For the best experience, open
https://m.newskannada.com
on your mobile browser.
Advertisement

ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ "ನೋವು ಮುಕ್ತ ಮಂಗಳೂರು" ಅಭಿಯಾನ

ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ರುಮಟಾಲಜಿ (ಸಂಧಿವಾತ) ವಿಭಾಗ ಹಾಗೂ ಫಿಸಿಕಲ್ ಮೆಡಿಸಿನ್ ಮತ್ತು ರಿಹ್ಯಾಬಿಲಿಟೇಶನ್ (ದೈಹಿಕ ಔಷಧ ಮತ್ತು ಪುನರ್ವಸತಿ) ವಿಭಾಗವು ಜಂಟಿಯಾಗಿ ಮಂಗಳೂರಿನಲ್ಲಿ ಮೊದಲ ಬಾರಿಗೆ 'ನೋವು ಮುಕ್ತ ಮಂಗಳೂರು' ಅಭಿಯಾನವನ್ನು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಆಯೋಜಿಸುತ್ತಿದೆ.
02:16 PM May 04, 2024 IST | Ashika S
ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ  ನೋವು ಮುಕ್ತ ಮಂಗಳೂರು  ಅಭಿಯಾನ

ಮಂಗಳೂರು: ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ರುಮಟಾಲಜಿ (ಸಂಧಿವಾತ) ವಿಭಾಗ ಹಾಗೂ ಫಿಸಿಕಲ್ ಮೆಡಿಸಿನ್ ಮತ್ತು ರಿಹ್ಯಾಬಿಲಿಟೇಶನ್ (ದೈಹಿಕ ಔಷಧ ಮತ್ತು ಪುನರ್ವಸತಿ) ವಿಭಾಗವು ಜಂಟಿಯಾಗಿ ಮಂಗಳೂರಿನಲ್ಲಿ ಮೊದಲ ಬಾರಿಗೆ "ನೋವು ಮುಕ್ತ ಮಂಗಳೂರು" ಅಭಿಯಾನವನ್ನು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಆಯೋಜಿಸುತ್ತಿದೆ.

Advertisement

ಈ ಅಭಿಯಾನವು ಮೇ 6 ರಿಂದ ಮೇ 11 ರವರೆಗೆ ಬೆಳಗ್ಗೆ 9.30 ರಿಂದ ಸಂಜೆ 4.30 ರವರೆಗೆ ಹಮ್ಮಿಕೊಳ್ಳಲಾಗಿದ್ದು ಸಂಧಿ ನೋವು, ಕುತ್ತಿಗೆ ನೋವು/ ಬೆನ್ನು ನೋವು. ಕೈಗಳು ಮತ್ತು ಪಾದಗಳಲ್ಲಿ ಉರಿಯ ಅನುಭವ, ನರ ಸಂಬಂಧಿ ನೋವುಗಳಿಂದ ಬಳಲುತ್ತಿರುವವರು ಈ ನೋವು ಮುಕ್ತ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಆರ್ಥೈಟಿಸ್ (ರುಮಟಾಯ್ಡ್ ಆರ್ಥೈಟಿಸ್, ಸೋರಿಯಾಟಿಕ್ ಆರ್ಥೈಟಿಸ್, ಅಂಕಿಲೋಸಿಂಗ್ ಸ್ಪಾಂಡಿಲೈಟಿಸ್) ಓಸ್ಟಿಯೊಆರ್ಥೈಟಿಸ್, ಗೌಟ್, ಬೆನ್ನುಹುರಿ ಗಾಯಗಳಿಂದಾಗಿ ನೋವು/ ಲಕ್ವಾ, ಫೈಬೊಮಯಾಲ್ಟಿಯಾ/ ಮೇಯೊಫೇಶಿಯಲ್ ಪೈನ್ ಸಿಂಡೋಮ್, ಮಯೋಸೈಟಿಸ್‌/ ಎಸ್‌.ಎಲ್ಏ. ಮುಂತಾದ ಸಮಸ್ಯೆಗಳಿಗೆ ರುಮಟಾಲಜಿ ಮತ್ತು ಫಿಸಿಕಲ್ ಮೆಡಿಸಿನ್ ಪುನರ್ವಸತಿ ತಜ್ಞರಿಂದ ಉಚಿತ ಸಮಾಲೋಚನೆಯು ದೊರೆಯಲಿದೆ.

Advertisement

ಶಿಬಿರದಲ್ಲಿ ಸಮಾಲೋಚನೆ ಮತ್ತು ಫಿಸಿಯೋಥೆರಪಿ ಉಚಿತವಾಗಿದ್ದು ಲ್ಯಾಬೋರೇಟರಿ ಪರೀಕ್ಷೆಗಳಿಗೆ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು. ಈ ಶಿಬಿರವು ಅಪಾಯಿಂಟ್ಮೆಂಟ್ ಆಧಾರಿತವಾಗಿರುತ್ತದೆ.

ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೆಎಂಸಿ ಆಸ್ಪತ್ರೆ, ಅತ್ತಾವರದ ವೈದ್ಯಕೀಯ ಅಧೀಕ್ಷಕರು ಕರೆ ನೀಡಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ನೋಂದಾವಣೆ/ ಸಮಯ ಕಾಯ್ದಿರಿಸಿಕೊಳ್ಳಲು ದಯವಿಟ್ಟು 7022078002 ಕ್ಕೆ ಕರೆ ಮಾಡಿ.

Advertisement
Tags :
Advertisement