For the best experience, open
https://m.newskannada.com
on your mobile browser.
Advertisement

ಸಂಸತ್ತಿನಲ್ಲಿ ನಡೆದ ಘಟನೆ ಆತಂಕಕಾರಿಯಾಗಿದೆ: ಪ್ರಧಾನಿ ಮೋದಿ

ಸಂಸತ್ತಿನ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ  ಪ್ರತಿಕ್ರಿಯಿಸಿದ್ದಾರೆ. ಸಂಸತ್ತಿನಲ್ಲಿ ನಡೆದ ಘಟನೆ ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ. ಇದು ಗಂಭೀರವಾದ ವಿಚಾರ, ಈ ಬಗ್ಗೆ ಆಳವಾದ ತನಿಖೆ ನಡೆಯಬೇಕು,ಇದು ರಾಷ್ಟ್ರೀಯ ಭದ್ರತಾ ವಿಷಯವಾಗಿರುವುದರಿಂದ ರಾಜಕೀಯ ಪಕ್ಷಗಳು ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದಿದ್ದಾರೆ.
11:00 AM Dec 17, 2023 IST | Ashitha S
ಸಂಸತ್ತಿನಲ್ಲಿ ನಡೆದ ಘಟನೆ ಆತಂಕಕಾರಿಯಾಗಿದೆ  ಪ್ರಧಾನಿ ಮೋದಿ

ನವದೆಹಲಿ: ಸಂಸತ್ತಿನ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ  ಪ್ರತಿಕ್ರಿಯಿಸಿದ್ದಾರೆ. ಸಂಸತ್ತಿನಲ್ಲಿ ನಡೆದ ಘಟನೆ ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ. ಇದು ಗಂಭೀರವಾದ ವಿಚಾರ, ಈ ಬಗ್ಗೆ ಆಳವಾದ ತನಿಖೆ ನಡೆಯಬೇಕು,ಇದು ರಾಷ್ಟ್ರೀಯ ಭದ್ರತಾ ವಿಷಯವಾಗಿರುವುದರಿಂದ ರಾಜಕೀಯ ಪಕ್ಷಗಳು ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದಿದ್ದಾರೆ.

Advertisement

ಸಂಸತ್ತಿನಲ್ಲಿ ನಡೆದ ಘಟನೆಯ ಗಂಭೀರತೆಯನ್ನು ಕಡೆಗಣಿಸಬಾರದು, ಹಾಗಾಗಿ ಲೋಕಸಭಾ ಸ್ಪೀಕರ್ ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಘಟನೆಯ ಹಿಂದಿನ ಉದ್ದೇಶವೇನು ಎಂದು ತಿಳಿಯಲು ವಿಷಯದ ಆಳಕ್ಕೆ ಹೋಗುವುದು ಮುಖ್ಯ, ಒಟ್ಟಾಗಿ ಪರಿಹಾರ ಸಿಗಬೇಕು ಎಂದಿದ್ದಾರೆ.

ಡಿ.13 ರಂದು ಸಾಗರ್ ಹಾಗೂ ಮನೋರಂಜನ್ ಎನ್ನುವ ಇಬ್ಬರು ಸದನದೊಳಗೆ ನುಗ್ಗಿ ಹೊಗೆ ಕ್ಯಾನ್ ಎಸೆದಿದ್ದರು, ಲೋಕಸಭೆ ಪೂರ್ತಿ ಹೊಗೆ ತುಂಬಿಕೊಂಡಿದ್ದ ಕಾರಣ ಎಲ್ಲರೂ ಭಯಭೀತರಾಗಿದ್ದರು.

Advertisement

Read More:
https://newskannada.com/etare/crime/security-breach-case-mobile-parts-of-accused-found-in-rajasthan/17122023

https://newskannada.com/world/desha/delhi/security-lapse-speaker-writes-to-mps/16122023

Advertisement
Tags :
Advertisement