ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಫಿಲಿಪೈನ್ಸ್​ನಲ್ಲಿ ಭೂಕುಸಿತ: ಸಾವನ್ನಪ್ಪಿದವರ ಸಂಖ್ಯೆ 54 ಕ್ಕೆ ಏರಿಕೆ

ಫೆಬ್ರವರಿ 6 ರ ಸಂಜೆ ದಾವೊ ಡಿ ಓರೊ ಪ್ರಾಂತ್ಯದ ಪರ್ವತ ನಗರವಾದ ಮಾಕೊದಲ್ಲಿ ಭೂಕುಸಿತ ಸಂಭವಿಸಿತ್ತು. ಅನೇಕ ಮನೆಗಳು, ವಾಹನಗಳು ಮತ್ತು ಹತ್ತಾರು ಮಂದಿ ಸಾವನ್ನಪ್ಪಿದ್ದು, ಕನಿಷ್ಠ 32 ಜನರು ಗಾಯಗೊಂಡಿದ್ದಾರೆ ಎಂದು ಮ್ಯಾಕೋ ಟೌನ್ ವಿಪತ್ತು ತಡೆ ಕಚೇರಿ ತಿಳಿಸಿತ್ತು.
10:33 AM Feb 12, 2024 IST | Ashika S

ಫಿಲಿಪೈನ್ಸ್‌: ಫೆಬ್ರವರಿ 6 ರ ಸಂಜೆ ದಾವೊ ಡಿ ಓರೊ ಪ್ರಾಂತ್ಯದ ಪರ್ವತ ನಗರವಾದ ಮಾಕೊದಲ್ಲಿ ಭೂಕುಸಿತ ಸಂಭವಿಸಿತ್ತು. ಅನೇಕ ಮನೆಗಳು, ವಾಹನಗಳು ಮತ್ತು ಹತ್ತಾರು ಮಂದಿ ಸಾವನ್ನಪ್ಪಿದ್ದು, ಕನಿಷ್ಠ 32 ಜನರು ಗಾಯಗೊಂಡಿದ್ದಾರೆ ಎಂದು ಮ್ಯಾಕೋ ಟೌನ್ ವಿಪತ್ತು ತಡೆ ಕಚೇರಿ ತಿಳಿಸಿತ್ತು.

Advertisement

ಆದರೆ ಈಗ ಸಾವನ್ನಪ್ಪಿದವರ  ಸಂಖ್ಯೆ 54 ಕ್ಕೆ ಏರಿದೆ. ಕಾಣೆಯಾದ 63 ಮಂದಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಇದೇ ಸಮಯದಲ್ಲಿ ಫಿಲಿಪೈನ್ಸ್​ನಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ, ಅದು 10 ಕಿ.ಮೀ ಆಳದಲ್ಲಿತ್ತು. ಭೂಕಂಪದ ಕೇಂದ್ರ ಬಿಂದು ಭೂಕುಸಿತದ ಸ್ಥಳದಿಂದ ಉತ್ತರಕ್ಕೆ 150 ಕಿ.ಮೀ ದೂರದಲ್ಲಿದೆ. ಆರನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

Advertisement

ಮೈಕೊ ಪುರಸಭೆಯ ನಾಲ್ಕು ಗ್ರಾಮಗಳಲ್ಲಿ 1,347 ಕುಟುಂಬಗಳು ಅಥವಾ 5,431 ಜನರು ಭೂಕುಸಿತದಿಂದ ಪ್ರಭಾವಿತರಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ವರ್ಲ್ಡ್ ರಿಸ್ಕ್ ಇಂಡೆಕ್ಸ್ 2022 ಫಿಲಿಪೈನ್ಸ್ ವಿಶ್ವದ ಅತ್ಯಂತ ವಿಪತ್ತು-ಪೀಡಿತ ದೇಶಗಳಲ್ಲಿ ಮೊದಲ ಸ್ಥಾನದಲ್ಲಿದೆ.

Advertisement
Tags :
LatestNewsNewsKannadaದಾವೊ ಡಿ ಓರೊಪ್ರಾಂತ್ಯಭೂಕುಸಿತಮ್ಯಾಕೋ ಟೌನ್
Advertisement
Next Article