For the best experience, open
https://m.newskannada.com
on your mobile browser.
Advertisement

ರೈಲಿನಲ್ಲಿ ಪ್ರಯಾಣಿಕರಿಗೆ ಆಹಾರ ಒದಗಿಸುವ ಪ್ಯಾಂಟ್ರಿ ಕಾರ್‌ ಬದಲಿಗೆ ಹೊಸ ಕ್ಲಸ್ಟರ್‌ ವ್ಯವಸ್ಥೆ

ರೈಲಿನಲ್ಲಿ ಪ್ರಯಾಣಿಕರಿಗೆ ಆಹಾರ ಒದಗಿಸುವ ಪ್ಯಾಂಟ್ರಿ ಕಾರ್‌ನಲ್ಲಿ ಜೂನ್‌ ತನಕ ಮಾತ್ರ ಆಹಾರ ಲಭ್ಯವಿರುವುದಾಗಿ ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.
07:07 PM Mar 22, 2024 IST | Maithri S
ರೈಲಿನಲ್ಲಿ ಪ್ರಯಾಣಿಕರಿಗೆ ಆಹಾರ ಒದಗಿಸುವ ಪ್ಯಾಂಟ್ರಿ ಕಾರ್‌ ಬದಲಿಗೆ ಹೊಸ ಕ್ಲಸ್ಟರ್‌ ವ್ಯವಸ್ಥೆ

ಬೆಂಗಳೂರು: ರೈಲಿನಲ್ಲಿ ಪ್ರಯಾಣಿಕರಿಗೆ ಆಹಾರ ಒದಗಿಸುವ ಪ್ಯಾಂಟ್ರಿ ಕಾರ್‌ನಲ್ಲಿ ಜೂನ್‌ ತನಕ ಮಾತ್ರ ಆಹಾರ ಲಭ್ಯವಿರುವುದಾಗಿ ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.

Advertisement

ನಿಲ್ದಾಣಗಳಲ್ಲಿರುವ IRCTC ಅಡುಗೆ ಕೋಣೆಗಳನ್ನೂ ಮುಚ್ಚುವ ಬಗ್ಗೆ ಮಾಹಿತಿ ನೀಡಿದ ಸಚಿವಾಲಯ, ರೈಲಿನಲ್ಲಿ ಚಹಾ ಮತ್ತು ನೀರು ಬಿಸಿ ಮಾಡುವ ಸೌಲಭ್ಯ ಲಭ್ಯವಿರುತ್ತದೆ ಎಂದಿದೆ.

ಈಗ ಇರುವ ಪ್ಯಾಂಟ್ರಿ ಕಾರ್‌ ಬದಲು ಕ್ಲಸ್ಟರ್‌ ಆಧಾರಿತ ಪ್ಯಾಂಟ್ರಿ ಕಾರ್‌ ಪರಿಚಯಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಟೆಂಡರ್‌ ಕರೆಯುವ ನಿರೀಕ್ಷೆಯಿದೆ.

Advertisement

ಪ್ರಯಾಣಿಕರಿಗೆ ಗುಣಮಟ್ಟದ ಆಹಾರ ಪೂರೈಸುವ ಸಲುವಾಗಿ ಕ್ಲಸ್ಟರ್‌ಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುವುದು ಮತ್ತು ಹಠಾತ್‌ ದಾಳಿಗಳನ್ನೂ ಮಾಡಲಾಗುವುದು. ಅಗತ್ಯವಿದ್ದಲ್ಲಿ ಆಹಾರ ಶುದ್ಧತೆಯನ್ನು ಪರೀಕ್ಷಿಸಲಾಗುವುದು.

Advertisement
Tags :
Advertisement