For the best experience, open
https://m.newskannada.com
on your mobile browser.
Advertisement

ಪಾಕಿಸ್ತಾನ: 2,000 ವರ್ಷ ಹಳೆಯ ನಾಣ್ಯಗಳ ನಿಧಿ ಪತ್ತೆ

ನಮ್ಮ ರಾಜ್ಯದ ಕೊಡಗಿನಲ್ಲಿ ಕಂಪನಿಯೊಂದಕ್ಕೆ ಸೇರಿದ ಕಾಫಿ ಎಸ್ಟೇಟ್‌ ನಲ್ಲಿದ್ದ ದೇವಳ ಮರುನಿರ್ಮಾಣ ವೇಳೆ ಪುರಾತನ ನಿಧಿ ಪತ್ತೆಯಾಗಿದ್ದು ಎಲ್ಲರ ಕುತೂಹಲ ಕೆರಳಿಸಿತ್ತು.
05:04 PM Dec 02, 2023 IST | Ramya Bolantoor
ಪಾಕಿಸ್ತಾನ  2 000 ವರ್ಷ ಹಳೆಯ ನಾಣ್ಯಗಳ ನಿಧಿ ಪತ್ತೆ

ಪಾಕಿಸ್ತಾನ: ನಮ್ಮ ರಾಜ್ಯದ ಕೊಡಗಿನಲ್ಲಿ ಕಂಪನಿಯೊಂದಕ್ಕೆ ಸೇರಿದ ಕಾಫಿ ಎಸ್ಟೇಟ್‌ ನಲ್ಲಿದ್ದ ದೇವಳ ಮರುನಿರ್ಮಾಣ ವೇಳೆ ಪುರಾತನ ನಿಧಿ ಪತ್ತೆಯಾಗಿದ್ದು ಎಲ್ಲರ ಕುತೂಹಲ ಕೆರಳಿಸಿತ್ತು.

Advertisement

ಇದೀಗ ದೂರದ ಪಾಕಿಸ್ತಾನದಲ್ಲಿ ಕುಶಾನು ಕಾಲದ ಅಪೂರ್ವ ಸಂಪತ್ತು ಪತ್ತೆಯಾಗಿದೆ. ಬರೋಬ್ಬರಿ 2,000 ವರ್ಷಗಳಷ್ಟು ಹಳೆಯದಾದ ನಾಣ್ಯಗಳನ್ನು ಒಳಗೊಂಡಿರುವ ಅತ್ಯಂತ ಅಪರೂಪದ ನಿಧಿ ಕಂಡುಬಂದಿದೆ. ಈ ನಿಧಿಯಲ್ಲಿನ ಅನೇಕ ನಾಣ್ಯಗಳು ತಾಮ್ರದಿಂದ ಮಾಡಲ್ಪಟ್ಟಿದೆ. ಇದು ಬೌದ್ಧ ದೇವಾಲಯಗಳ ಗೋರಿಗಳಲ್ಲಿ ಕಂಡುಬಂದಿದೆ. ಲೈವ್‌ ಸೈನ್ಸ್ ಈ ನಿಧಿಗೆ ಸಂಬಂಧಿಸಿದ ವರದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಮಧ್ಯ ಆಗ್ನೇಯ ಪಾಕಿಸ್ತಾನದಲ್ಲಿ ಕ್ರಿ.ಪೂ. 2600 ರ ಮೊಹೆಂಜೋದಾರೋ ಕಾಲದ ಬೃಹತ್ ರಚನೆಗಳಲ್ಲಿ ಇದು ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.

ಈ ನಿಧಿಯ ಬಗ್ಗೆ ಪುರಾತತ್ವಶಾಸ್ತ್ರಜ್ಞ, ಮಾರ್ಗದರ್ಶಿ ಶೇಖ್ ಜಾವೇದ್ ಅಲಿ ಸಿಂಧಿ ಅವರು ಹೀಗೆ ಹೆಳಿದ್ದಾರೆ. ಇದು ಮೊಹೆಂಜೋದಾರೋ ಪತನದ ನಂತರದ, ಸುಮಾರು 1600 ವರ್ಷಗಳಷ್ಟು ಹಳೆಯದು. ಅದರ ನಂತರ ಬಂಡೆಗಳ ಮೇಲೆ ಸ್ತೂಪವನ್ನು ನಿರ್ಮಿಸಲಾಯಿತು ಎಂದಿದ್ದಾರೆ. ಈ ನಾಣ್ಯಗಳನ್ನು ಪತ್ತೆ ಮಾಡಿದ ತಂಡದಲ್ಲಿ ಶೇಖ್ ಜಾವೇದ್ ಕೂಡ ಒಬ್ಬರು.

Advertisement

ಈಗ ಪತ್ತೆಯಾಗಿರುವ ನಾಣ್ಯಗಳ ಬಣ್ಣವು ಸಂಪೂರ್ಣವಾಗಿ ಹಸಿರು ಬಣ್ಣದ್ದಾಗಿದೆ. ಏಕೆಂದರೆ ತಾಮ್ರವನ್ನು ಗಾಳಿಗೆ ತಾಗಿಸಿದಾಗ ಅದರ ಬಣ್ಣ ಬದಲಾಗುತ್ತದೆ. ಶತಮಾನಗಳಿಂದಲೂ ಈ ನಾಣ್ಯಗಳು ಪೆಟ್ಟಿಗೆಯಲ್ಲಿ ಉಳಿದುಕೊಂಡಿದ್ದರಿಂದ ಅವು ದೊಡ್ಡ ಗುಂಡು ಕಲ್ಲಾಗಿ ಮಾರ್ಪಟ್ಟವು. ಈ ನಿಧಿಯು ಪುರಾತತ್ತ್ವಜ್ಞರ ಪ್ರಕಾರ ಸುಮಾರು 5.5 ಕಿಲೋಗಳಷ್ಟು ತೂಗುತ್ತದೆ.

Advertisement
Tags :
Advertisement