For the best experience, open
https://m.newskannada.com
on your mobile browser.
Advertisement

ತಂಡದ ಸಹ ಆಟಗಾರನ ಬ್ಯಾಗ್ ನಿಂದ ಹಣ ಕದ್ದು ಪಾಕ್ ಬಾಕ್ಸರ್ ನಾಪತ್ತೆ!

ಪಾಕಿಸ್ತಾನದ ಬಾಕ್ಸರ್ ಒಬ್ಬರು ತಂಡದ ಸಹ ಆಟಗಾರನ ಬ್ಯಾಗ್‌ ನಿಂದ ಹಣವನ್ನು ಕದ್ದ ನಂತರ ಇಟಲಿಯಲ್ಲಿ ಕಣ್ಮರೆಯಾಗಿದ್ದಾರೆ ಎಂದು ಪಾಕಿಸ್ತಾನ ಅಮೆಚೂರ್ ಬಾಕ್ಸಿಂಗ್ ಫೆಡರೇಶನ್ ಮಂಗಳವಾರ ತಿಳಿಸಿದೆ.
02:59 PM Mar 05, 2024 IST | Ashitha S
ತಂಡದ ಸಹ ಆಟಗಾರನ ಬ್ಯಾಗ್ ನಿಂದ ಹಣ ಕದ್ದು ಪಾಕ್ ಬಾಕ್ಸರ್ ನಾಪತ್ತೆ

ಪಾಕಿಸ್ತಾನ:  ಪಾಕಿಸ್ತಾನದ ಬಾಕ್ಸರ್ ಒಬ್ಬರು ತಂಡದ ಸಹ ಆಟಗಾರನ ಬ್ಯಾಗ್‌ ನಿಂದ ಹಣವನ್ನು ಕದ್ದ ನಂತರ ಇಟಲಿಯಲ್ಲಿ ಕಣ್ಮರೆಯಾಗಿದ್ದಾರೆ ಎಂದು ಪಾಕಿಸ್ತಾನ ಅಮೆಚೂರ್ ಬಾಕ್ಸಿಂಗ್ ಫೆಡರೇಶನ್ ಇಂದು ತಿಳಿಸಿದೆ.

Advertisement

ಪಾಕಿಸ್ತಾನದ ಜೊಹೈಬ್ ರಶೀದ್ ಒಲಿಂಪಿಕ್ ಅರ್ಹತಾ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಟಲಿಗೆ ತೆರಳಿದ್ದಾರೆ. ಫೆಡರೇಶನ್ ನ ಹಿರಿಯ ಅಧಿಕಾರಿಯೊಬ್ಬರು ಇದನ್ನು ಇಟಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಗಮನಕ್ಕೆ ತಂದಿದ್ದಾರೆ ಮತ್ತು ಘಟನೆಯ ಬಗ್ಗೆ ಪೊಲೀಸ್ ವರದಿಯನ್ನು ಸಹ ಸಲ್ಲಿಸಿದ್ದಾರೆ ಎಂದು ಹೇಳಿದರು.

ಒಲಿಂಪಿಕ್ ಅರ್ಹತಾ ಪಂದ್ಯಾವಳಿಯಲ್ಲಿ ಭಾಗವಹಿಸಲು ಐದು ಸದಸ್ಯರ ತಂಡದ ಭಾಗವಾಗಿ ಅಲ್ಲಿಗೆ ಹೋಗಿದ್ದ ಜೊಹೈಬ್ ರಶೀದ್ ವರ್ತಿಸಿದ ರೀತಿ ಫೆಡರೇಶನ್ ಮತ್ತು ದೇಶಕ್ಕೆ ಅತ್ಯಂತ ಮುಜುಗರವನ್ನುಂಟು ಮಾಡಿದೆ” ಎಂದು ರಾಷ್ಟ್ರೀಯ ಒಕ್ಕೂಟದ ಕಾರ್ಯದರ್ಶಿ ಕರ್ನಲ್ ನಾಸಿರ್ ಅಹ್ಮದ್ ಹೇಳಿದ್ದಾರೆ.

Advertisement

Advertisement
Tags :
Advertisement