ಕರ್ನಾಟಕ1 | ಬೆಂಗಳೂರು-ಮೈಸೂರು-ಮಲೆನಾಡು-ಬೆಳಗಾವಿ-ಕರಾವಳಿ-ಕಲಬುರಗಿ-
ಹೊರನಾಡ ಕನ್ನಡಿಗರು1
ದೇಶ-ವಿದೇಶ-1 | ದೇಶ-1
ವಿಶೇಷ-
ವಿಜ್ಞಾನ/ತಂತ್ರಜ್ಞಾನ | ಸಾಂಡಲ್ ವುಡ್
ಮನರಂಜನೆ-ಕ್ರೀಡೆ-1ಕ್ಯಾಂಪಸ್-1
ಇತರೆ- | ಆರೋಗ್ಯ-ಅಡುಗೆ ಮನೆ-ಸಮುದಾಯ-ಕ್ರೈಮ್-ಶಿಕ್ಷಣ-ವಿಡಿಯೊ-ಪಾಡ್‌ಕಾಸ್ಟ್‌-ಉದ್ಯೋಗ-
Advertisement

‘ಕೆ.ಎಲ್​​ ರಾಹುಲ್​​​ ಕ್ಯಾಪ್ಟನ್ಸಿಯಲ್ಲಿ ಆಡೋಕೆ ಇಷ್ಟ ಇಲ್ಲ’ ಎಂದ ಹಾರ್ದಿಕ್

ಜೂನ್​​ 27ನೇ ತಾರೀಕಿನಿಂದ ಶುರುವಾಗಲಿರೋ ಶ್ರೀಲಂಕಾ ಪ್ರವಾಸದಲ್ಲಿ ಟೀಮ್​ ಇಂಡಿಯಾ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ
04:45 PM Jul 16, 2024 IST | Ashitha S

ಮುಂಬೈ:  ಜೂನ್​​ 27ನೇ ತಾರೀಕಿನಿಂದ ಶುರುವಾಗಲಿರೋ ಶ್ರೀಲಂಕಾ ಪ್ರವಾಸದಲ್ಲಿ ಟೀಮ್​ ಇಂಡಿಯಾ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಯಿಂದ ಟೀಮ್​ ಇಂಡಿಯಾದ ಹಿರಿಯ ಆಟಗಾರರಾದ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಮತ್ತು ಬುಮ್ರಾಗೆ ರೆಸ್ಟ್​ ನೀಡಲಾಗಿದೆ.

Advertisement

ಹಾಗಾಗಿ ರೋಹಿತ್​ ಅನುಪಸ್ಥಿತಿಯಲ್ಲಿ ಏಕದಿನ ಮಾದರಿಯಲ್ಲಿ ಭಾರತ ತಂಡವನ್ನು ಕೆ.ಎಲ್​ ರಾಹುಲ್​​ ಮುನ್ನಡೆಸಲಿದ್ದಾರೆ. ಎಲ್ಲಾ ಮಾದರಿ ಕ್ರಿಕೆಟ್​ಗೂ ಪ್ರತ್ಯೇಕ ನಾಯಕರನ್ನು ನೇಮಿಸೋ ಪ್ಲಾನ್​​ ಕೋಚ್​​ ಗೌತಮ್​​ ಗಂಭೀರ್​ ಅವರದ್ದು.

ಮೊದಲು ಟಿ20 ಮತ್ತು ಏಕದಿನ ಕ್ರಿಕೆಟ್​ನಲ್ಲೂ ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗೋ ರೇಸ್​ನಲ್ಲಿದ್ದರು ಹಾರ್ದಿಕ್​ ಪಾಂಡ್ಯ. ಯಾವಾಗ ಟಿ20 ತಂಡಕ್ಕೆ ಮಾತ್ರ ನೀವು ಕ್ಯಾಪ್ಟನ್​​, ಏಕದಿನ ಮಾದರಿಯಲ್ಲಿ ರಾಹುಲ್​​ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸೆಲೆಕ್ಟರ್ಸ್​​ ಪಾಂಡ್ಯಗೆ ಹೇಳಿದ್ರೋ ಆಗಲೇ ಶುರುವಾಗಿದ್ದು ಸಮಸ್ಯೆ. ಈಗ ಹಾರ್ದಿಕ್​ ಪಾಂಡ್ಯ ತನಗೆ ರಾಹುಲ್​ ನಾಯಕತ್ವದಲ್ಲಿ ಆಡಲು ಇಷ್ಟವಿಲ್ಲ, ಹಾಗಾಗಿ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಿ ಎಂದು ಕೇಳಿಕೊಂಡಿದ್ದಾರಂತೆ. ಈ ವಿಚಾರ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

Advertisement

Advertisement
Tags :
cricketHardhikapandyaKLrahulLATEST NEWSNews KarnatakaTODAY
Advertisement
Next Article