For the best experience, open
https://m.newskannada.com
on your mobile browser.
Advertisement

ವೈದ್ಯರ ಎಡವಟ್ಟಿಗೆ ಆಸ್ಪತ್ರೆಯಲ್ಲಿ ರೋಗಿ ಸಾವು

ವೈದ್ಯರ ಎಡವಟ್ಟಿಗೆ ಆಸ್ಪತ್ರೆಯಲ್ಲಿ ರೋಗಿ ಸಾವನಪ್ಪಿರುವ ಘಟನೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.ಕೃಷ್ಣಪ್ಪ ಗೌಡ(47) ಮೃತ ವ್ಯಕ್ತಿ. ಬಂಟ್ವಾಳ ತಾಲೂಕಿನ ಕಕ್ಕೆಪದವಿನ ಪಿಲಿಬೈಲ್ ನಿವಾಸಿ ಕೃಷ್ಣಪ್ಪ ಗೌಡ ಅವರು ನಿನ್ನೆ ವಿಪರೀತ ಜ್ವರವಿದ್ದ ಕಾರಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ಈ ಬಗ್ಗೆ ಪರೀಕ್ಷಿಸಿದ ವೈದ್ಯರು ನಾಲಿಗೆಯ ಅಡಿ ಭಾಗದಲ್ಲಿ ಗೆಡ್ಡೆಯ ಬಗ್ಗೆ ಸೂಚನೆ ನೀಡಿದ್ದರು.
07:56 AM May 16, 2024 IST | Nisarga K
ವೈದ್ಯರ ಎಡವಟ್ಟಿಗೆ ಆಸ್ಪತ್ರೆಯಲ್ಲಿ ರೋಗಿ ಸಾವು
ವೈದ್ಯರ ಎಡವಟ್ಟಿಗೆ ಆಸ್ಪತ್ರೆಯಲ್ಲಿ ರೋಗಿ ಸಾವು

ಪುತ್ತೂರು: ವೈದ್ಯರ ಎಡವಟ್ಟಿಗೆ ಆಸ್ಪತ್ರೆಯಲ್ಲಿ ರೋಗಿ ಸಾವನಪ್ಪಿರುವ ಘಟನೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.ಕೃಷ್ಣಪ್ಪ ಗೌಡ(47) ಮೃತ ವ್ಯಕ್ತಿ. ಬಂಟ್ವಾಳ ತಾಲೂಕಿನ ಕಕ್ಕೆಪದವಿನ ಪಿಲಿಬೈಲ್ ನಿವಾಸಿ ಕೃಷ್ಣಪ್ಪ ಗೌಡ ಅವರು ನಿನ್ನೆ ವಿಪರೀತ ಜ್ವರವಿದ್ದ ಕಾರಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ಈ ಬಗ್ಗೆ ಪರೀಕ್ಷಿಸಿದ ವೈದ್ಯರು ನಾಲಿಗೆಯ ಅಡಿ ಭಾಗದಲ್ಲಿ ಗೆಡ್ಡೆಯ ಬಗ್ಗೆ ಸೂಚನೆ ನೀಡಿದ್ದರು.

Advertisement

ಬಳಿಕ ಗೆಡ್ಡೆಯನ್ನ ತೆಗೆಯಬೇಕು ಎಂದು ಹೇಳಿ ಆಪರೇಷನ್ ಮಾಡಬೇಕೆಂದು ವೈದ್ಯರು ಕೃಷ್ಣಪ್ಪ ಮನೆಯವರಿಗೆ ಸೂಚನೆ ನೀಡಿದರು.ಈ ಬಗ್ಗೆ ಆಪರೇಷನ್ ಮಾಡಲು ಮೃತರ ಹೆಂಡತಿ ಸರೋಜಿನಿ ಮತ್ತು ಅತ್ತಿಗೆಯ ಮೂಲಕ ಸಹಿ ಹಾಕಿಸಿಕೊಂಡರು ನಂತರ ಜ್ವರಕ್ಕೆಂದು ದಾಖಲಾದ ವ್ಯಕ್ತಿಗೆ ಕ್ಯಾನ್ಸರ್ ಇದೆ ಎಂದು ಇನ್ನೊಂದು ಅಚ್ಚರಿ ವಿಷಯ ವೈದ್ಯರು ಹೇಳಿದರು.

ಬಳಿಕ ಗೆಡ್ಡೆಯ ಆಪರೇಷನ್ ಮಾಡಿದ ನಂತರ ವ್ಯಕ್ತಿ ಸಾವನಪ್ಪಿದ್ದು ವೈದ್ಯರ ವಿರುದ್ಧ ಸಂಬಂಧಿಕರು, ಸಾರ್ವಜನಿಕರು ರೊಚ್ಚಿಗೆದ್ದಿದ್ದಾರೆ.ರಾತ್ರೋರಾತ್ರಿ ಆಸ್ಪತ್ರೆ ಮುಂಭಾಗ ಜಮಾಯಿಸಿದ ಜನ, ವ್ಯಕ್ತಿಯ ಸಾವಿನ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ ಪಡಿಸಿದ್ದಾರೆ.

Advertisement

ವೈದ್ಯರ ಎಡವಟ್ಟಿನಿಂದಲೇ ವ್ಯಕ್ತಿಯ ಸಾವು ಆರೋಪಿಸಲಾಗಿದ್ದು,ಬಳಿಕ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ರವಾನಿಸಲಾಗಿದೆ.ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

Advertisement
Tags :
Advertisement