For the best experience, open
https://m.newskannada.com
on your mobile browser.
Advertisement

ಯುವತಿಯರೇ ಎಚ್ಚರ : ಮುಟ್ಟಿನ ನೋವಿಗೆ ಪೈನ್​​ ಕಿಲ್ಲರ್ ಸೇವಿಸಿ ಕೋಮಾಗೆ ಜಾರಿದ ಯುವತಿ

ಮುಟ್ಟಿನ ಸಮಯದಲ್ಲಿ ನೋವು ತಾಳಲಾರದೆ ಅನಿವಾರ್ಯಕ್ಕೆ ಪೈನ್​​ ಕಿಲ್ಲರ್ ಸೇವಿಸುವುದು ಈಗ ಸಾಮನ್ಯವಾಗಿಬಿಟ್ಟಿದೆ. ಕೆಲವರಿಗೆ ಇದರ ಪರಿಣಾಮವು ಅರಿವಾಗಿದೆ. ಆದರೂ ಇನ್ನೂ ಕೆಲವರು ತಿನ್ನುವುದನ್ನು ನಿಲ್ಲಿಸಿಲ್ಲ.
11:50 AM May 08, 2024 IST | Nisarga K
ಯುವತಿಯರೇ ಎಚ್ಚರ   ಮುಟ್ಟಿನ ನೋವಿಗೆ ಪೈನ್​​ ಕಿಲ್ಲರ್ ಸೇವಿಸಿ ಕೋಮಾಗೆ ಜಾರಿದ ಯುವತಿ
ಯುವತಿಯರೇ ಎಚ್ಚರ : ಮುಟ್ಟಿನ ನೋವಿಗೆ ಪೈನ್​​ ಕಿಲ್ಲರ್ ಸೇವಿಸಿ ಕೋಮಾಗೆ ಜಾರಿದ ಯುವತಿ

ಬ್ರೆಜಿಲ್‌: ಮುಟ್ಟಿನ ಸಮಯದಲ್ಲಿ ನೋವು ತಾಳಲಾರದೆ ಅನಿವಾರ್ಯಕ್ಕೆ ಪೈನ್​​ ಕಿಲ್ಲರ್ ಸೇವಿಸುವುದು ಈಗ ಸಾಮನ್ಯವಾಗಿಬಿಟ್ಟಿದೆ. ಕೆಲವರಿಗೆ ಇದರ ಪರಿಣಾಮವು ಅರಿವಾಗಿದೆ. ಆದರೂ ಇನ್ನೂ ಕೆಲವರು ತಿನ್ನುವುದನ್ನು ನಿಲ್ಲಿಸಿಲ್ಲ.

Advertisement

ಇತ್ತೀಚಿಗಷ್ಟೇ ವಿಪರೀತ ಮುಟ್ಟಿನ ನೋವಿನಿಂದ ಬಳಲುತ್ತಿದ್ದ ಇಂಗ್ಲೆಂಡ್​​ನ ಲೈಲಾ ಎಂಬ 16 ವರ್ಷದ ಬಾಲಕಿ ತನ್ನ ಸ್ನೇಹಿತರ ಸಲಹೆಯ ಮೇರೆಗೆ ಪ್ರತೀ ತಿಂಗಳು ನೋವು ನಿವಾರಕ ಮಾತ್ರೆ ಸೇವಿಸುತ್ತಿದ್ದ ಪರಿಣಾಮ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ್ದಳು. ಇದೀಗ ಅಂತದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಬ್ರೆಜಿಲ್‌ನ ಜಾಕ್ವೆಲಿನ್ ಗಮಾಕ್​​ ಎಂಬ ಯುವತಿ ಮುಟ್ಟಿನ ನೋವು ತಾಳಲಾರದೇ ನೋವು ನಿವಾರಕ ಮಾತ್ರೆ ಸೇವಿಸಿದ್ದು, ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿದ್ದು ಕೋಮಾಗೆ ಜಾರಿದ್ದಾಳೆ. ಯುವತಿ ಮುಟ್ಟಿನ ನೋವಿಗೆ ಐಬುಪ್ರೊಫೆನ್ ಮಾತ್ರೆ ಸೇವನೆ ಮಾಡಿದ್ದಾಳೆ. ಮಾತ್ರೆ ಸೇವಿಸಿದ ಕೆಲ ಹೊತ್ತಿನ ಬಳಿಕ ಕಣ್ಣು ನೋವು ಹಾಗೂ ಮೈ ಮೇಲೆ ಗುಳ್ಳೆ ಕಾಣಿಸಿಕೊಂಡಿದೆ. ತಕ್ಷಣ ಆಕೆಯ ಪೋಷಕರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಯನ್ನು ಐಸಿಯುಗೆ ದಾಖಲಿಸಿದ ಕೆಲ ಹೊತ್ತಿನಲ್ಲೇ ಕೋಮಾಗೆ ಜಾರಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

Advertisement

Advertisement
Tags :
Advertisement