ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

1,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ ಪೇಟಿಎಂ

ಪೇಟಿಎಂನ ಮಾತೃ ಸಂಸ್ಥೆ ಒನ್ 97 ಕಮ್ಯೂನಿಕೇಶನ್ಸ್ ತನ್ನ 1,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿ ಆಗಿದೆ.
01:25 PM Dec 25, 2023 IST | Ashika S

ಬೆಂಗಳೂರು: ಪೇಟಿಎಂನ ಮಾತೃ ಸಂಸ್ಥೆ ಒನ್ 97 ಕಮ್ಯೂನಿಕೇಶನ್ಸ್ ತನ್ನ 1,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿ ಮಾಡಿದೆ.

Advertisement

ಶೇಕಡಾವಾರು ಲೆಕ್ಕದಲ್ಲಿ ಶೇ. 10ಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಕಳೆದ ಕೆಲ ತಿಂಗಳುಗಳಾದ್ಯಂತ ಈ ಲೇ ಆಫ್  ಪ್ರಕ್ರಿಯೆ ನಡೆದಿರುವುದು ತಿಳಿದು ಬಂದಿದೆ.

ಪೇಟಿಎಂನ ಕಾರ್ಯಾಚರಣೆಗಳ ಮರುರಚನೆ ಮಾಡಲು ಮತ್ತು ವೆಚ್ಚ ಕಡಿತ ಮಾಡಲು ಒನ್ 97 ಕಮ್ಯೂನಿಕೇಶನ್ಸ್ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ವರ್ಷ ಭಾರತದ ಟೆಕ್ ಕಂಪನಿಯೊಂದು ಮಾಡಿದ ಅತಿದೊಡ್ಡ ಲೇ ಆಫ್​ಗಳ ಪೈಕಿ  ಪೇಟಿಎಂನದ್ದೂ ಒಂದು.

Advertisement

ಕಳೆದ ಕೆಲ ತಿಂಗಳುಗಳಲ್ಲಿ ಶೇ. 10ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ಲೇ ಆಫ್ ಮಾಡಿದೆಯದರೂ, ಸೇಲ್ಸ್ ವಿಭಾಗದಲ್ಲಿ 50,000ಕ್ಕೂ ಹೆಚ್ಚು ಮಂದಿಯನ್ನು ನೇಮಕಾತಿ ಮಾಡುವ ಉದ್ದೇಶವನ್ನು ಪೇಟಿಎಂ ವಾರದ ಹಿಂದಷ್ಟೇ ವ್ಯಕ್ತಪಡಿಸಿತ್ತು.

ಸಣ್ಣ ನಗರ ಮತ್ತು ಪಟ್ಟಣಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವರ್ತಕರನ್ನು ಪೇಟಿಎಂ ವ್ಯಾಪ್ತಿಗೆ ತರಲು ಈ ಬೃಹತ್ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಲಾಗುತ್ತಿದೆ.

Advertisement
Tags :
LatetsNewsNewsKannadaಉದ್ಯೋಗಿಎಕನಾಮಿಕ್ ಟೈಮ್ಸ್ಒನ್ 97 ಕಮ್ಯೂನಿಕೇಶನ್ಸ್ಪತ್ರಿಕೆಪೇಟಿಎಂಮಾತೃ ಸಂಸ್ಥೆ
Advertisement
Next Article