For the best experience, open
https://m.newskannada.com
on your mobile browser.
Advertisement

ಭಾರತ ತಂಡಕ್ಕೆ ಮೋಸ ಮಾಡಿ ಸಿಕ್ಕಿಬಿದ್ದ ಸ್ಟಾರ್​ ಬ್ಯಾಟರ್ ರಿಷಬ್​ ಪಂತ್​ !

ಟಿ20 ವಿಶ್ವಕಪ್​​ ಚಾಂಪಿಯನ್​​​​ ಮತ್ತು ಟೀಮ್​ ಇಂಡಿಯಾದ ಸ್ಟಾರ್​​ ವಿಕೆಟ್​ ಕೀಪರ್​ ಬ್ಯಾಟರ್​ ರಿಷಭ್​ ಪಂತ್​​​ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
06:15 PM Jul 16, 2024 IST | Ashitha S
ಭಾರತ ತಂಡಕ್ಕೆ ಮೋಸ ಮಾಡಿ ಸಿಕ್ಕಿಬಿದ್ದ ಸ್ಟಾರ್​ ಬ್ಯಾಟರ್ ರಿಷಬ್​ ಪಂತ್​

ಮುಂಬೈ: ಟಿ20 ವಿಶ್ವಕಪ್​​ ಚಾಂಪಿಯನ್​​​​ ಮತ್ತು ಟೀಮ್​ ಇಂಡಿಯಾದ ಸ್ಟಾರ್​​ ವಿಕೆಟ್​ ಕೀಪರ್​ ಬ್ಯಾಟರ್​ ರಿಷಭ್​ ಪಂತ್​​​ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ತನ್ನ ವಯಸ್ಸಿನ ವಿಚಾರದಲ್ಲಿ ಪಂತ್​ ಬಿಸಿಸಿಐಗೆ ಮೋಸ ಮಾಡಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ಬಿಸಿಸಿಐಗೆ ಪಂತ್​ ಮೋಸ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಬಿಸಿಸಿಐ ಮುಂದೆ ಪಂತ್​ ತನಗೆ ಕೇವಲ 26 ವರ್ಷ ಎಂದು ಹೇಳಿಕೊಂಡಿದ್ದಾರೆ. ಶಾಲೆಯಲ್ಲಿ ಪಂತ್​ ನನಗಿಂತಲೂ 3 ವರ್ಷ ಸೀನಿಯರ್​​. ನನಗೆ 27 ವರ್ಷ, 30 ವರ್ಷ ಇರಬೇಕಾದ ಪಂತ್​ಗೆ 26 ವಯಸ್ಸು ಆಗಿರಲು ಹೇಗೆ ಸಾಧ್ಯ? ಎಂದು ನೆಟ್ಟಿಗರು ಒಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಪಂತ್​ ಬಿಸಿಸಿಐಗೆ ಮೋಸ ಮಾಡಿದ್ದು, ಈ ವಿಚಾರ ತನಿಖೆ ಆಗಲೇಬೇಕು ಎಂದು ನೆಟ್ಟಿಗರು ಪಟ್ಟು ಹಿಡಿದಿದ್ದಾರೆ.

ಬರೋಬ್ಬರಿ 17 ವರ್ಷಗಳ ತಪಸ್ಸಿನ ಬಳಿಕ ಟೀಮ್​ ಇಂಡಿಯಾ ಟಿ20 ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿದಿದೆ. ಈ ಬೆನ್ನಲ್ಲೇ ಟೀಮ್​ ಇಂಡಿಯಾ ಮುಖ್ಯ ಕೋಚ್​​ ರಾಹುಲ್​ ದ್ರಾವಿಡ್​ ಕೂಡ ವಿದಾಯ ಹೇಳಿದ್ದಾರೆ.

Advertisement

https://x.com/LordGod188/status/1812701754108117485

Advertisement
Tags :
Advertisement