For the best experience, open
https://m.newskannada.com
on your mobile browser.
Advertisement

ಪೇಟಿಯಂ ಬಳಕೆದಾರರ ಗಮನಕ್ಕೆ: ಇಂದಿನಿಂದ ಈ ಸೇವೆಗಳು ಸ್ಥಗಿತ

ಪೇಟಿಯಂ ಪೇಮೆಂಟ್​​ ಬ್ಯಾಂಕ್​ ಲಿಮಿಡೆಟ್​​ ಇಂದಿನಿಂದ ಪ್ರಮುಖ ಸೇವೆಯನ್ನು ನಿಲ್ಲಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್​ ನಿಯಮಾನುಸಾರ ನಿಯಮ ಉಲ್ಲಂಘಿಸಿದ್ದ ಕಾರಣ ಡಿಜಿಟಲ್​ ಪೇಮೆಂಟ್​ ಆ್ಯಪ್​ ತನ್ನ ಸೇವೆಯನ್ನು ಕೊನೆಗೊಳಿಸುತ್ತಾ ಬರುತ್ತಿದೆ. ಅಂದಹಾಗೆಯೇ ಸದ್ಯ ಪೇಟಿಯಂನಲ್ಲಿ ಕೆವೊಂದು ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಗಮನಿಸಬೇಕಿದೆ.
12:41 PM Mar 15, 2024 IST | Ashitha S
ಪೇಟಿಯಂ ಬಳಕೆದಾರರ ಗಮನಕ್ಕೆ  ಇಂದಿನಿಂದ ಈ ಸೇವೆಗಳು ಸ್ಥಗಿತ

ದೆಹಲಿ: ಪೇಟಿಯಂ ಪೇಮೆಂಟ್​​ ಬ್ಯಾಂಕ್​ ಲಿಮಿಡೆಟ್​​ ಇಂದಿನಿಂದ ಪ್ರಮುಖ ಸೇವೆಯನ್ನು ನಿಲ್ಲಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್​ ನಿಯಮಾನುಸಾರ ನಿಯಮ ಉಲ್ಲಂಘಿಸಿದ್ದ ಕಾರಣ ಡಿಜಿಟಲ್​ ಪೇಮೆಂಟ್​ ಆ್ಯಪ್​ ತನ್ನ ಸೇವೆಯನ್ನು ಕೊನೆಗೊಳಿಸುತ್ತಾ ಬರುತ್ತಿದೆ. ಅಂದಹಾಗೆಯೇ ಸದ್ಯ ಪೇಟಿಯಂನಲ್ಲಿ ಕೆವೊಂದು ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಗಮನಿಸಬೇಕಿದೆ.

Advertisement

ಇನ್ಮುಂದೆ ಪೇಟಿಯಂ ಪೇಮೆಂಟ್​ ಗ್ರಾಹಕರು ಇನ್ಮುಂದೆ ತಮ್ಮ ಖಾತೆಗಳಿಗೆ ಹಣವನ್ನು ಠೇವಣಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಹಣ ಹಿಂಪಡೆಯಬಹುದು ಮತ್ತು ವರ್ಗಾಯಿಸಬಹುದು.
ಪೇಟಿಯಂ ಮೂಲಕ ನೇರ ಲಾಭ ವರ್ಗಾವಣೆ, ಸಬ್ಸಿಡಿ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ಪಾಲುದಾರ ಬ್ಯಾಂಕ್​ಗಳಿಂದ ಮರುಪಾವತಿ, ಕ್ಯಾಶ್​ಬ್ಯಾಕ್​ ಪಡೆಯಬಗಹುದು.
ಪೇಟಿಯಂ ವ್ಯಾಲೆಟ್​​ನಿಂದ ಹಣ ವರ್ಗಾಯಿಸಲು ಸಾಧ್ಯವಾಗದು. ಆದರೆ ಬಿಲ್​ ಪಾಪತಿಸಲು ವ್ಯಾಲೆಟ್​ನಲ್ಲಿದ್ದ ಹಣವನ್ನು ಬಳಸಬಹುದು.
ಪೇಟಿಯಂ ಬ್ಯಾಂಕ್​ ನೀಡಿದ ಫಾಸ್ಟ್​ಟ್ಯಾಗ್​ ರೀಚಾರ್ಜ್​ ಮಾಡಲು ಆಗುವುದಿಲ್ಲ.
NCMC ಕಾರ್ಡ್​ (ನ್ಯಾಷನಲ್​ ಕಾಮನ್​ ಮೊಬಿಲಿಟಿ ಕಾರ್ಡ್​) ರೀಚಾರ್ಜ್​ ಮಾಡಲು ಸಾಧ್ಯವಾಗುವುದಿಲ್ಲ.
ಯುಪಿಐ ಅಥವಾ ಐಎಮ್​ಪಿಎಸ್​ ಮೂಲಕ ಹಣ ವರ್ಗಾಯಿಸಲು ಸಾಧ್ಯವಾಗುವುದಿಲ್ಲ.
ಚಂದಾದಾರಿಕೆಗಳಿಗೆ ಪಾವತಿಸಲು ಪೇಟಿಯಂ ಬ್ಯಾಲೆನ್ಸ್​ ಅನ್ನು ಬಳಸಬಹುದಾಗಿದೆ. ಆದರೆ ಮಾರ್ಚ್​ 15ರಿಂದ ಬೇರೆ ಬ್ಯಾಂಕ್​ ಖಾತೆ ಬಳಸಬೇಕಾಗುತ್ತದೆ.

Advertisement

Advertisement
Tags :
Advertisement