ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

60 ದಿನಗಳ ಬಳಿಕ ಅಯೋಧ್ಯೆಯಿಂದ ಆಗಮಿಸಿದ ಪೇಜಾವರ ಶ್ರೀಗಳಿಗೆ ಭವ್ಯ ಸ್ವಾಗತ

ಅಯೋಧ್ಯೆಯ ರಾಮ ದೇವರಿಗೆ ಸ್ವತಃ ತಾವೇ ಪ್ರಾಣ ಪ್ರತಿಷ್ಠೆ ನಡೆಸಿ ಮುಂದಿನ 48 ದಿನಗಳ ಕಾಲ ಮಂಡಲ ಪೂಜೆ ಪೂರೈಸಿರುವ ಪೇಜಾವರ ಶ್ರೀಗಳನ್ನು ಬೆಂಗಳೂರು ಮಠಕ್ಕೆ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು.
12:17 PM Mar 16, 2024 IST | Nisarga K
60 ದಿನಗಳ ಬಳಿಕ ಅಯೋಧ್ಯೆಯಿಂದ ಆಗಮಿಸಿದ ಪೇಜಾವರ ಶ್ರೀಗಳಿಗೆ ಭವ್ಯ ಸ್ವಾಗತ

ಉಡುಪಿ: ಅಯೋಧ್ಯೆಯ ರಾಮ ದೇವರಿಗೆ ಸ್ವತಃ ತಾವೇ ಪ್ರಾಣ ಪ್ರತಿಷ್ಠೆ ನಡೆಸಿ ಮುಂದಿನ 48 ದಿನಗಳ ಕಾಲ ಮಂಡಲ ಪೂಜೆ ಪೂರೈಸಿರುವ ಪೇಜಾವರ ಶ್ರೀಗಳನ್ನು ಬೆಂಗಳೂರು ಮಠಕ್ಕೆ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು.

Advertisement

ನಗರದ ಪ್ರಮುಖ ರಸ್ತೆಯಲ್ಲಿ ಬೈಕ್ ರ‌್ಯಾಲಿ ಮೂಲಕ ಸ್ವಾಗತಿಸಲಾಯಿತು. ಬಳಿಕ ಪೇಜಾವರ ಮಠದ ವಿದ್ಯಾಪೀಠದಲ್ಲಿ ಅಭಿನಂದನಾ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ನ್ಯಾಯಮೂರ್ತಿ ದಿನೇಶ್ ಕುಮಾರ್, ರವಿ ಸುಬ್ರಮಣ್ಯ, ಅರವಿಂದ ಲಿಂಬಾವಳಿ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.

ಸಾಂಸ್ಕೃತಿಕ ಪುನರುತ್ಥಾನದ ಪ್ರತೀಕವಾಗಿ ಐದು ಶತಮಾನದ ಬಳಿಕ ರಾಮಮಂದಿರ ನಿರ್ಮಾಣವಾಗಿದೆ. ಹಿರಿಯ ಪೇಜಾವರ ಶ್ರೀಗಳಾದ ಶ್ರೀ ವಿಶ್ವೇಶ ತೀರ್ಥರಿಂದ ರಾಮಲಲ್ಲಾನ ಮೂರ್ತಿ ಸ್ಥಾಪಿಸಲ್ಪಟ್ಟಿದ್ದು, ಇದೀಗ ನೂತನ ಭವ್ಯ ವಿಗ್ರಹಕ್ಕೆ ಶ್ರೀ ವಿಶ್ವ ಪ್ರಸನ್ನತೀರ್ಥರಿಂದ ಪ್ರಾಣ ಪ್ರತಿಷ್ಠೆ ನಡೆದಿರುವುದು ಐತಿಹಾಸಿಕವಾಗಿದೆ ಎಂದು ಗಣ್ಯರು ಶ್ರೀಗಳನ್ನು ಅಭಿನಂದಿಸಿದರು. 60 ದಿನಗಳ ಬಳಿಕ ವಿಶ್ವೇಶ ತೀರ್ಥರ ವೃಂದಾವನಕ್ಕೆ ಭೇಟಿಕೊಟ್ಟು ವಿಶ್ವ ಪ್ರಸನ್ನತೀರ್ಥರು ಪೂಜೆ ನಡೆಸಿದರು

Advertisement

Advertisement
Tags :
AYODYANewsKannadaPEJAVARA SWAMIJIRETURNTEMPLEUDUPIWELCOME
Advertisement
Next Article