For the best experience, open
https://m.newskannada.com
on your mobile browser.
Advertisement

ಬಿಸಿಲಿನ ಶಾಖಕ್ಕೆ ಕುಸಿದು ಬಿದ್ದ ವ್ಯಕ್ತಿ ಸಾವು

ಈ ಬಾರಿಯ ಬಿಸಿಲಿನ ಶಾಖಕ್ಕೆ ಜನರು ಕಂಗೆಟ್ಟು ಹೋಗಿದ್ದಾರೆ. ಬಿಸಿಲಿನ ಧಗೆಗೆ ಹೊರಗೆ ಕಾಲಿಡದಂತ ಪರಿಸ್ಥಿತಿ ಬಂದೊದಗಿದೆ ಆದರೂ ಕೆಲವರು ಶಾಖ ತಾಳಲಾರದೆ ಬಲಿಯಾಗುತ್ತಿದ್ದಾರೆ.
03:58 PM May 01, 2024 IST | Nisarga K
ಬಿಸಿಲಿನ ಶಾಖಕ್ಕೆ ಕುಸಿದು ಬಿದ್ದ ವ್ಯಕ್ತಿ ಸಾವು
ಬಿಸಿಲಿನ ಶಾಖಕ್ಕೆ ಕುಸಿದು ಬಿದ್ದ ವ್ಯಕ್ತಿ ಸಾವು

ಉಡುಪಿ: ಈ ಬಾರಿಯ ಬಿಸಿಲಿನ ಶಾಖಕ್ಕೆ ಜನರು ಕಂಗೆಟ್ಟು ಹೋಗಿದ್ದಾರೆ. ಬಿಸಿಲಿನ ಧಗೆಗೆ ಹೊರಗೆ ಕಾಲಿಡದಂತ ಪರಿಸ್ಥಿತಿ ಬಂದೊದಗಿದೆ ಆದರೂ ಕೆಲವರು ಶಾಖ ತಾಳಲಾರದೆ ಬಲಿಯಾಗುತ್ತಿದ್ದಾರೆ.

Advertisement

ಈ ಮಧ್ಯೆ ಉಡುಪಿ ನಗರದ ಸಿಟಿ ಬಸ್ ನಿಲ್ದಾಣದ ಬಳಿ ಯುವಕನೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಮೃತರನ್ನು ಬದಿಯಪ್ಪ (37) ಎಂದು ಗುರುತಿಸಲಾಗಿದೆ. ವಿಪರೀತ ಸೆಖೆಯಿಂದ ಬದಿಯಪ್ಪ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಅವರನ್ನು ತಕ್ಷಣವೇ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದಾಗ್ಯೂ, ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Advertisement
Tags :
Advertisement