For the best experience, open
https://m.newskannada.com
on your mobile browser.
Advertisement

ವೈಟ್​ಫೀಲ್ಡ್​​ನಲ್ಲಿ ನಾಪತ್ತೆಯಾಗಿದ್ದ ಬಾಲಕ ಹೈದರಾಬಾದ್​​ನ ನಾಂಪಲ್ಲಿಯಲ್ಲಿ ಪತ್ತೆ

ಟ್ಯೂಷನ್ ಗೆ ಹೋಗಿದ್ದ 12 ವರ್ಷದ ಬಾಲಕ ಪರಿಣವ್ ನಿಗೂಢ ನಾಪತ್ತೆಯಾಗಿದ್ದು ಈಗ ಹೈದರಾಬಾದ್‌ನ ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.
02:49 PM Jan 24, 2024 IST | Ashitha S
ವೈಟ್​ಫೀಲ್ಡ್​​ನಲ್ಲಿ ನಾಪತ್ತೆಯಾಗಿದ್ದ ಬಾಲಕ ಹೈದರಾಬಾದ್​​ನ ನಾಂಪಲ್ಲಿಯಲ್ಲಿ ಪತ್ತೆ

ಬೆಂಗಳೂರು: ಟ್ಯೂಷನ್ ಗೆ ಹೋಗಿದ್ದ 12 ವರ್ಷದ ಬಾಲಕ ಪರಿಣವ್ ನಿಗೂಢ ನಾಪತ್ತೆಯಾಗಿದ್ದು ಈಗ ಹೈದರಾಬಾದ್‌ನ ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.

Advertisement

ನಗರದ ವೈಟ್​ಫೀಲ್ಡ್​ನಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ 12 ವರ್ಷದ ಬಾಲಕ ಪರಿಣವ್​ನನ್ನು ಪೊಲೀಸರು ಹೈದರಾಬಾದ್‌ನ ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿ ಪತ್ತೆ ಹಚ್ಚಿದ ನಂತರ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಿಂದು ಬೆಳಗ್ಗೆ ಪೊಲೀಸರು ಬಾಲಕನನ್ನು ಪತ್ತೆ ಹಚ್ಚಿದ್ದು, ಆತ ಸುರಕ್ಷಿತವಾಗಿದ್ದಾನೆ.

ಪರಿಣವ್ ಭಾನುವಾರ ಮಧ್ಯಾಹ್ನ 12.15ರ ಸುಮಾರಿಗೆ ನಾಪತ್ತೆ ಆಗಿದ್ದ. ಆತ ಟ್ಯೂಷನ್ ಸೆಂಟರ್​ನಿಂದ ಮಾರತ್ತಹಳ್ಳಿವರೆಗೆ ನಡೆದುಬಂದಿದ್ದು, ನಂತರ ಬಿಎಂಟಿಸಿ ಬಸ್ ಹತ್ತಿರುವ ಸಿಸಿಕ್ಯಾಮರಾ ದೃಶ್ಯ ಲಭ್ಯವಾಗಿತ್ತು. ಈ ಸಂಬಂಧ ವೈಟ್​ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಕ್ಷಣವೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು.

Advertisement

ಇನ್ನು ಹುಡುಗನ ಬಳಿ ಸೀಮಿತ ನಗದು ಇತ್ತು ಮತ್ತು ಅವನು ಹೇಗೆ ಹೈದರಾಬಾದ್ ತಲುಪಿದನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೋಷಕರು ಮಗನನ್ನು ಕರೆದುಕೊಂಡು ಬರಲು ಹೈದರಬಾದ್‌ ಗೆ ತೆರಳಿದ್ದಾರೆ. ಪರಿಣವ್ ತಾಯಿ ನಿವೇದಿತಾ ಅವರು ತಮ್ಮ ಮಗ ಸುರಕ್ಷಿತ ಮತ್ತು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಆತ ಹಣಕ್ಕಾಗಿ ವ್ಯಕ್ತಿಯೊಬ್ಬನಿಗೆ ತನ್ನ ಪಾರ್ಕರ್ ಪೆನ್ ಮಾರಾಟ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು ಕಂಡುಬಂದಿದೆ ಎಂದು ಪರಿಣವ್ ತಂದೆ ಸುಕೇಶ್ ತಿಳಿಸಿದ್ದಾರೆ.

Advertisement
Tags :
Advertisement