For the best experience, open
https://m.newskannada.com
on your mobile browser.
Advertisement

ರಾಮಮಂದಿರಕ್ಕೆ ಬಂದ ʼನಕಲಿ ಕೊಹ್ಲಿʼ ಜೊತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್

ಅಯೋಧ್ಯೆಯಲ್ಲಿ ಸೋಮವಾರ ನಡೆದ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭಕ್ಕೆ ವಿರಾಟ್ ಕೊಹ್ಲಿ ಗೈರಾಗಿದ್ದು, ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
03:05 PM Jan 23, 2024 IST | Ashitha S
ರಾಮಮಂದಿರಕ್ಕೆ ಬಂದ ʼನಕಲಿ ಕೊಹ್ಲಿʼ ಜೊತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್

ವದೆಹಲಿ: ಅಯೋಧ್ಯೆಯಲ್ಲಿ ಸೋಮವಾರ ನಡೆದ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭಕ್ಕೆ ವಿರಾಟ್ ಕೊಹ್ಲಿ ಗೈರಾಗಿದ್ದು, ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.

Advertisement

ಸಮಾರಂಭದಲ್ಲಿ ಭಾಗವಹಿಸದ ಆಹ್ವಾನಿತರಲ್ಲಿ ವಿರಾಟ್ ಕೊಹ್ಲಿ ಕೂಡ ಇದ್ದರು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಕೊಹ್ಲಿ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿಯುವ ಸುದ್ದಿ ಬಂದ ಕೂಡಲೇ, ವೈಯಕ್ತಿಕ ಸಮಸ್ಯೆಗಳಿಂದಾಗಿ ಅವರು ಸಮಾರಂಭಕ್ಕೆ ಗೈರು ಹಾಜರಾಗಿದ್ದಾರೆ.

‘ಪ್ರಾಣ ಪ್ರತಿಷ್ಠಾ’ ಸಮಾರಂಭವನ್ನು ವೀಕ್ಷಿಸಲು ಕೊಹ್ಲಿ ಅಯೋಧ್ಯೆಗೆ ತಲುಪದಿದ್ದರೂ, ಡೂಪ್ಲಿಕೇಟ್ ಕೊಹ್ಲಿ ಆಗಮನವು ಅಭಿಮಾನಿಗಳಿಗೆ ಸಮಾಧಾನವನ್ನು ನೀಡಿತು. ಡುಪ್ಲಿಕೇಟ್ ಕೊಹ್ಲಿ. ಭಾರತದ ವೈಟ್ ಬಾಲ್ ಕ್ರಿಕೆಟ್ ಜರ್ಸಿಯನ್ನು ಧರಿಸಿದ್ದರು. ಪಿಯೂಷ್ ರೈ ಎಂಬುವವರು ಕೊಹ್ಲಿಯಂತೆ ಕಾಣಿಸಿಕೊಂಡು ಅಭಿಮಾನಿಗಳ ಗಮನ ಸೆಳೆದರು. ಮೊದಲು ವಿರಾಟ್ ಕೊಹ್ಲಿ ಅವರೇ ಬಂದರೂ ಎಂದು ಅಭಿಮಾನಿಗಳು ಅಂದುಕೊಂಡು ಅವರನ್ನು ಸುತ್ತುವರೆದು ಸೆಲ್ಪಿಗೆ ಮುಗಿಬಿದ್ದರು. ಸದ್ಯ ಈ ವಿಡಿಯೋ ವೈರಲ್‌ ಆಗಿದೆ.

Advertisement

Advertisement
Tags :
Advertisement