For the best experience, open
https://m.newskannada.com
on your mobile browser.
Advertisement

ಕರ್ಣಾಟಕ ಬ್ಯಾಂಕ್ ಮೂಲಕ ನೇರ ತೆರಿಗೆ(ಆದಾಯ ತೆರಿಗೆ/ಮುಂಗಡ ತೆರಿಗೆ) ಪಾವತಿ

ಕರ್ಣಾಟಕ ಬ್ಯಾಂಕ್ ತನ್ನ ಗ್ರಾಹಕರಿಗೆ ನೇರ ತೆರಿಗೆ (ಆದಾಯ ತೆರಿಗೆ/ಮುಂಗಡ ತೆರಿಗೆ) ಪಾವತಿ ಸೌಲಭ್ಯವನ್ನು ಒದಗಿಸಿದೆ. ಕರ್ಣಾಟಕ ಬ್ಯಾಂಕ್ ಮೂಲಕ ಗ್ರಾಹಕರು ಈಗಾಗಲೇ ಬ್ಯಾಂಕ್ ಕೌಂಟರ್ ಮೂಲಕ ನಗದು (ಕ್ಯಾಶ್)/ ವರ್ಗಾವಣೆ (ಟ್ರಾನ್ಸ್ಫರ್)/ ಕ್ಲಿಯರಿಂಗ್ ವಿಧಾನಗಳಲ್ಲಿ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ (CBIC)ನ ನಿರ್ದೇಶನದಂತೆ ಜಿಎಸ್‌ಟಿ ಪಾವತಿಸಬಹುದಾಗಿದೆ.
02:24 PM Dec 27, 2023 IST | Gayathri SG
ಕರ್ಣಾಟಕ ಬ್ಯಾಂಕ್ ಮೂಲಕ ನೇರ ತೆರಿಗೆ ಆದಾಯ ತೆರಿಗೆ ಮುಂಗಡ ತೆರಿಗೆ  ಪಾವತಿ

ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ಗ್ರಾಹಕರಿಗೆ ನೇರ ತೆರಿಗೆ (ಆದಾಯ ತೆರಿಗೆ/ಮುಂಗಡ ತೆರಿಗೆ) ಪಾವತಿ ಸೌಲಭ್ಯವನ್ನು ಒದಗಿಸಿದೆ. ಕರ್ಣಾಟಕ ಬ್ಯಾಂಕ್ ಮೂಲಕ ಗ್ರಾಹಕರು ಈಗಾಗಲೇ ಬ್ಯಾಂಕ್ ಕೌಂಟರ್ ಮೂಲಕ ನಗದು (ಕ್ಯಾಶ್)/ ವರ್ಗಾವಣೆ (ಟ್ರಾನ್ಸ್ಫರ್)/ ಕ್ಲಿಯರಿಂಗ್ ವಿಧಾನಗಳಲ್ಲಿ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ (CBIC)ನ ನಿರ್ದೇಶನದಂತೆ ಜಿಎಸ್‌ಟಿ ಪಾವತಿಸಬಹುದಾಗಿದೆ.

