For the best experience, open
https://m.newskannada.com
on your mobile browser.
Advertisement

ಹಿಂಸೆಯನ್ನು ವಿರೋಧಿಸುತ್ತಿದ್ದ ಪಟ್ಟಾಭಿ ನಕ್ಸಲ್ ಆಗಲು ಸಾಧ್ಯವೇ ಇಲ್ಲ: ಲೇಖಕಿ ಚ. ಸರ್ವಮಂಗಳ

ಗೀತಾಂಜಲಿ ಸಭಾಂಗಣದಲ್ಲಿ ನಡೆದ ಸಾಮಾಜಿಕ ಹೋರಾಟಗಾರ, ನಿವೃತ್ತ ಪ್ರಾಧ್ಯಾಪಕ ಎಚ್.ಪಟ್ಟಾಭಿರಾಮ ಸೋಮಯಾಜಿ ಸ್ಮರಣೆ ಕಾರ್ಯಕ್ರಮದಲ್ಲಿ ಅವರ ‘ಆ್ಯನ್ ಅಲ್ಫಬೇಟಿಕಲ್ ಅಲ್ಟರ್ಕೇಶನ್’ ಇಂಗ್ಲಿಷ್ ಕವಿತೆಗಳ ಸಂಕಲನ ಬಿಡುಗಡೆಗೊಳಿಸಲಾಯಿತು.
06:58 PM Jul 06, 2024 IST | Chaitra Kulal
ಹಿಂಸೆಯನ್ನು ವಿರೋಧಿಸುತ್ತಿದ್ದ ಪಟ್ಟಾಭಿ ನಕ್ಸಲ್ ಆಗಲು ಸಾಧ್ಯವೇ ಇಲ್ಲ  ಲೇಖಕಿ ಚ  ಸರ್ವಮಂಗಳ

ಉಡುಪಿ: ಉಡುಪಿ ಎಂಜಿಎಂ ಕಾಲೇಜು ಉಡುಪಿ ಹಾಗೂ ಪಟ್ಟಾಭಿ ಗೆಳೆಯರ ಬಳಗದ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆದ ಸಾಮಾಜಿಕ ಹೋರಾಟಗಾರ, ನಿವೃತ್ತ ಪ್ರಾಧ್ಯಾಪಕ ಎಚ್.ಪಟ್ಟಾಭಿರಾಮ ಸೋಮಯಾಜಿ ಸ್ಮರಣೆ ಕಾರ್ಯಕ್ರಮದಲ್ಲಿ ಅವರ ‘ಆ್ಯನ್ ಅಲ್ಫಬೇಟಿಕಲ್ ಅಲ್ಟರ್ಕೇಶನ್’ ಇಂಗ್ಲಿಷ್ ಕವಿತೆಗಳ ಸಂಕಲನ ಬಿಡುಗಡೆಗೊಳಿಸಲಾಯಿತು.

Advertisement

ಪುಸ್ತಕ ಬಿಡುಗಡೆಗೊಳಿಸಿ ಲೇಖಕಿ ಚ. ಸರ್ವಮಂಗಳ ಮಾತನಾಡಿ, ಸಾಮಾಜಿಕ ಹಾಗೂ ರಾಜಕೀಯವಾಗಿ ಆಗುತ್ತಿರುವ ಅನ್ಯಾಯವನ್ನು ಏಕಾಂಗಿಯಾಗಿ ಪ್ರತಿಭಟಿಸುತ್ತಿದ್ದ ಸಾಮಾಜಿಕ ಹೋರಾಟಗಾರ, ನಿವೃತ್ತ ಪ್ರಾಧ್ಯಾಪಕ ಎಚ್.ಪಟ್ಟಾಭಿರಾಮ ಸೋಮಯಾಜಿ ಅವರಿಗೆ ನಕ್ಸಲ್, ಅರ್ಬನ್ ನಕ್ಸಲೈಟ್ ಎಂಬ ಹಣೆಪಟ್ಟಿ ಕಟ್ಟಲಾಯಿತು. ಗಾಂಧಿಜೀ ಅನುಯಾಯಿ ಆಗಿದ್ದ ಪಟ್ಟಾಭಿ, ನಕ್ಸಲ್ ಆಗಲು ಸಾಧ್ಯವೇ ಇಲ್ಲ. ಯಾಕೆಂದರೆ ಅವರು ಹಿಂಸೆಯನ್ನು ತುಂಬಾ ವಿರೋಧಿಸುತ್ತಿದ್ದರು ಎಂದರು.

ಅಧ್ಯಕ್ಷತೆಯನ್ನು ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀ ನಾರಾಯಣ ಕಾರಂತ ವಹಿಸಿದ್ದರು. ಅನುವಾದಕ, ಕವಿ ಕಮಲಾಕರ ಕಡವೆ ಕೃತಿ ಪರಿಚಯ ಮಾಡಿದರು. ರಂಗನಾಥ ಹೊಸೂರು, ಅನಸೂಯ ಮುಖ್ಯ ಅತಿಥಿಗಳಾಗಿದ್ದರು.

Advertisement

ವೇದಿಕೆಯಲ್ಲಿ ಪ್ರೊ.ಹಯವದನ ಮೂಡುಸಗ್ರಿ, ಮುಹಮ್ಮದ್ ಶರೀಫ್ ಉಪಸ್ಥಿತರಿದ್ದರು. ಅಪರಾಜಿತೆ ಪ್ರಕಾಶನದ ಮೀನಾ ಮೈಸೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಂದಿಸಿದರು.

Advertisement
Tags :
Advertisement