ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪಾಕ್ ಚುನಾವಣೆ: ಅಭ್ಯರ್ಥಿ ಕಚೇರಿಯ ಹೊರಗೆ ಬಾಂಬ್​​ ಸ್ಫೋಟ, 25 ಮಂದಿ ಸಾವು

ಪಾಕಿಸ್ತಾನದಲ್ಲಿ ಚುನಾವಣೆ ವೇಳೆ ಬಾಂಬ್​​​​ಗಳ ಸದ್ದು ಹೆಚ್ಚಾಗಿದೆ. ಪಾಕಿಸ್ತಾನದ ಬಲೂಚಿಸ್ತಾನ ಪಿಶಿನ್‌ನಲ್ಲಿರುವ ಸ್ವತಂತ್ರ ಅಭ್ಯರ್ಥಿಯ ಪಕ್ಷದ ಕಚೇರಿಯ ಹೊರಗೆ ಇಂದು (ಫೆ.7) ಬಾಂಬ್​​ ಸ್ಫೋಟಗೊಂಡಿದ್ದು, ಹನ್ನೆರಡು ಜನ ಸಾವನ್ನಪ್ಪಿದ್ದಾರೆ.
03:19 PM Feb 07, 2024 IST | Ashitha S

ಬಲೂಚಿಸ್ತಾನ: ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗೂ ಮುನ್ನ ಇಂದು (ಫೆ.07) ಚುನಾವಣಾ ಅಭ್ಯರ್ಥಿಗಳನ್ನು ಗುರಿಯಾಗಿರಿಸಿಕೊಂಡು ನಡೆಸಿದ ಎರಡು ಪ್ರತ್ಯೇಕ ಬಾಂಬ್‌ ಸ್ಫೋಟದಲ್ಲಿ 25ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 40 ಜನರು ಗಾಯಗೊಂಡಿರುವ ಘಟನೆ ಬಲೂಚಿಸ್ತಾನ್‌ ನಲ್ಲಿ ನಡೆದಿದೆ.

Advertisement

ಪಾಕ್‌ ಸಾರ್ವತ್ರಿಕ ಚುನಾವಣೆಗೆ ಒಂದು ದಿನ ಬಾಕಿ ಇದ್ದು, ಬಲೂಚಿಸ್ತಾನದ ಪಿಶಿನ್‌ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯ ಚುನಾವಣಾ ಕಚೇರಿ ಹೊರಭಾಗದಲ್ಲಿ ಒಂದು ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ.

ಮುಂಬರುವ ಚುನಾವಣೆಯ ಸ್ವತಂತ್ರ ಅಭ್ಯರ್ಥಿಯಾಗಿದ್ದ ಅಸ್ಫಾಂಡ್‌ ಯಾರ್‌ ಖಾನ್‌ ಅವರ ಕಚೇರಿಯನ್ನು ಗುರಿಯಾಗಿರಿಸಿಕೊಂಡು ಸ್ಫೋಟ ನಡೆಸಲಾಗಿದೆ. ಎರಡು ಪ್ರತ್ಯೇಕ ಸ್ಫೋಟ ಘಟನೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಗಾಯಗೊಂಡವರನ್ನು ಖಾನೋಜೈಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ವಿವರಿಸಿದೆ.

Advertisement

ಚುನಾವಣೆಗೂ ಮುನ್ನ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಪಾಕಿಸ್ತಾನದ ಚುನಾವಣಾ ಆಯೋಗ ತಿಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ನೀಡುವಂತೆ ಆಯೋಗ ಬಲೂಚಿಸ್ತಾನ್‌ ಮುಖ್ಯ ಕಾರ್ಯದರ್ಶಿ ಮತ್ತು ಐಜಿಪಿ ಅವರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದೆ.

ಚುನಾವಣಾ ಕಚೇರಿಯ ಹೊರಭಾಗದ ಪಾರ್ಕ್‌ ಸ್ಥಳದಲ್ಲಿ ಸ್ಫೋಟ ಸಂಭವಿಸಿದ್ದು, ಎಂಟು ಮಂದಿ ಕಾರ್ಯಕರ್ತರು ಸ್ಥಳದಲ್ಲಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವುದಾಗಿ ಸ್ವತಂತ್ರ ಅಭ್ಯರ್ಥಿ ಅಸ್ಫಾಂಡ್‌ ಯಾರ್‌ ಖಾನ್‌ ಜಿಯೋ ನ್ಯೂಸ್‌ ಜತೆ ಮಾತನಾಡುತ್ತ ತಿಳಿಸಿದ್ದಾರೆ.

Advertisement
Tags :
BOMB BLASTBreakingNewsindiaNewsKannadaPAKISTAN
Advertisement
Next Article