For the best experience, open
https://m.newskannada.com
on your mobile browser.
Advertisement

ಇರಾನ್​ನಲ್ಲಿ ಉಗ್ರರ ನೆಲೆ ಗುರಿಯಾಗಿಸಿ ಪ್ರತಿ ದಾಳಿ ನಡೆಸಿದ ಪಾಕ್‌

ಬಲೂಚಿಸ್ತಾನದಲ್ಲಿ ಇರಾನ್‌ ನ ಮಾರಣಾಂತಿಕ ಕ್ಷಿಪಣಿ ಮತ್ತು ಡ್ರೋನ್ ದಾಳಿ ಬಳಿಕ ಪಾಕಿಸ್ತಾನವು ಇರಾನ್ ಪ್ರದೇಶದೊಳಗಿನ ಉಗ್ರಗಾಮಿ ಗುರಿಗಳ ಮೇಲೆ ವೈಮಾನಿಕ ದಾಳಿಯನ್ನು ಪ್ರಾರಂಭಿಸಿದೆ.
10:16 AM Jan 18, 2024 IST | Ramya Bolantoor
ಇರಾನ್​ನಲ್ಲಿ ಉಗ್ರರ ನೆಲೆ ಗುರಿಯಾಗಿಸಿ ಪ್ರತಿ ದಾಳಿ ನಡೆಸಿದ ಪಾಕ್‌

ಪಾಕಿಸ್ತಾನ್:‌ ಬಲೂಚಿಸ್ತಾನದಲ್ಲಿ ಇರಾನ್‌ ನ ಮಾರಣಾಂತಿಕ ಕ್ಷಿಪಣಿ ಮತ್ತು ಡ್ರೋನ್ ದಾಳಿ ಬಳಿಕ ಪಾಕಿಸ್ತಾನವು ಇರಾನ್ ಪ್ರದೇಶದೊಳಗಿನ ಉಗ್ರಗಾಮಿ ಗುರಿಗಳ ಮೇಲೆ ವೈಮಾನಿಕ ದಾಳಿಯನ್ನು ಪ್ರಾರಂಭಿಸಿದೆ. ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಇರಾನ್ ಆಕ್ರಮಣವನ್ನು ಒಪ್ಪಿಕೊಂಡ ಒಂದು ದಿನದ ನಂತರ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

Advertisement

ಬಲೂಚಿಸ್ತಾನದ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಮೂವರಿಗೆ ಗಾಯಗಳಾಗಿವೆ. ಮಂಗಳವಾರ ನಡೆದ ಇರಾನ್ ಕಾರ್ಯಾಚರಣೆಯನ್ನು ಟೆಹ್ರಾನ್‌ನ ವಿದೇಶಾಂಗ ಸಚಿವರು ಒಪ್ಪಿಕೊಂಡಿದ್ದಾರೆ, ಅವರು ದಾಳಿಗಳು ಜೈಶ್ ಅಲ್-ಅದ್ಲ್ ಅನ್ನು ಗುರಿಯಾಗಿರಿಸಿಕೊಂಡಿವೆ ಎಂದು ಹೇಳಿದ್ದಾರೆ.

ಇರಾನ್‌ಗೆ ತನ್ನ ರಾಯಭಾರಿಯನ್ನು ಹಿಂಪಡೆಯುವುದು ಮತ್ತು ಇರಾನ್ ರಾಯಭಾರಿಯನ್ನು ಪಾಕ್‌ ಗೆ ಹಿಂದಿರುಗದಂತೆ ತಡೆಯುವುದು ಸೇರಿದಂತೆ ಇಸ್ಲಾಮಾಬಾದ್ ಪ್ರತಿಯಾಗಿ ಬಲವಾದ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿತು. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮುಮ್ತಾಜ್ ಬಲೂಚ್ ಅವರು ಅಂತಾರಾಷ್ಟ್ರೀಯ ಮಾನದಂಡಗಳ ಉಲ್ಲಂಘನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

Advertisement
Tags :
Advertisement