For the best experience, open
https://m.newskannada.com
on your mobile browser.
Advertisement

ಮಂಗಳಮುಖಿ ಪರಿವಾರಕ್ಕೂ ಪಟ್ಲ ಫೌಂಡೇಶನಿನ ನೆರವಿನ ಭರವಸೆ: ಪಟ್ಲ ಸತೀಶ್ ಶೆಟ್ಟಿ

ಸಮಾಜದಲ್ಲಿ ತೃತೀಯಲಿಂಗಿಗಳಾಗಿ ಗೌರವಯುತವಾಗಿ ಜೀವನ ನಡೆಸುತ್ತಿರುವ ಮಂಗಳೂರಿನ ಅಶೋಕನಗರ ದಂಬೇಲಿನ ಮಂಗಳಮುಖಿ ಐಶ್ವರ್ಯ ಪರಿವಾರದ ಸದಸ್ಯರು ಒಟ್ಟು ಸೇರಿ ಕೋಡಿಕಲ್ ಕಟ್ಟೆಯ ಬಳಿ ದ್ವಿತೀಯ ಬಾರಿಗೆ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವನ್ನು ನೆರವೇರಿಸಿದರು.
08:34 AM Apr 07, 2024 IST | Ashika S
ಮಂಗಳಮುಖಿ ಪರಿವಾರಕ್ಕೂ ಪಟ್ಲ ಫೌಂಡೇಶನಿನ ನೆರವಿನ ಭರವಸೆ  ಪಟ್ಲ ಸತೀಶ್ ಶೆಟ್ಟಿ

ಮಂಗಳೂರು: ಸಮಾಜದಲ್ಲಿ ತೃತೀಯಲಿಂಗಿಗಳಾಗಿ ಗೌರವಯುತವಾಗಿ ಜೀವನ ನಡೆಸುತ್ತಿರುವ ಮಂಗಳೂರಿನ ಅಶೋಕನಗರ ದಂಬೇಲಿನ ಮಂಗಳಮುಖಿ ಐಶ್ವರ್ಯ ಪರಿವಾರದ ಸದಸ್ಯರು ಒಟ್ಟು ಸೇರಿ ಕೋಡಿಕಲ್ ಕಟ್ಟೆಯ ಬಳಿ ದ್ವಿತೀಯ ಬಾರಿಗೆ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವನ್ನು ನೆರವೇರಿಸಿದರು.

Advertisement

ಈ ಸಂದರ್ಭದಲ್ಲಿ ಕಲಾವಿದರ ಕಾಮಧೇನು ಪಟ್ಲ ಸತೀಶ್ ಶೆಟ್ಟಿಯವರು ಪಟ್ಲ ಫೌಂಡೇಶನ್ ಟ್ರಸ್ಟ್ ಮೂಲಕ ಕಲಾವಿದರಿಗೆ ಸಲ್ಲಿಸುತ್ತಿರುವ ಸೇವೆಗಾಗಿ ಅವರನ್ನು ಗೌರವಿಸಿ ಸನ್ಮಾನಿಸಿದರು.

ಗೌರವವನ್ನು ಸ್ವೀಕರಿಸಿದ ಪಟ್ಲ ಸತೀಶ್ ಶೆಟ್ಟಿಯವರು ಐಶ್ವರ್ಯ ಪರಿವಾರದ ಸದಸ್ಯರು ಯಾರಲ್ಲಿಯೂ ಬಿಕ್ಷೆ ಬೇಡದೆ ತಮ್ಮ ಸಂಪಾದನೆಯ ಒಂದಂಶವನ್ನು ಒಟ್ಟು ಸೇರಿಸಿ ಭಕ್ತಿಪೂರ್ವಕ ಕಾರ್ಯಕ್ರಮವನ್ನು ಅನ್ನಸಂತರ್ಪಣೆಯೊಂದಿಗೆ ಸ್ಥಳೀಯ ಪರಿಸರದವರನ್ನು ಒಟ್ಟು ಸೇರಿಸಿ ಸಮಾಜದಲ್ಲಿ ಎಲ್ಲರೊಂದಿಗೆ ನಾವು ಇದ್ದೇವೆ ಎಂದು ತೋರಿಸಿಕೊಟ್ಟಿರುವುದು ಶ್ಲಾಘನೀಯ ಕಾರ್ಯ ಎಂದರು.

Advertisement

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪ್ರಥಮವಾಗಿ ಯಕ್ಷಗಾನ ಕಲಾವಿದರ ನೋವುಗಳಿಗೆ ಸ್ಪಂದಿಸುತ್ತಿದ್ದು , ಕಳೆದ ಎರಡು ವರ್ಷಗಳಿಂದ ನಾಟಕ ರಂಗಭೂಮಿ, ದೈವಾರಾದನೆಯ ಪರಿಚಾರಕರಿಗೆ ಮತ್ತು ವಾದ್ಯವೃಂದದವರಿಗೆ ಸಹಕರಿಸುತ್ತಿದ್ದು ಮುಂದಿನ ಹಂತದಲ್ಲಿ ಮಂಗಳಮುಖಿ ಸದಸ್ಯರಿಗೂ ಸಹಾಯ ಸಹಕಾರದ ಬಗ್ಗೆ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ನೀಡಿದರು.

ವೇದಿಕೆಯಲ್ಲಿ ಸ್ಥಳೀಯ ಜನಪ್ರತಿನಿಧಿ ಮನೋಜ್ ಕುಮಾರ್ ಐಶ್ವರ್ಯ ಪರಿವಾರದ ವೃಂದಾ ನಾಯಕ್, ನಿಖಿಲ, ಐಶ್ವರ್ಯ, ಸಾಕ್ಷ್ಯ ಉಪಸ್ಥಿತರಿದ್ದರು.

Advertisement
Tags :
Advertisement