For the best experience, open
https://m.newskannada.com
on your mobile browser.
Advertisement

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೊತೆಗಿನ ಒಪ್ಪಂದ ಕಡಿದುಕೊಂಡ ಪೇಟಿಎಂ !

ಪೇಟಿಎಂ ಹಾಗೂ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಮಾತೃಸಂಸ್ಥೆ ಒನ್ 97 ಕಮ್ಯೂನಿಕೇಷನ್ ಲಿಮಿಟೆಡ್ ವಿವಿಧ ಅಂತರ-ಕಂಪನಿ ಒಪ್ಪಂದಗಳನ್ನು ಸ್ಥಗಿತಗೊಳಿಸೋದಾಗಿ ಇಂದು(ಮಾ.01) ಮಾಹಿತಿ ನೀಡಿದೆ.
03:58 PM Mar 01, 2024 IST | Ashitha S
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೊತೆಗಿನ ಒಪ್ಪಂದ ಕಡಿದುಕೊಂಡ ಪೇಟಿಎಂ

ನವದೆಹಲಿ: ಪೇಟಿಎಂ ಹಾಗೂ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಮಾತೃಸಂಸ್ಥೆ ಒನ್ 97 ಕಮ್ಯೂನಿಕೇಷನ್ ಲಿಮಿಟೆಡ್ ವಿವಿಧ ಅಂತರ-ಕಂಪನಿ ಒಪ್ಪಂದಗಳನ್ನು ಸ್ಥಗಿತಗೊಳಿಸೋದಾಗಿ ಇಂದು(ಮಾ.01) ಮಾಹಿತಿ ನೀಡಿದೆ.

Advertisement

ಇದರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೊತೆಗಿನ ಒಪ್ಪಂದವನ್ನು ಪೇಟಿಎಂ ಕಡಿದುಕೊಂಡಿದೆ. ಪೇಟಿಎಂ ಪಾವತಿ ಆಪ್ ಬಳಕೆದಾರರನ್ನು ಉಳಿಸಿಕೊಳ್ಳಲು ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆಯಿದೆ. ಬಾಂಬೈ ಸ್ಟಾಕ್ ಎಕ್ಸ್ ಚೇಂಜ್ ಫೈಲ್ಲಿಂಗ್ ನಲ್ಲಿ ಕಂಪನಿ ಈ ವಿಚಾರ ತಿಳಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು.

ಅಲ್ಲದೆ, ಮಾ.15ರ ನಂತರ ಗ್ರಾಹಕರ ಖಾತೆಗಳು ಹಾಗೂ ವ್ಯಾಲೆಟ್‌ಗಳಿಗೆ ಹಣ ಸ್ವೀಕರಿಸದಂತೆ, ಹೊಸ ಖಾತೆ ಅಥವಾ ಹೊಸ ಠೇವಣಿ ಪ್ರಾರಂಭಿಸದಂತೆ ಪೇಟಿಎಂ ಬ್ಯಾಂಕ್‌ಗೆ ನಿರ್ಬಂಧ ಹೇರಿದೆ. ಇನ್ನೂ ಕೆಲವು ತಿಂಗಳುಗಳ ಕಾಲ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಆರ್ ಬಿಐ ನಿಗಾದಲ್ಲೇ ಇರಲಿದೆ.

Advertisement

ಹೀಗಾಗಿ ಕಂಪನಿ ಪೇಟಿಎಂ ವ್ಯಾಲೆಟ್ ನ ಕಾರ್ಯನಿರ್ವಹಣೆ ಮೇಲೆ ಇದು ಯಾವುದೇ ಪರಿಣಾಮ ಬೀರದಂತೆ ತಡೆಯಲು ಇವೆರಡರ ನಡುವಿನ ಸಂಪರ್ಕ ಕಡಿತಕ್ಕೆ ಮುಂದಾಗಿದೆ. ಅಲ್ಲದೆ, ಇತರ ಬ್ಯಾಂಕ್ ಗಳ ಜೊತೆಗೆ ಹೊಸ ಒಪ್ಪಂದಕ್ಕೆ ಸಹಿ ಹಾಕುವ ಜೊತೆಗೆ ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಅಡಚಣೆರಹಿತ ವಹಿವಾಟುಗಳನ್ನು ಒದಗಿಸೋದಾಗಿ ಕಂಪನಿ ಈ ಹಿಂದೆಯೇ ಮಾಹಿತಿ ನೀಡಿತ್ತು.

'ಅವಲಂಬನೆ ತಗ್ಗಿಸುವ ಪ್ರಕ್ರಿಯೆಯ ಭಾಗವಾಗಿ ಪೇಟಿಎಂ ಹಾಗೂ ಪಿಪಿಬಿಎಲ್ ನಡುವಿನ  ವಿವಿಧ ಅಂತರ ಕಂಪನಿ ಒಪ್ಪಂದಗಳನ್ನು ಸ್ಥಗಿತಗೊಳಿಸುವ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ ಎಂದು ಬಿಎಸ್ ಇ ಫೈಲ್ಲಿಂಗ್ ನಲ್ಲಿ ಒನ್ 97 ಕಮ್ಯೂನಿಕೇಷನ್ ಲಿಮಿಟೆಡ್ ತಿಳಿಸಿದೆ.

ಇನ್ನು ಪೇಟಿಎಂ ಆಪ್, ಪೇಟಿಎಂ ಸೌಂಡ್ ಬಾಕ್ಸ್, ಪೇಟಿಎಂ ಕ್ಯುಆರ್ ಹಾಗೂ ಪೇಟಿಎಂ ಕಾರ್ಡ್ ಮಷಿನ್ ಗಳು ಮಾರ್ಚ್ 15ರ ಬಳಿಕವೂ ಕಾರ್ಯನಿರ್ವಹಿಸಲಿವೆ. ಈ ಬಗ್ಗೆ ಈಗಾಗಲೇ ಆರ್ ಬಿಐ ಕೂಡ ಸ್ಪಷ್ಟನೆ ನೀಡಿದೆ.

Advertisement
Tags :
Advertisement