For the best experience, open
https://m.newskannada.com
on your mobile browser.
Advertisement

ರೈಫಲ್​ನಿಂದ ಗುಂಡು ಹಾರಿಸಿಕೊಂಡು ಸಿಐಎಸ್​ಎಫ್ ಸಿಬ್ಬಂದಿ ಆತ್ಮಹತ್ಯೆ;ವಿಡಿಯೋ ವೈರಲ್‌

ಕರ್ತವ್ಯದ ನಿರತ ಸಿಐಎಸ್​ಎಫ್​ ಸಿಬ್ಬಂದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ ಪಶ್ಚಿಮ ವಿಹಾರ್ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ನಿಲ್ದಾಣದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
10:53 AM Apr 07, 2024 IST | Ashitha S
ರೈಫಲ್​ನಿಂದ ಗುಂಡು ಹಾರಿಸಿಕೊಂಡು ಸಿಐಎಸ್​ಎಫ್ ಸಿಬ್ಬಂದಿ ಆತ್ಮಹತ್ಯೆ ವಿಡಿಯೋ ವೈರಲ್‌

ನವದೆಹಲಿ: ಕರ್ತವ್ಯದ ನಿರತ ಸಿಐಎಸ್​ಎಫ್​ ಸಿಬ್ಬಂದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ ಪಶ್ಚಿಮ ವಿಹಾರ್ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ನಿಲ್ದಾಣದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Advertisement

ಮಹಾರಾಷ್ಟ್ರದ ಗಡ್ಚಿರೋಲಿ ಮೂಲದ ಸಿಐಎಸ್​ಎಫ್​ ಆಧಿಕಾರಿ ಸಹಾರೆ ಕಿಶೋರ್ ಆತ್ಮಹತ್ಯೆ ಮಾಡಿಕೊಂಡವರು. ಬೆಳಗ್ಗೆ 7 ಗಂಟೆ ಸಮಯದಲ್ಲಿ ಇಲಾಖೆ ನೀಡಿದ್ದ ಸರ್ವೀಸ್​ ರೈಫಲ್​ನಿಂದಲೇ ಸಿಬ್ಬಂದಿ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ.

ಕಿಶೋರ್ 2022ರಿಂದ ದೆಹಲಿಯ ಮೆಟ್ರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರ ಕುಟುಂಬ ದೆಹಲಿಯ ನರೇಳದಲ್ಲಿರುವ ಸರ್ಕಾರದ ಕ್ವಾರ್ಟರ್ಸ್​ನಲ್ಲಿ ಇದ್ದಾರೆ. ಆದರೆ ಸಾವಿಗೆ ಕಾರಣ ಏನೆಂಬುದು ನಿಖರವಾಗಿ ತಿಳಿದು ಬಂದಿಲ್ಲ ಎನ್ನಲಾಗಿದೆ.

Advertisement

Advertisement
Tags :
Advertisement