ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಾಹನ ಸವಾರೆ ಗಮನಿಸಿ: ನಂಬರ್ ಪ್ಲೇಟ್ ಇಲ್ಲದಿದ್ರೆ ದಂಡ!

ಕರ್ನಾಟಕದ ಸಾರಿಗೆ ಇಲಾಖೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಿದೆ. 
12:22 PM Jan 29, 2024 IST | Ramya Bolantoor

ಬೆಂಗಳೂರು: ಕರ್ನಾಟಕದ ಸಾರಿಗೆ ಇಲಾಖೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಿದೆ.  ಅಳವಡಿಸಲು ನಿಗದಿ ಪಡಿಸಲಾಗಿದ್ದ ಗಡುವು ಸಮೀಪಿಸುತ್ತಿದ್ದರೂ ನಂಬರ್ ಪ್ಲೇಟ್ ಬದಲಾವಣೆಗೆ ವಾಹನ ಮಾಲೀಕರು  ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸಲು ನಿರ್ಧರಿಸಿ  ದಂಡ ವಿಧಿಸಲು ಮುಂದಾಗಿದೆ.

Advertisement

ನಿಗದಿಪಡಿಸಿರುವ ಗಡುವು ಅಂತ್ಯವಾಗಲು ಇನ್ನು 21 ದಿನಗಳಷ್ಟೇ ಬಾಕಿ ಉಳಿದಿವೆ. ಆದರೆ, ಈವರೆಗೆ ಬರೀ 10 ಲಕ್ಷ ವಾಹನಗಳಿಗಷ್ಟೇ ಎಚ್​ಎಸ್​ಆರ್​ಪಿ ಹಾಕಿಸಲಾಗಿದೆ. ಸಾರಿಗೆ ಇಲಾಖೆ ಹಾಗೂ ಸಂಚಾರ ಪೊಲೀಸರು ಜಂಟಿಯಾಗಿ ದಂಡ ವಿಧಿಸಲಾಗುತ್ತದೆ. ಮೊದಲನೆ ಬಾರಿ ಸಿಕ್ಕಿಬಿದ್ದರೆ 1000 ರೂ. ಹಾಗೂ 2ನೇ ಬಾರಿ ಸಿಕ್ಕಿಬಿದ್ದರೆ 2000 ರೂ. ದಂಡ ಹಾಕಲು ಕಾನೂನಿನಲ್ಲಿ ಅವಕಾಶ ಇದೆ.

ಹೀಗಾಗಿ ಫೆ.17ರ ಒಳಗೆ ಹಳೇ ವಾಹನಗಳಿಗೆ ನಿಯಮದಂತೆ ಎಚ್​ಎಸ್​ಆರ್​ಪಿ ಅಳವಡಿಸಿಕೊಂಡು ದಂಡ ಕಟ್ಟುವುದರಿಂದ ಬಚಾವಾಗಿ ಎಂದು ವಾಹನ ಮಾಲೀಕರಿಗೆ ಸಾರಿಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.  ಫೆ.17ಕ್ಕೆ ಎಚ್​ಎಸ್​ಆರ್​ಪಿ ಗಡುವು ಮುಗಿಯುತ್ತಿದೆ. ಅಷ್ಟರಲ್ಲಿ ಹಾಕಿಸಿ ಕೊಳ್ಳದಿದ್ದರೆ ಸಂಚಾರ ಪೊಲೀಸರು ಹಾಗೂ ಆರ್​ಟಿಒ ಅಧಿಕಾರಿಗಳು ಜಂಟಿಯಾಗಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.

Advertisement

Advertisement
Tags :
KARNATAKALatestNewsNewsKannada
Advertisement
Next Article