Advertisement

ಕರ್ಣಾಟಕ ಬ್ಯಾಂಕ್ ಮೂಲಕ ಭಾರತೀಯ ಕಸ್ಟಮ್ಸ್ ತೆರಿಗೆ ಪಾವತಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಅನುಮತಿ ನೀಡಿದೆ. ಸಿಬಿಡಿಟಿ ಹಾಗೂ ಸಿಬಿಐಸಿ ಪರವಾಗಿ ಪ್ರತ್ಯಕ್ಷ ತೆರಿಗೆ ಹಾಗೂ ಪರೋಕ್ಷ ತೆರಿಗೆ ಪಾವತಿಗೆ ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (ಸಿಜಿಎ) ಹಾಗೂ ಕೇಂದ್ರ ಹಣಕಾಸು ಸಚಿವಾಲಯ ಶಿಫಾರಸ್ಸು ಮಾಡಿದೆ. ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ (CBIC) ಕೇಂದ್ರ ಮಂಡಳಿಯ ICEGATE (ಐಸಿಇಗೇಟ್) ಪೋರ್ಟಲ್‌ನಲ್ಲಿ ‘ಕರ್ಣಾಟಕ ಬ್ಯಾಂಕ್' ಅನ್ನು ಆಯ್ಕೆ ಮಾಡುವ ಮೂಲಕ ಬ್ಯಾಂಕ್ ಗ್ರಾಹಕರು ಈಗಾಗಲೇ ಎಲೆಕ್ಟ್ರಾನಿಕ್ ಕ್ಯಾಶ್ ಲೆಡ್ಜರ್ (ಇಅಐ) ಅಡಿಯಲ್ಲಿ ಆನ್‌ಲೈನ್ ಮೂಲಕ ಕಸ್ಟಮ್ ಡ್ಯೂಟಿ ಪಾವತಿಗಳನ್ನು ಅತಿ ಸುಲಭವಾಗಿ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಎಂಡಿ ಮತ್ತು ಸಿಇಓ ಶ್ರಿಕೃಷ್ಣನ್ ಹೆಚ್, "ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನಿಂದ ಏಜೆನ್ಸಿ ಬ್ಯಾಂಕ್ ಆಗಿ ನೇಮಕಗೊಂಡ ನಂತರ, ಕರ್ಣಾಟಕ ಬ್ಯಾಂಕ್ ಸರ್ಕಾರಿ ವ್ಯವಹಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಬ್ಯಾಂಕ್ ಈಗ ನೇರ ತೆರಿಗೆಗಳ (ಆದಾಯ ತೆರಿಗೆ/ಮುಂಗಡ ತೆರಿಗೆ) ಸಂಗ್ರಹಗಳನ್ನು ಔಪಚಾರಿಕವಾಗಿ ಪ್ರಾರಂಭಿಸಿದೆ. ಇದರ ಮೂಲಕ ನಮ್ಮ ಎಲ್ಲಾ ಗ್ರಾಹಕರು ತಮ್ಮ ಅನುಕೂಲಕ್ಕಾಗಿ ಇಂಟರ್ನೆಟ್ ಬ್ಯಾಂಕಿಂಗ್ಗ್ ಸೌಲಭ್ಯದ ಮೂಲಕ ಅಥವಾ ಬ್ಯಾಂಕ್ ಕೌಂಟರ್ ಮೂಲಕ ನಗದು (ಕ್ಯಾಶ್)/ ವರ್ಗಾವಣೆ (ಟ್ರಾನ್ಸ್ಫರ್)/ ಕ್ಲಿಯರಿಂಗ್ ವಿಧಾನಗಳಲ್ಲಿ ನೇರ ತೆರಿಗೆಗಳನ್ನು (ಆದಾಯ ತೆರಿಗೆ/ಮುಂಗಡ ತೆರಿಗೆ) ಪಾವತಿಸಬಹುದು. ಇದು ಸರ್ಕಾರದ ವ್ಯವಹಾರವನ್ನು ನಡೆಸುವ ನಮ್ಮ ಪ್ರಯಾಣದ ಪ್ರಾರಂಭವಾಗಿದೆ, ಇದು ಇತರ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ ನಮ್ಮ ಡಿಜಿಟಲ್ ಭಾಗವಹಿಸುವಿಕೆ ಮತ್ತು ಹೊಸದಾಗಿ ಅಭಿವೃದ್ಧಿಪಡಿಸಿದ OCEN ಮತ್ತು ONDC ಪ್ಲಾಟ್‌ಫಾರ್ಮ್ಗಳಿಗೆ ವಿಸ್ತರಿಸುತ್ತದೆ" ಎಂದು ನುಡಿದರು.

Advertisement

ಸೌಲಭ್ಯದ ಬಿಡುಗಡೆಯ ಕುರಿತು ಮಾತನಾಡಿದ ಬ್ಯಾಂಕ್‌ನ ಎಕ್ಸೆಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ "ಈ ಉಪಕ್ರಮವು ನಮ್ಮ ಗ್ರಾಹಕರಿಗೆ ತಡೆರಹಿತ ಮತ್ತು ಅನುಕೂಲಕರ ಆರ್ಥಿಕ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಬ್ಯಾಂಕಿನ ಮೂಲಕ ಆದಾಯ ತೆರಿಗೆ ಪಾವತಿ ವ್ಯವಸ್ಥೆ ಕಲ್ಪಿಸಿರುವುದು ಗಮನಾರ್ಹ ಮೈಲಿಗಲ್ಲು. ಗ್ರಾಹಕರಿಗೆ ಇದು ಉತ್ತಮ ಅನುಭವ ನೀಡಲಿದೆ. ನಮ್ಮ ಗ್ರಾಹಕರಿಗೆ ಬ್ಯಾಂಕಿನ ಇಂತಹ ಅನೇಕ ಡಿಜಿಟಲ್ ಸೌಲಭ್ಯಗಳು ಅನುಕೂಲವಾಗಲಿದೆ" ಎಂದು ನುಡಿದರು.

Advertisement
Tags :
Advertisement