ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿಶ್ವಕಪ್‌ ಗೆದ್ದರೆ, ತಂಡದ ಪ್ರತಿ ಆಟಗಾರನಿಗೆ 1 ಲಕ್ಷ US ಡಾಲರ್‌ ಘೋಷಣೆ ಮಾಡಿದ ಪಾಕ್‌ 

ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನ ದಯನೀಯ ಸ್ಥಿತಿ ತಲುಪಿದ್ದರು, ಕ್ರಿಕೆಟ್‌ ಆಟಗಾರರಿಗೆ ಬಂಪರ್‌ ಬಹುಮಾನ ಘೋಷಣೆ ಮಾಡಿದೆ. 
01:54 PM May 06, 2024 IST | Chaitra Kulal

ಇಸ್ಲಾಮಾಬಾದ್‌: ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನ ದಯನೀಯ ಸ್ಥಿತಿ ತಲುಪಿದ್ದರು, ಕ್ರಿಕೆಟ್‌ ಆಟಗಾರರಿಗೆ ಬಂಪರ್‌ ಬಹುಮಾನ ಘೋಷಣೆ ಮಾಡಿದೆ.

Advertisement

ಪಾಕ್‌ ನಲ್ಲಿ 1 ಕಿಲೋ ಗೋಧಿ ಹಿಟ್ಟಿಗೆ 800 ರೂ.ಗಳು, 1 ರೊಟ್ಟಿಯ ಬೆಲೆ 25  ರೂ. ತಲುಪಿದೆ. ಪೆಟ್ರೋಲ್‌ ದರವಂತು ಹೇಳತೀರದಾಗಿದೆ. ಹೀಗಿದ್ದರೂ ಜೂನ್‌ ತಿಂಗಳಲ್ಲಿ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಗೆದ್ದರೆ ತಂಡದ ಪ್ರತಿ ಆಟಗಾರನಿಗೂ 1 ಲಕ್ಷ US ಡಾಲರ್‌ (ಭಾರತದ ರೂಪಾಯಿ 83.44 ಲಕ್ಷ ರೂ.) ಬಹುಮಾನ ನೀಡುವುದಾಗಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಘೋಷಣೆ ಮಾಡಿದೆ.

ಪಾಕ್‌ ತಂಡವು ಐರ್ಲೆಂಡ್‌ ಮತ್ತು ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಗೆ ಹೊರಡುವ ಮುನ್ನ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಆಟಗಾರರೊಂದಿಗೆ 2 ಗಂಟೆಗಳ ಕಾಲ ಸಮಾಲೋಚನೆ ನಡೆಸಿದರು.

Advertisement

ಈ ವೇಳೆ ಬಹುಮಾನದ ಮೊತ್ತವನ್ನು ಘೋಷಣೆ ಮಾಡಿದರಲ್ಲದೇ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿಯುವ ಘನತೆಗೆ ಹೋಲಿಸಿದರೆ, ಈ ಹಣ ಏನೇನು ಅಲ್ಲ. ಆದ್ದರಿಂದ ಟಿ20 ವಿಶ್ವಕಪ್‌ ಗೆದ್ದರೆ ತಂಡದ ಪ್ರತಿಯೊಬ್ಬ ಆಟಗಾರನಿಗೂ 100,000 ಯುಎಸ್‌ ಡಾಲರ್‌ ಬಹುಮಾನ ನೀಡುವುದಾಗಿ ಘೋಷಿಸಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ಆಟಗಾರರಿಗೆ ಖಡಕ್‌ ಸೂಚನೆ ನೀಡಿದ ಪಿಸಿಬಿ ಮುಖ್ಯಸ್ಥ, ಸದ್ಯಕ್ಕೆ ನೀವು ಯಾರ ಬಗ್ಗೆಯೂ ಕಾಳಜಿ ವಹಿಸಬೇಡಿ, ತಂಡಕ್ಕಾಗಿ, ದೇಶಕ್ಕಾಗಿ ಆಡುವ ಬಗ್ಗೆ ಮಾತ್ರ ಗಮನಹರಿಸಿ. ತಂಡದಲ್ಲಿ ಎಲ್ಲಾ ಆಟಗಾರರು ಒಗ್ಗಟ್ಟಾಗಿದ್ದಾರೆ, ವೇಗಿ ಶಾಹೀನ್ ಶಾ ಆಫ್ರಿದಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ಭರವಸೆಯೂ ನಮಗಿದೆ.

ಈ ಸಲ ಟ್ರೋಫಿ ಗೆಲ್ಲಬೇಕು ಎಂಬುದು ದೇವರ ಇಚ್ಚೆ. ಖಚಿತವಾಗಿ ನಮ್ಮ ತಂಡ ಗೆಲುವು ಸಾಧಿಸುತ್ತದೆ. ಈ ದೇಶವು ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟಿದೆ. ಅವುಗಳನ್ನು ಯಾವುದೇ ಕಾರಣಕ್ಕೂ ಹುಸಿಗೊಳಿಸಬಾರದು ಎಂದು ಸಲಹೆ ನೀಡಿದರು.

ಇದೇ ವೇಳೆ ವಿಕೆಟ್‌ ಕೀಪರ್‌-ಬ್ಯಾಟರ್‌ ಮೊಹಮ್ಮದ್‌ ರಿಜ್ವಾನ್‌ ಟಿ20 ಕ್ರಿಕೆಟ್‌ನಲ್ಲಿ 3,000 ರನ್‌ ಪೂರೈಸಿದ್ದರ ನೆನಪಿಗಾಗಿ ಕೆಲ ಆಟಗಾರರಿಗೆ ಪಾಕ್‌ ತಂಡದ ಜೆರ್ಸಿಯನ್ನು ವಿತರಿಸಲಾಯಿತು.

Advertisement
Tags :
LatestNewsNewsKarnatakaWORLD CUPಇಸ್ಲಾಮಾಬಾದ್‌
Advertisement
Next Article