾರಗಳು) - ಪಶ್ಚಿಮ ಬಂಗಾಳ

ರಾಮ್ ನಾಯಕ್ (ಸಾರ್ವಜನಿಕ ವ್ಯವಹಾರಗಳು) - ಮಹಾರಾಷ್ಟ್ರ

ತೇಜಸ್ ಮಧುಸೂದನ್ ಪಟೇಲ್ (ವೈದ್ಯಕೀಯ) - ಗುಜರಾತ್

ಓಲಂಚೇರಿ ರಾಜಗೋಪಾಲ್ (ಸಾರ್ವಜನಿಕ ವ್ಯವಹಾರಗಳು) - ಕೇರಳ

ದತ್ತಾತ್ರೇಯ ಅಂಬಾದಾಸ್ ಮಾಯಾಲು ಅಲಿಯಾಸ್ ರಾಜ್ದತ್ (ಕಲೆ) - ಮಹಾರಾಷ್ಟ್ರ

ಹೊರ್ಮುಸ್ಜಿ ಎನ್ ಕಾಮಾ (ಸಾಹಿತ್ಯ ಮತ್ತು ಶಿಕ್ಷಣ) - ಮಹಾರಾಷ್ಟ್ರ

ಟೊಗ್ಡಾನ್ ರಿಂಪೋಚೆ (ಇತರೆ - ಆಧ್ಯಾತ್ಮಿಕತೆ) - ಲಡಾಖ್

ಪ್ಯಾರೇಲಾಲ್ ಶರ್ಮಾ (ಕಲೆ) - ಮಹಾರಾಷ್ಟ್ರ

ಚಂದ್ರೇಶ್ವರ ಪ್ರಸಾದ್ ಠಾಕೂರ್ (ವೈದ್ಯಕೀಯ)-ಬಿಹಾರ

ಉಷಾ ಉತ್ತುಪ್ (ಕಲೆ) - ಪಶ್ಚಿಮ ಬಂಗಾಳ

ವಿಜಯಕಾಂತ್ (ಕಲೆ) - ತಮಿಳುನಾಡು

ಕುಂದನ್ ವ್ಯಾಸ್ (ಸಾಹಿತ್ಯ ಮತ್ತು ಶಿಕ್ಷಣ-ಪತ್ರಿಕೋದ್ಯಮ)-ಮಹಾರಾಷ್ಟ್ರ

Advertisement
Tags :
indiaLatestNewsNewsKannadaಕೇಂದ್ರ ಸರ್ಕಾರಗಣರಾಜ್ಯೋತ್ಸವನವದೆಹಲಿಪದ್ಮಭೂಷಣಪದ್ಮವಿಭೂಷಣ
Advertisement
Next Article