For the best experience, open
https://m.newskannada.com
on your mobile browser.
Advertisement

ಪ್ರಿಯಕರನ ವರಿಸಲು 45 ದಿನಗಳ ವೀಸಾ ಪಡೆದು ಭಾರತಕ್ಕೆ ಬರಲಿದ್ದಾರೆ ಪಾಕ್​ ಯುವತಿ

ಭಾರತದ ಯುವಕ ಹಾಗೂ ಪಾಕಿಸ್ತಾನಿ ಯುವತಿ ನಡುವೆ ಪ್ರೀತಿಯ ಮೊಳಕೆ ಚಿಗುರೊಡೆದಿದೆ. ಹಾಗೆಯೇ ಯುವತಿಯು 45 ದಿನಗಳ ವೀಸಾ ಪಡೆದು ಯುವಕನನ್ನು ಮದುವೆಯಾಗಲು ಭಾರತಕ್ಕೆ ಬರಲಿದ್ದಾರೆ. ಅಟ್ಟಾರಿ-ವಾಘಾ ಗಡಿ ಮೂಲಕ ದೇಶಕ್ಕೆ ಬರುತ್ತಿದ್ದು, ಭಾರತ ಸರ್ಕಾರ ಆಕೆಗೆ 45 ದಿನಗಳ ವೀಸಾ ನೀಡಿದೆ.
01:30 PM Dec 05, 2023 IST | Ashitha S
ಪ್ರಿಯಕರನ ವರಿಸಲು 45 ದಿನಗಳ ವೀಸಾ ಪಡೆದು ಭಾರತಕ್ಕೆ ಬರಲಿದ್ದಾರೆ ಪಾಕ್​ ಯುವತಿ

ದೆಹಲಿ: ಭಾರತದ ಯುವಕ ಹಾಗೂ ಪಾಕಿಸ್ತಾನಿ ಯುವತಿ ನಡುವೆ ಪ್ರೀತಿಯ ಮೊಳಕೆ ಚಿಗುರೊಡೆದಿದೆ. ಹಾಗೆಯೇ ಯುವತಿಯು 45 ದಿನಗಳ ವೀಸಾ ಪಡೆದು ಯುವಕನನ್ನು ಮದುವೆಯಾಗಲು ಭಾರತಕ್ಕೆ ಬರಲಿದ್ದಾರೆ. ಅಟ್ಟಾರಿ-ವಾಘಾ ಗಡಿ ಮೂಲಕ ದೇಶಕ್ಕೆ ಬರುತ್ತಿದ್ದು, ಭಾರತ ಸರ್ಕಾರ ಆಕೆಗೆ 45 ದಿನಗಳ ವೀಸಾ ನೀಡಿದೆ.

Advertisement

ಜವ್ರಿಯಾ ಕೋಲ್ಕತ್ತಾ ಮೂಲದ ಸಮೀರ್ ಖಾನ್ ಅವರನ್ನು ವರಿಸಲಿದ್ದಾರೆ. ವರದಿಗಳ ಪ್ರಕಾರ, ಇಬ್ಬರು ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಹಿಳೆ ತನ್ನ ತಂದೆಯೊಂದಿಗೆ ಭಾರತಕ್ಕೆ ಬರಲಿದ್ದಾರೆ. ಕರಾಚಿ ನಿವಾಸಿ, ಅಜ್ಮತ್ ಇಸ್ಮಾಯಿಲ್ ಖಾನ್ ಮತ್ತು ಅವರ ಮಗಳನ್ನು ಸಮೀರ್ ಖಾನ್ ಮತ್ತು ಅವರ ತಂದೆ ಅಹ್ಮದ್ ಕಮಲ್ ಖಾನ್ ಯೂಸುಫ್ಜೈ ಅವರು ದೇಶಕ್ಕೆ ಸ್ವಾಗತಿಸಲಿದ್ದಾರೆ.

ಈ ಹಿಂದೆ ಸೀಮಾ ಎಂಬುವವರು ಭಾರತದ ಸಚಿನ್ ಮೀನಾ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದು, ಮದುವೆ ಮಾಡಿಕೊಳ್ಳುವ ಸಲುವಾಗಿ ತನ್ನ ಮಕ್ಕಳನ್ನೂ ಕಡೆದುಕೊಂಡು ಭಾರತಕ್ಕೆ ಬಂದಿದ್ದರು. ಇತ್ತ ಅಂಜು ಎಂಬುವವರು ಪಾಕಿಸ್ತಾನಿ ಸ್ನೇಹಿತನ್ನು ಮದುವೆಯಾಗಲು ಪತಿ ಹಾಗೂ ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ್ದ ಘಟನೆಯೂ ವರದಿಯಾಗಿತ್ತು.

Advertisement

Advertisement
Tags :
Advertisement