For the best experience, open
https://m.newskannada.com
on your mobile browser.
Advertisement

ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ದಾಳಿ: 8 ಮಂದಿ ಸಾವು

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ರಾತ್ರೋರಾತ್ರಿ ವೈಮಾನಿಕ ದಾಳಿ ನಡೆಸಿದ್ದರ ಬೆನ್ನಲ್ಲೇ ತಾಲಿಬಾನ್ ಗಡಿಯಾದ್ಯಂತ ಗುಂಡು ಹಾರಿಸಿದೆ ಎಂದು ಅಲ್ ಜಜೀರಾ ಮಾಧ್ಯಮ ವರದಿಯಲ್ಲಿ ಹೇಳಿದೆ.
02:56 PM Mar 19, 2024 IST | Gayathri SG
ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ದಾಳಿ  8 ಮಂದಿ ಸಾವು

ಇಸ್ಲಾಮಾಬಾದ್: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ರಾತ್ರೋರಾತ್ರಿ ವೈಮಾನಿಕ ದಾಳಿ ನಡೆಸಿದ್ದರ ಬೆನ್ನಲ್ಲೇ ತಾಲಿಬಾನ್ ಗಡಿಯಾದ್ಯಂತ ಗುಂಡು ಹಾರಿಸಿದೆ ಎಂದು ಅಲ್ ಜಜೀರಾ ಮಾಧ್ಯಮ ವರದಿಯಲ್ಲಿ ಹೇಳಿದೆ.

Advertisement

ಗಡಿ ಪ್ರದೇಶಗಳಲ್ಲಿ ಅಡಗಿರುವ ಸಶಸ್ತ್ರ ಗುಂಪುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನ ಹೇಳಿದೆ. ಈ ದಾಳಿಯಲ್ಲಿ ಎಂಟು ಮಹಿಳೆಯರು ಮತ್ತು ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ತಾಲಿಬಾನ್ ತಿಳಿಸಿದೆ.

ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಸೋಮವಾರದ ನಂತರ ಪಾಕಿಸ್ತಾನದ ನೆಲೆಗಳ ಮೇಲೆ ಗಡಿಯುದ್ದಕ್ಕೂ ಗುಂಡಿನ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ. ಇಸ್ಲಾಮಾಬಾದ್ ಈ ಕುರಿತು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Advertisement

Advertisement
Tags :
Advertisement