For the best experience, open
https://m.newskannada.com
on your mobile browser.
Advertisement

ರಸ್ತೆ ಅಪಘಾತ: ನಟ ಪಂಕಜ್​ ತ್ರಿಪಾಠಿ ಬಾವ ನಿಧನ, ಸಹೋದರಿ ಸ್ಥಿತಿ ಗಂಭೀರ

ನಟ ಪಂಕಜ್​ ತ್ರಿಪಾಠಿ ಅವರ ಅವರ ಕುಟುಂಬದಲ್ಲಿ ದುರಂತವೊಂದು ಸಂಭವಿಸಿದೆ. ಭೀಕರ ಕಾರು ಅಪಘಾತದಲ್ಲಿ ಪಂಕಜ್​ ತ್ರಿಪಾಠಿ ಅವರ ಬಾವ ಕೊನೆಯುಸಿರು ಎಳೆದಿದ್ದಾರೆ.
12:21 PM Apr 21, 2024 IST | Ashitha S
ರಸ್ತೆ ಅಪಘಾತ  ನಟ ಪಂಕಜ್​ ತ್ರಿಪಾಠಿ ಬಾವ ನಿಧನ  ಸಹೋದರಿ ಸ್ಥಿತಿ ಗಂಭೀರ

ಪಂಜಾಬ್: ನಟ ಪಂಕಜ್​ ತ್ರಿಪಾಠಿ ಅವರ ಅವರ ಕುಟುಂಬದಲ್ಲಿ ದುರಂತವೊಂದು ಸಂಭವಿಸಿದೆ. ಭೀಕರ ಕಾರು ಅಪಘಾತದಲ್ಲಿ ಪಂಕಜ್​ ತ್ರಿಪಾಠಿ ಅವರ ಬಾವ ಕೊನೆಯುಸಿರು ಎಳೆದಿದ್ದಾರೆ.

Advertisement

ಪಂಕಜ್​ ತ್ರಿಪಾಠಿ ಅವರ ಸಹೋದರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿ ಎಂದು ಹೇಳಲಾಗಿದೆ. ಶನಿವಾರ ಸಂಜೆ ಜಾರ್ಖಂಡ್​ನಲ್ಲಿ ಈ ಅಪಘಾತ ಸಂಭವಿಸಿದೆ.

ಪಂಕಜ್​​ ತ್ರಿಪಾಠಿ ಅವರ ಸಹೋದರಿ ಸರಿತಾ ತಿವಾರಿ ಹಾಗೂ ಅವರ ಪತಿ ರಾಜೇಶ್​ ತಿವಾರಿ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಅತಿ ವೇಗದಲ್ಲಿ ಇದ್ದಿದ್ದರಿಂದ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ಅಪಘಾತದ ತೀವ್ರತೆಗೆ ರಾಜೇಶ್​ ತಿವಾರಿ ನಿಧನರಾಗಿದ್ದಾರೆ. ಕಾರಿನ ಒಳಗಿದ್ದ ರಾಜೇಶ್​ ಮತ್ತು ಸರಿತಾ ಅವರನ್ನು ಸ್ಥಳೀಯರ ಸಹಾಯದಿಂದ ಪೊಲೀಸರು ಹೊರತೆಗೆದಿದ್ದಾರೆ.

Advertisement

ಅಪಘಾತದ ಬಳಿಕ ಧನ್​ಬಾದ್​ ಮೆಡಿಕಲ್​ ಕಾಲೇಜ್ ಆಸ್ಪತ್ರೆಗೆ ರಾಜೇಶ್​ ತಿವಾರಿ ಹಾಗೂ ಸರಿತಾ ತಿವಾರಿ ಅವರನ್ನು ದಾಖಲಿಸಲಾಯಿತು. ಅಷ್ಟು ಹೊತ್ತಿಗಾಗಲೇ ರಾಜೇಶ್​ ತಿವಾರಿ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದರು. ಸರಿತಾ ತಿವಾರಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿ ಸ್ಥಿತಿ ಸದ್ಯಕ್ಕಂತೂ ಚಿಂತಾಜನಕವಾಗಿದೆ ಎಂದು ವರದಿ ಆಗಿದೆ. ಈ ಘಟನೆಯಿಂದ ಪಂಕಜ್​ ತ್ರಿಪಾಠಿ ಅವರ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ.

Advertisement
Tags :
Advertisement