For the best experience, open
https://m.newskannada.com
on your mobile browser.
Advertisement

ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಪೆಟ್ರೋಲ್ ಬಂಕ್ ಸಿಬ್ಬಂದಿ ಕಾರ್ ಗೆ ಪೆಟ್ರೋಲ್ ತುಂಬಿಸುವ ಬದಲು ಡೀಸೆಲ್ ತುಂಬಿಸಿದ ಪರಿಣಾಮ ಕಾರ್ ಎಂಜಿನ್ ಸಂಪೂರ್ಣ ಸೀಜ್ ಆಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಹಾಗಿದ್ದೂ ಪೆಟ್ರೋಲ್ ಪಂಪ್ ಮಾಲಕರು ನಷ್ಟ ತುಂಬಿಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೋಟೆಲ್ ಉದ್ಯಮಿ ಜೀವನ್ ಶೆಟ್ಟಿ ಆರೋಪಿಸಿದ್ದಾರೆ.
05:33 PM Apr 18, 2024 IST | Ashitha S
ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ಮಂಗಳೂರು: ಪೆಟ್ರೋಲ್ ಬಂಕ್ ಸಿಬ್ಬಂದಿ ಕಾರ್ ಗೆ ಪೆಟ್ರೋಲ್ ತುಂಬಿಸುವ ಬದಲು ಡೀಸೆಲ್ ತುಂಬಿಸಿದ ಪರಿಣಾಮ ಕಾರ್ ಎಂಜಿನ್ ಸಂಪೂರ್ಣ ಸೀಜ್ ಆಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಹಾಗಿದ್ದೂ ಪೆಟ್ರೋಲ್ ಪಂಪ್ ಮಾಲಕರು ನಷ್ಟ ತುಂಬಿಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೋಟೆಲ್ ಉದ್ಯಮಿ ಜೀವನ್ ಶೆಟ್ಟಿ ಆರೋಪಿಸಿದ್ದಾರೆ.

Advertisement

Car
ಬಲ್ಮಠದ ಜ್ಯೂಸ್ ಜಂಕ್ಷನ್ ಎದುರಿನ ಹೆಚ್ ಪಿ ಪೆಟ್ರೋಲ್ ಪಂಪ್ ನಲ್ಲಿ ಎ.5ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಜೀವನ್ ಶೆಟ್ಟಿ ಅವರು ತಮ್ಮ ಹುಂಡೈ ಐ 10 ಗ್ರ್ಯಾಂಡ್ ಕಾರ್ ಗೆ ಪೆಟ್ರೋಲ್ ತುಂಬಿಸಲು ಹೋಗಿದ್ದು ಈ ವೇಳೆ ಪೆಟ್ರೋಲ್ ಹಾಕುವಂತೆ ಹೇಳಿದ್ದಾರೆ. ಪೆಟ್ರೋಲ್ ಕ್ಯಾಪ್ ಮೇಲೆ ಪೆಟ್ರೋಲ್ ಎಂದು ಬರೆದಿದ್ದರೂ ಅಲ್ಲಿದ್ದ ಸಿಬ್ಬಂದಿ ಡೀಸೆಲ್ ತುಂಬಿಸಿದ್ದಾರೆ. ಇದರ ಪರಿಣಾಮ ಕೆಲವೇ ಕಿಮೀ ದೂರ ಹೋಗುವಷ್ಟರಲ್ಲಿ ಕಾರ್ ಬಂದ್ ಆಗಿದ್ದು ಪರಿಶೀಲನೆ ನಡೆಸಿದಾಗ ಪೆಟ್ರೋಲ್ ಬಂಕ್ ಸಿಬ್ಬಂದಿ ಡೀಸೆಲ್ ತುಂಬಿಸಿದ್ದು ಬೆಳಕಿಗೆ ಬಂದಿದೆ.

Car (1)

Advertisement

ಈ ಬಗ್ಗೆ ಪ್ರಶ್ನೆ ಮಾಡಿದಾಗ ಪೆಟ್ರೋಲ್ ಬಂಕ್ ಮೆನೇಜರ್ ಹಾರಿಕೆಯ ಉತ್ತರ ನೀಡಿದ್ದು ಇದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸಿದ್ದಾರೆ. ಎಂಜಿನ್ ಸಂಪೂರ್ಣ ಹಾಳಾಗಿದ್ದು ಸರಿಪಡಿಸಲು 2 ಲಕ್ಷಕ್ಕೂ ಹೆಚ್ಚು ಖರ್ಚು ತಗಲುತ್ತದೆ ಎಂದು ಕಾರ್ ಶೋರೂಮ್ ನಲ್ಲಿ ಹೇಳಿದ್ದಾರೆ. ಆದರೆ ಪೆಟ್ರೋಲ್ ಬಂಕ್ ಮಾಲಕರು 30 ಸಾವಿರ ಕೊಟ್ಟು ಸುಮ್ಮನಾಗಿದ್ದಾರೆ ಎಂದು ಜೀವನ್ ದೂರಿದ್ದಾರೆ.

A
ಪೆಟ್ರೋಲ್ ಬಂಕ್ ನಿಂದಾಗಿ ತಮ್ಮ ಕಾರ್ ಸಂಪೂರ್ಣ ಹಾಳಾಗಿದ್ದು 9 ಲಕ್ಷ ನಷ್ಟ ಉಂಟಾಗಿದೆ. ಜನ ವಾಹನವನ್ನು ಕಷ್ಟಪಟ್ಟು ಖರೀದಿ ಮಾಡುತ್ತಾರೆ. ಹೀಗಿರುವಾಗ ಕಡಿಮೆ ಸಂಬಳಕ್ಕೆ ಅನುಭವವಿಲ್ಲದ ಕಾರ್ಮಿಕರನ್ನು ನೇಮಿಸುವ ಬಂಕ್ ಮಾಲಕರು ಸಮಸ್ಯೆಯಾದಾಗ ತಮ್ಮ ಇನ್ಶೂರೆನ್ಸ್ ನಲ್ಲಿ ಪರಿಹಾರ ನೀಡುವ ಅವಕಾಶವಿದ್ದರೂ ತಮ್ಮ ತಪ್ಪೇ ಅಲ್ಲ ಎಂದುಕೊಂಡಿದ್ದಾರೆ. ಈ ಬಗ್ಗೆ ನಾಗರಿಕರು ಎಚ್ಚೆತ್ತುಕೊಳ್ಳಬೇಕು. ನಾನು ಪರಿಹಾರಕ್ಕಾಗಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Tags :
Advertisement