ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಂಡರ್ 19 ಏಷ್ಯಾಕಪ್: ಭಾರತದ ವಿರುದ್ಧ ಪಾಕ್ ತಂಡಕ್ಕೆ ಭರ್ಜರಿ ಜಯ

ಅಂಡರ್ 19 ಏಷ್ಯಾಕಪ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ್ ಜಯ ಸಾಧಿಸಿದೆ. ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ಈ ಪಂದ್ಯ ನಡೆದಿದ್ದು, ಟಾಸ್ ಗೆದ್ದ ಪಾಕ್ ತಂಡವು ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಆದರ್ಶ್ ಸಿಂಗ್ (62) ಹಾಗೂ ಅರ್ಶಿನ್ ಕುಲ್ಕರ್ಣಿ (24) ಉತ್ತಮ ಆರಂಭಕೊಟ್ಟರು.
08:52 PM Dec 10, 2023 IST | Gayathri SG

ದುಬೈ: ಅಂಡರ್ 19 ಏಷ್ಯಾಕಪ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ್ ಜಯ ಸಾಧಿಸಿದೆ. ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ಈ ಪಂದ್ಯ ನಡೆದಿದ್ದು, ಟಾಸ್ ಗೆದ್ದ ಪಾಕ್ ತಂಡವು ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಆದರ್ಶ್ ಸಿಂಗ್ (62) ಹಾಗೂ ಅರ್ಶಿನ್ ಕುಲ್ಕರ್ಣಿ (24) ಉತ್ತಮ ಆರಂಭಕೊಟ್ಟರು.

Advertisement

ಭಾರತ ತಂಡವು 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 259 ರನ್ ಕಲೆಹಾಕಿತು. 260 ರನ್​ಗಳ ಸ್ಪರ್ಧಾತ್ಮಕ ಗುರಿ ಪಡೆದ ಪಾಕಿಸ್ತಾನ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ಬೌಲರ್ ಮುರುಗನ್ ಅಭಿಷೇಕ್ ಯಶಸ್ವಿಯಾಗಿದ್ದರು. ಕೇವಲ 8 ರನ್​ಗೆ ಶಾಮಿಲ್ ಹುಸೇನ್ ವಿಕೆಟ್ ಪಡೆದು ಮೊದಲ ಯಶಸ್ಸು ತಂದುಕೊಟ್ಟರು. ಆದರೆ 2ನೇ ವಿಕೆಟ್​ಗೆ ಜೊತೆಯಾದ ಶಹಝೈಬ್ ಖಾನ್ ಹಾಗೂ ಅಝಾನ್ ಅವೈಸ್ 110 ರನ್​ಗಳ ಭರ್ಜರಿ ಜೊತೆಯಾಟವಾಡಿದರು. ಈ ಹಂತದಲ್ಲಿ ಶಹಝೈಬ್ 63 ರನ್ ಬಾರಿಸಿ ಔಟಾದರು. ನಂತರ ಆಟ ಮುಂದುವರೆಸಿದ ಅಝಾನ್ ಅವೈಸ್ 130 ಎಸೆತಗಳಲ್ಲಿ 10 ಫೋರ್​ಗಳೊಂದಿಗೆ ಅಜೇಯ 105 ರನ್ ಬಾರಿಸಿದರು. ಅಲ್ಲದೆ ನಾಯಕ ಸಾದ್ ಬೇಗ್ (68) ಜೊತೆಗೂಡಿ 47 ಓವರ್​ಗಳಲ್ಲಿ ತಂಡವನ್ನು ಗುರಿಮುಟ್ಟಿಸಿದರು. ಈ ಮೂಲಕ ಪಾಕಿಸ್ತಾನ್ ತಂಡವು ಟೀಮ್ ಇಂಡಿಯಾ ವಿರುದ್ಧ 8 ವಿಕೆಟ್​ಗಳ ಜಯಗಳಿಸಿದೆ.

Advertisement
Advertisement
Tags :
cricketLatestNewsNewsKannada
Advertisement
Next Article