For the best experience, open
https://m.newskannada.com
on your mobile browser.
Advertisement

ವಿರೂಷ್ಕಾ ದಂಪತಿಗೆ ಗಂಡು ಮಗ ಜನನ: ಪಾಕ್‌ ನಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ

ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಖ್ಯಾತ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ತಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಸೇರ್ಪಡೆಯನ್ನು ಸ್ವಾಗತಿಸಿದ್ದಾರೆ. ಮಂಗಳವಾರ ಸಂಜೆ ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ತಮ್ಮ ಗಂಡು ಮಗನಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ.
04:15 PM Feb 21, 2024 IST | Ashitha S
ವಿರೂಷ್ಕಾ ದಂಪತಿಗೆ ಗಂಡು ಮಗ ಜನನ  ಪಾಕ್‌ ನಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ

ಇಸ್ಲಾಮಾಬಾದ್‌: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಖ್ಯಾತ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ತಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಸೇರ್ಪಡೆಯನ್ನು ಸ್ವಾಗತಿಸಿದ್ದಾರೆ. ಮಂಗಳವಾರ ಸಂಜೆ ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ತಮ್ಮ ಗಂಡು ಮಗನಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ.

Advertisement

ಇನ್ನು ವಿರಾಟ್ ಕೊಹ್ಲಿ ತಮ್ಮ ಮಗನ ಆಗಮನದ ಸುದ್ದಿಯನ್ನು ಘೋಷಿಸಿದ ಬೆನ್ನಲ್ಲೇ ಭಾರತದಾದ್ಯಂತ ವಿರುಷ್ಕಾ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಮರಿ ವಿರಾಟ್ ಕೊಹ್ಲಿ ಆಗಮನಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಕ್ರೀಡೆಗೆ ದೇಶ, ಭಾಷೆ ಗಡಿಯ ಹಂಗಿಲ್ಲ ಎನ್ನುವಂತೆ, ಇದೀಗ ಪಾಕಿಸ್ತಾನದ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ದಂಪತಿಗೆ ಗಂಡು ಮಗ ಹುಟ್ಟಿದ್ದಕ್ಕೆ ನೆರೆಯ ಪಾಕಿಸ್ತಾನದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಪಾಕಿಸ್ತಾನದ ಅಭಿಮಾನಿ ವಿರಾಟ್ ಕೊಹ್ಲಿಗೆ ಅಭಿನಂದನೆ ಸಲ್ಲಿಸಿದ್ದು ಮಾತ್ರವಲ್ಲದೇ, ಕೊಹ್ಲಿ ಹೆಸರಿನಲ್ಲಿ ಎಲ್ಲಾ ಆನ್‌ಫೀಲ್ಡ್ ರೆಕಾರ್ಡ್ ಅವರ ಮಗ ಅಕಾಯ್ ಬ್ರೇಕ್ ಮಾಡಲಿ ಎಂದು ಹಾರೈಸಿದ್ದಾರೆ.

Advertisement

ಇನ್ನು ಪಾಕಿಸ್ತಾನದ ವಿರುಷ್ಕಾ ಅಭಿಮಾನಿ, ಸಚಿನ್ ತೆಂಡುಲ್ಕರ್ ಹೆಜ್ಜೆಯನ್ನು ಪುತ್ರ ಅರ್ಜುನ್ ತೆಂಡುಲ್ಕರ್ ಹಿಂಬಾಲಿಸಿದಂತೆ, ವಿರಾಟ್ ಕೊಹ್ಲಿಯನ್ನು ಅವರ ಮಗ ಅಕಾಯ್ ಹಿಂಬಾಲಿಸಲಿದ್ದಾರೆ ಎಂದು ಹೇಳಿದ್ದಾರೆ.

Advertisement
Tags :
Advertisement